ಬೆಳೆಸಾಲ ಮನ್ನಾಗಾಗಿ 1611 ಕೋಟಿ ರೂ. ಬಿಡುಗಡೆ: ರಾಜ್ಯಪಾಲ!

ಇಂದಿನಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ| ವಿಧಾನಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ| 3.28 ಲಕ್ಷ ರೈತರ ಬೆಳೆ ಸಾಲ ಮನ್ನಾಗಾಗಿ 1611 ಕೋಟಿ ರೂ. ಬಿಡುಗಡೆ| ಹಸಿರು ಕರ್ನಾಟಕ ಆಂದೋಲನ ಪ್ರಾರಂಭ| ‘ಮತ್ಸ್ಯ ಜೋಪಾಸನೆ’ ಎಂಬ ಯೋಜನೆಯಡಿ ಶೀತಲೀಕರಣ ಘಟಕ

1611 Crore Rupees Released in This Year For Farmer Crop Loan Waiver

ಬೆಂಗಳೂರು(ಫೆ.06): ರಾಜ್ಯ ಸಮ್ಮಿಶ್ರ ಸರ್ಕಾರ 2019ರ ಬಜೆಟ್ ಮಂಡನೆಗೆ ಸಿದ್ಧವಾಗಿದ್ದು, ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದೆ.

ಇಂದು ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ, ವಿಧಾನಮಂಡಲದ ಉಭಯ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು.

ರಾಜ್ಯದ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾಗಾಗಿ ಈ ವರ್ಷದ ಜನವರಿಗೆ ಅಂತ್ಯದವರೆಗೆ 1611 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ. 

ರಾಜ್ಯದ 156 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಸೃಷ್ಟಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಹಸಿರು ಮೇವು ಬೆಳೆಸಲು ರೈತರಿಗೆ 8.11  ಲಕ್ಷ ಮೇವು ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನವರಿ ಅಂತ್ಯದವರೆಗೆ 18.56 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ 150 ದಿನಗಳವರೆಗೆ  ಉದ್ಯೋಗ ನೀಡಲಾಗುತ್ತಿದೆ ಎಂದು ರಾಜ್ಯಪಾಲರು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು. 

ಇನ್ನು ಕೃಷಿ ಪದ್ಧತಿಯಲ್ಲಿ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮತ್ತು ಇಸ್ರೇಲ್ ಮಾದರಿ ಅಳವಡಿಕೆ ಮೂಲಕ ಹೊಸ ಬದಲಾವಣೆ ಮತ್ತು ಸುಧಾರಣೆ ತರಲಾಗುತ್ತಿದೆ. ಇದಕ್ಕಾಗಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಜಾರಿಗೆ ತರಲು ವಿಶೇಷ ಅಭಿಯಾನ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲರು ವಿವರಣೆ ನೀಡಿದರು. 

ಹಸಿರು ವಲಯ ಹೆಚ್ಚಿಸಲು ಹಸಿರು ಕರ್ನಾಟಕ  ಎಂಬ ಆಂದೋಲನ ಪ್ರಾರಂಭಿಸಲಾಗಿದ್ದು, ಕೃಷಿ ಮಾರುಕಟ್ಟೆಗಳನ್ನು ಆನ್‌ಲೈನ್‌ ವ್ಯವಸ್ಥೆಗೆ  ಒಳಪಡಿಸಿದಪರಿಣಾಮ ರೈತರ ಆದಾಯ ಹೆಚ್ಚಳವಾಗಿದೆ ಎಂದು ವಜೂಬಾಯಿ ವಾಲಾ ಸಂತಸ ವ್ಯಕ್ತಪಡಿಸಿದರು.

ಅದರಂತೆ ಮೀನು ಕೆಡೆದಂತೆ ಸಂರಕ್ಷಿಸಿಡಲು ‘ಮತ್ಸ್ಯ ಜೋಪಾಸನೆ’ ಎಂಬ ಯೋಜನೆಯಡಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ತೋಟಗಾರಿಕಾ ಬೆಳೆಯನ್ನು ವಿಸ್ತರಿಸಲು ಅರ್ಹ ರೈತರಿಗೆ ನೆರವನ್ನು ಒದಗಿಸಲಾಗಿದೆ. ಎಂದು ತಿಳಿಸಿದ್ದಾರೆ. 

ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ ಕಬ್ಬಿನ ಎಫ್ ಆರ್ ಪಿ ಒಂದೇ ಕಂತಿನಲ್ಲಿ  ಸಂದಾಯ ಮಾಡಲು ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಬಜೆಟ್ ಅಧಿವೇಶನ: ರಾಜ್ಯಪಾಲ ಬಿಚ್ಚಿಟ್ಟರು ರಾಜ್ಯದ ಆರ್ಥಿಕ ‘ಸತ್ಯ’!

ರಾಜ್ಯ ಸರ್ಕಾರ ಮಾಡಲಿದೆ ಚೀನಾ ಜೊತೆ ಫೈಟ್: ರಾಜ್ಯಪಾಲರ ಉವಾಚ!

ಬೆಂಗ್ಳೂರಲ್ಲಿ ಎಷ್ಟು ಸ್ಟಾರ್ಟ್‌ಅಪ್‌?: ವಾಲಾ ಅಂದ್ರು Keep It Up!

Latest Videos
Follow Us:
Download App:
  • android
  • ios