ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!
ರಾಜಕೀಯ ಏರಿಳಿತಗಳ ಮಧ್ಯೆ ದೋಸ್ತಿ ಬಜೆಟ್ ಆರಂಭ| ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ| ರಾಜಧಾನಿ ಬೆಂಗಳೂರಿಗೆ ಮೈತ್ರಿ ಸರ್ಕಾರದ ಭರಪೂರ ಕೊಡುಗೆ| ಹತ್ತು ಹಲವು ಯೋಜನೆಗಳನ್ನು ಘೋಷಿಸಿದ ಸಿಎಂ ಕುಮಾರಸ್ವಾಮಿ|
ಬೆಂಗಳೂರು(ಫೆ.08): ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ.
ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
1. ಬೆಂಗಳೂರು ಉಪನಗರ ರೈಲು ಸೇವೆ ಯೋಜನೆ.
2. ಬಿಬಿಎಂಪಿಗೆ 2,300 ಕೋಟಿ ರೂ. ಅನುದಾನ.
3. ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಒತ್ತು.
4. 8015 ಕೋಟಿ ವೆಚ್ಚದಲ್ಲಿ ನವಬೆಂಗಳೂರು ಕ್ರಿಯಾ ಯೋಜನೆ.
5. ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1 ಸಾವಿರ ಕೋಟಿ ರೂ. ಅನುದಾನ.
6. 5 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತನೆ.
7. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳಾಗಿ ಪರಿವರ್ತನೆಗೆ ಕ್ರಮ.
8. ಕೆಪಿಸಿಎಲ್ ಸಹಭಾಗಿತ್ವದಲ್ಲಿ 400 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ.
9. ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನಾ ನೀತಿ ಜಾರಿ.
10. 10 ಸಾವಿರ ವಾಹನಗಳ ಪಾರ್ಕಿಂಗ್ಗೆ 87 ಆಯ್ದ ಸ್ಥಳಗಳಲ್ಲಿ ಸ್ಮಾಟ್ ಪಾರ್ಕಿಂಗ್.
11. 195 ಕೋಟಿ ವೆಚ್ಚದಲ್ಲಿ ಹೆಬ್ಬಾಳ, ಕೆಆರ್ ಪುರಂ ಫ್ಲೈಓವರ್ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ.
12. ಗೊರಗುಂಟೆ ಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣ.
13. ಮೆಟ್ರೋ 2ನೇ ಹಂತದ ಕಾಮಗಾರಿ ಜಾರಿ.
14. 102 ಕಿಲೋ ಮೀಟರ್ವರೆಗೆ ನಮ್ಮ ಮೆಟ್ರೋ ವಿಸ್ತರಣೆ.
15. ಬ್ರ್ಯಾಂಡ್ ಬೆಂಗಳೂರು ಇನ್ನಷ್ಟು ಆಕರ್ಷಕ.
16. 64 ಕಿ.ಮೀ ಫೆರಿಫೆರಲ್, 100 ಕಿ.ಮಿ ಎಲಿವೇಟರ್ ಕಾರಿಡಾರ್ ನಿರ್ಮಾಣ.