Asianet Suvarna News Asianet Suvarna News

ಬಜೆಟ್ ಅಧಿವೇಶನ: ರಾಜ್ಯಪಾಲ ಬಿಚ್ಚಿಟ್ಟರು ರಾಜ್ಯದ ಆರ್ಥಿಕ ‘ಸತ್ಯ’!

ಇಂದಿನಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ| ವಿಧಾನಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ| ಗದ್ದಲದ ನಡುವೆಯೇ ಭಾಷಣ ಮಾಡಿದ ರಾಜ್ಯಪಾಲ ವಜೂಬಾಯಿ ವಾಲಾ| ರಾಜ್ಯದ ಆರ್ಥಿಕ ನೀಲನಕ್ಷೆ ಬಿಚ್ಚಿಟ್ಟ ರಾಜ್ಯಪಾಲರು| ರಾಜ್ಯದ ಒಟ್ಟು ಆರ್ಥಿಕ ಬೆಳವಣಿಗೆಗೆ ರಾಜ್ಯಪಾಲರು ಖುಷ್|

Karnataka All Set For Budget Session In Bengaluru
Author
Bengaluru, First Published Feb 6, 2019, 2:30 PM IST

ಬೆಂಗಳೂರು(ಫೆ.06): ಇಂದಿನಿಂದ ಕರ್ನಾಟಕ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ ಒಂದೇ ವಾರದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡಿಸುತ್ತಿರುವುದು ಕುತೂಹಲ ಮೂಡಿಸಿದೆ. 

ಇನ್ನು ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ, ರಾಜ್ಯದ ಆರ್ಥಿಕ ನೀಲನಕ್ಷೆಯನ್ನು ಬಿಚ್ಚಿಟ್ಟರು. ಆದರೆ ಪ್ರತಿಪಕ್ಷ ಬಿಜೆಪಿ ಸದಸ್ಯರ ಗದ್ದಲದ ಪರಿಣಾಮವಾಗಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.  

 ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ.3ಕ್ಕಿಂತ ಕಡಿಮೆಯಿದ್ದು, ಈ ವರ್ಷವೂ ಉತ್ತಮ ಆರ್ಥಿಕ ಪ್ರಗತಿ ನಿರೀಕ್ಷೆಯಂತೆ ಇರಲಿದೆ ಎಂದು ರಾಜ್ಯಪಾಲ ವಜೂಬಾಯಿ ವಾಲಾ ಹೇಳಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನದ ತಮ್ಮ ಭಾಷಣದಲ್ಲಿ ಈ ವಿಷಯ ಉಲ್ಲೇಖಿಸಿರುವ ರಾಜ್ಯಪಾಲರು, ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ಹೆಚ್ಚವರಿ ನಿಧಿ ಸಂಗ್ರಹ ಮಾಡುವ ಮೂಲಕ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ಪ್ರಸ್ತಕ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ಆರ್ಥಿಕ ಬೆಳವಣಿಗೆ ಕೂಡ ಶೇ.25ರೊಳಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ವಿತ್ತೀಯ ಅಧಿನಿಯಮದ ಎಲ್ಲ ಅಗತ್ಯತೆಗಳನ್ನು ಪಾಲಿಸುತ್ತಿದೆ. ಈ ವರ್ಷವೂ ಆಯ್ಯವ್ಯಯ ಗುರಿಗಳ ಅನುಸಾರ ಪ್ರಧಾನ ತೆರಿಗೆ ಸಂಗ್ರಹಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ವಜೂಬಾಯಿ ವಾಲಾ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios