ಸಿಎಂ ಕುಮಾರಸ್ವಾಮಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ.  ಮಹಾತ್ವಾಕಾಂಕ್ಷೆಯ ರೈತರ ಸಾಲಮನ್ನಾಕ್ಕೆ ಬದ್ಧ ಎಂದಿರುವ ಕುಮಾರಸ್ವಾಮಿ ಸಾಲ ಮನ್ನಾಕ್ಕೆ ಮತ್ತಷ್ಟು ಹಣ ಸಂಗ್ರಹಕ್ಕೆ ಯೋಜನೆ ರೂಪಿಸಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಯಾವ ಮೂಲಕ್ಕೆ ಕೈ ಹಾಕಿದ್ದಾರೆ?

ಬೆಂಗಳೂರು(ಫೆ.08) ಜಿಎಸ್‌ಟಿ ಬಂದ ಮೇಲೆ ರಾಜ್ಯಗಳಿಗೆ ತೆರಿಗೆ ಸಂಗ್ರಹ ಒಂದು ಸವಾಲಾಗಿರುವುದೆಂತೂ ನಿಜ. ಅನಿವಾರ್ಯವಾಗಿ ಅವಕಾಶ ಇರುವ ಜಾಗದಲ್ಲಿಯೇ ಸರಕಾರ ತೆರಿಗೆ ಹಾಕಬೇಕಾಗುತ್ತದೆ. ಅದೇ ರೀತಿ ಅಬಕಾರಿ ವಿಭಾಗದಲ್ಲಿ ಆದಾಯ ಸಂಗ್ರಹಣೆ ಮಾಡಲು ಸರಕಾರ ಮುಂದಾಗಿದೆ.

ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಲಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.

ಕುಮಾರಸ್ವಾಮಿ ಬಜೆಟ್ ಹೇಗಿದೆ?

ಕುಡುಕರು ಅನಿವಾರ್ಯವಾಗಿ ಹೆಚ್ಚಿನ ದರ ನೀಡಲೇಬೇಕಾಗಿದೆ. ಜಿಎಸ್‌ಟಿಯಿಂದ ಆಗುತ್ತಿರುವ ನಷ್ಟವನ್ನು ತುಂಬಿಕೊಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಉಲ್ಲೇಖ ಮಾಡಲಾಗಿದೆ.