ಬೆಂಗ್ಳೂರಲ್ಲಿ ಎಷ್ಟು ಸ್ಟಾರ್ಟ್‌ಅಪ್‌?: ವಾಲಾ ಅಂದ್ರು Keep It Up!

ಇಂದಿನಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ| ವಿಧಾನಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ| ರಾಜ್ಯದ ಆರ್ಥಿಕ ನೀಲನಕ್ಷೆ ಬಿಚ್ಚಿಟ್ಟ ರಾಜ್ಯಪಾಲರು| ‘ಬೆಂಗಳೂರು ಸ್ಟಾರ್ಟ್ ಅಪ್ ರಾಜಧಾನಿಯಾಗಿ ಪ್ರಗತಿ’| ‘ಬೆಂಗಳೂರಿನಲ್ಲಿ 19 ಶತಕೋಟಿ ಡಾಲರ್‌ ಮೌಲ್ಯದ ಸ್ಟಾರ್ಟ್‌ಅಪ್‌ಗಳು’| ‘ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ’

Karnataka Governor Says 19 billion Startups in Bengaluru

ಬೆಂಗಳೂರು(ಫೆ.06): ಇಂದಿನಿಂದ ಕರ್ನಾಟಕ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ ಒಂದೇ ವಾರದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡಿಸುತ್ತಿರುವುದು ಕುತೂಹಲ ಮೂಡಿಸಿದೆ. 

ಇನ್ನು ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ, ರಾಜ್ಯದ ಆರ್ಥಿಕ ನೀಲನಕ್ಷೆಯನ್ನು ಬಿಚ್ಚಿಟ್ಟರು. ರಾಜಧಾನಿ ಬೆಂಗಳೂರು ಸ್ಟಾರ್ಟ್‌ಅಪ್‌ ರಾಜಧಾನಿಯಾಗಿ ಪ್ರಗತಿ ಸಾಧಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ 19 ಶತಕೋಟಿ ಡಾಲರ್‌ ಮೌಲ್ಯದ ಸ್ಟಾರ್ಟ್‌ಅಪ್‌ಗಳಿವೆ ಎಂದು ರಾಜ್ಯಪಾಲರು ಈ ವೇಳೆ ಹೇಳಿದರು.

ನೂತನ ತಂತ್ರಜ್ಞಾನ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಆರಂಭದಿಂದಲೇ ಕ್ರಮ ತೆಗೆದುಕೊಳ್ಳುತ್ತಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಬೃಹತ್‌ ಕೈಗಾರಿಕಾ ವಲಯದ ಮೂಲಕ ಸ್ಟಾರ್ಟ್ ಅಪ್ ಗಳಿಗೆ ರಾಜ್ಯದಲ್ಲಿ ಸೂಕ್ತ ಬೆಂಬಲ ಒದಗಿಸಲಾಗುತ್ತಿದೆ. ಬರುವ 2025ರ ವೇಳೆಗೆ ರಾಜ್ಯದಲ್ಲಿನ ನವ್ಯೋದ್ಯಮಗಳ ಸಂಖ್ಯೆ 20,000 ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ವಜೂಬಾಯಿ ವಾಲಾ ಮಾಹಿತಿ ನೀಡಿದರು.

ನವ್ಯೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 58 ಕರ್ನಾಟಕ ತಂತ್ರಜ್ಞಾನ(ಕೆ-ಟೆಕ್‌) ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಬಹುತೇಕ ಕೇಂದ್ರಗಳು ದ್ವಿತೀಯ ದರ್ಜೆ ನಗರಗಳಲ್ಲಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಬಜೆಟ್ ಅಧಿವೇಶನ: ರಾಜ್ಯಪಾಲ ಬಿಚ್ಚಿಟ್ಟರು ರಾಜ್ಯದ ಆರ್ಥಿಕ ‘ಸತ್ಯ’!

ರಾಜ್ಯ ಸರ್ಕಾರ ಮಾಡಲಿದೆ ಚೀನಾ ಜೊತೆ ಫೈಟ್: ರಾಜ್ಯಪಾಲರ ಉವಾಚ!

Latest Videos
Follow Us:
Download App:
  • android
  • ios