ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!
ರಾಜಕೀಯ ಏರಿಳಿತಗಳ ಮಧ್ಯೆ ದೋಸ್ತಿ ಬಜೆಟ್| ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ಸಿಎಂ| ದುಡಿಯುವ ಕೈಗಳಿಗೆ ಬಲ ತುಂಬಿದ ಸಿಎಂ ಬಜೆಟ್| ರಾಜ್ಯದ ದುಡಿಯುವ ಸಮುದಾಯಕ್ಕೆ ಭರಪೂರ ಯೋಜನೆಗಳ ಕೊಡುಗೆ| ಸಾರಥಿ ಸೂರಿನಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಹಣಕ್ಕೆ ಬಾಡಿಗೆ ಮನೆ!
ಬೆಂಗಳೂರು(ಫೆ.08): ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ರಾಜ್ಯದ ದುಡಿಯುವ ಸಮುದಾಯಕ್ಕೆ ತಮ್ಮ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದಾರೆ.
ಅದರಂತೆ ರಾಜ್ಯದ ಚಾಲನಾ ಶಕ್ತಿಯಾಗಿರುವ ದುಡಿಯುವ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ನೀಡಿದ ಆದ್ಯತೆಯತ್ತ ಗಮನಹರಿಸುವುದಾದರೆ..
1. ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ.
2. 1 ಸಾವಿರ ಅಂಗನವಾಡಿ ಕಟ್ಟಡ ದುರಸ್ತಿಗೆ 10 ಕೋಟಿ ಅನುದಾನ.
3. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಗೌರವಧನ 500 ರೂ.ಗೆ ಹೆಚ್ಚಳ.
4. ನವ ಉದ್ಯಮಿಗಳಿಗೆ ಪ್ರೋತ್ಸಾಹ ಧನ.
5. ಸಾರಥಿ ಸೂರಿನಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕಡಿಮೆ ಹಣಕ್ಕೆ ಬಾಡಿಗೆ ಮನೆ.
6. ಹಿರಿಯ ನಾಗರಿಕರಿಗೂ ಮಾಸಾಶನ ಏರಿಕೆ.
7. ಸಂಧ್ಯಾ ಸುರಕ್ಷಾ ಪಿಂಚಣಿ 1 ಸಾವಿರಕ್ಕೆ ಏರಿಕೆ.
8. ಬಾಣಂತಿಯರಿಗೆ ಮಾಸಿಕ 1 ಸಾವಿರ ರೂ. ಮಾಸಾಶನ.
9. 600 ರೂ.ನಿಂದ 1 ಸಾವಿರಕ್ಕೆ ಮಾಸಾಶನ ಏರಿಕೆ.
10. ಅಂಗನವಾಡಿ ಸಹಾಯಕಿಯರ ಗೌರವ ಧನ 250 ರೂ.ಗೆ ಹೆಚ್ಚಳ.
11. ನವೆಂಬರ್ 1ರಿಂದಲೇ ಗೌರವಧನ ಹೆಚ್ಚಳ.
12. ಇದಕ್ಕಾಗಿ ಹೆಚ್ಚುವರಿ 60 ಕೋಟಿ ರೂ.ಅನುದಾನ
13. ಬೀದಿ ಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂ. ಸಾಲ ವಿತರಣೆ.
14. 13, 520 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ