ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

ರಾಜಕೀಯ ಏರಿಳಿತಗಳ ಮಧ್ಯೆ ದೋಸ್ತಿ ಬಜೆಟ್ ಆರಂಭ| ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ| ಆರೋಗ್ಯ ಕ್ಷೇತ್ರಕ್ಕೆ ಭರಫೂರ ಕೊಡುಗೆ ನೀಡಿದ ಸಿಎಂ| ಆಯುಷ್ಮಾನ್ ಭಾರತ್ ಯೋಜನೆ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ| ಹೆಚ್ಚು ಜನರಿಗೆ ತಲುಪಿಸಲು ಕೇಂದ್ರದ ಆರೋಗ್ಯ ಯೋಜನೆ ಜೊತೆ ವಿಲೀನ| ಆರೋಗ್ಯ ಯೋಜನೆಗೆ ಸರ್ಕಾರದಿಂದಲೇ ಹೆಚ್ಚಿನ ವೆಚ್ಚ|

CM Kumarswamy Announce Many Projects For Health Sector

ಬೆಂಗಳೂರು(ಫೆ.08): ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ.

ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.

ಅದರಂತೆ ಆರೋಗ್ಯ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ನೀಡಿದ ಆದ್ಯತೆಯನ್ನು ಗಮನಿಸುವುದಾದರೆ...

1. ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಮಾಸಿಕ 6 ಸಾವಿರ ರೂ.
2. ನವೆಂಬರ್ 1, 2018ರಿಂದ ಮಾತೃಶ್ರೀ ಯೋಜನೆ ಜಾರಿಯಾಗಿದೆ.
3. ಆಯುಷ್ಮಾನ್​ ಭಾರತ್ ಯೋಜನೆ ಜೊತೆಗೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ.
4. ಆಯುಷ್ಮಾನ್​ ಭಾರತ್ ಯೋಜನೆಯಿಂದ ಕೇವಲ 62 ಲಕ್ಷ ಕುಟುಂಬಗಳಿಗಷ್ಟೇ ಲಾಭ.
5. ಹೆಚ್ಚು ಜನರಿಗೆ ತಲುಪಿಸಲು ಕೇಂದ್ರದ ಆರೋಗ್ಯ ಯೋಜನೆ ಜೊತೆ ವಿಲೀನ.
6. ಎಪಿಎಲ್​ ಕುಟುಂಬಗಳಿಗೂ ಆರೋಗ್ಯ ಯೋಜನೆ ಲಾಭ. 
7. ಆರೋಗ್ಯ ಯೋಜನೆಗೆ ಸರ್ಕಾರದಿಂದಲೇ ಹೆಚ್ಚಿನ ವೆಚ್ಚ.
8. ಮಕ್ಕಳ ಪೌಷ್ಠಿಕತೆಗಾಗಿ 400 ಕೋಟಿ ರೂ. ಮೀಸಲು.

CM Kumarswamy Announce Many Projects For Health Sector
9. ಬಾಣಂತಿಯರಿಗೆ ಮಾಸಿಕ 1 ಸಾವಿರ ರೂ. ಮಾಸಾಶನ.
10. 600 ರೂ.ನಿಂದ 1 ಸಾವಿರ ರೂ.ಗೆ ಮಾಸಾಶನ ಏರಿಕೆ.

Latest Videos
Follow Us:
Download App:
  • android
  • ios