05:04 PM (IST) Feb 08

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

04:38 PM (IST) Feb 08

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

ಓದಿನ ಜೊತೆಗೆ ಆಟೋಟಗಳಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒತ್ತು ನೀಡಿದ್ದು, ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ಗಳನ್ನು ಘೋಷಣೆ ಮಾಡಲಾಗಿದೆ.

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

04:36 PM (IST) Feb 08

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಳಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

04:23 PM (IST) Feb 08

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

ರಾಜ್ಯದ ದುಡಿಯುವ ಸಮುದಾಯಕ್ಕೆ ತಮ್ಮ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದಾರೆ. ಅದರಂತೆ ರಾಜ್ಯದ ಚಾಲನಾ ಶಕ್ತಿಯಾಗಿರುವ ದುಡಿಯುವ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ನೀಡಿದ್ದಾರೆ

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

04:21 PM (IST) Feb 08

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ಇದರ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

04:18 PM (IST) Feb 08

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

04:16 PM (IST) Feb 08

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

03:55 PM (IST) Feb 08

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

03:51 PM (IST) Feb 08

ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ

ನಾವು ಕೂಡ ಜನರಿಂದ ಅಯ್ಕೆಯಾಗಿ ಬಂದವರು ನಾವು ಕೂಡ ಶಾಸಕರೇ. ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಐಸ್ ಕ್ಯಾಂಡಿ ಬಜೆಟ್. ಬಿಸಿಲಿನಲ್ಲಿ ಇಟ್ರೆ ಹಾಗೇ ಕರಗಿಹೋಗುತ್ತೆ. ರೈತರ ಸಾಲ ಮನ್ನಾ ಮಾಡಿಲ್ಲ. ಇದನ್ನ ತಪ್ಪಿಸಿಕೊಳ್ಳಬೇಕು ಅಂತ ಇವತ್ತು ಯಾವೋದು ಅಡಿಯೋ ರೀಲಿಸ್ ಮಾಡಿದ್ದಾರೆ. ನಮ್ಮ ನಾಯಕ ಬಿಎಸ್ ವೈ ಬಗ್ಗೆ ಆರೋಪ ಮಾಡಿದ್ದಾರೆ. ಸಿಎಂ ರಾಜೀನಾಮೆ ಕೊಡಬೇಕು ..
ಪ್ರತಿನಿತ್ಯ ‌ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಪ್ಪಿಸಿಕೊಂಡಿದ್ದಾರೆ. 

-ಆರ್ ಅಶೋಕ್, ಬಿಜೆಪಿ ನಾಯಕ

03:50 PM (IST) Feb 08

ಬಜೆಟ್‌ನಲ್ಲಿ ರಾಜ್ಯ ಪೊಲೀಸರಿಗೆ ಭಾರಿ ನಿರಾಸೆ.!

ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿ ಮಾಡದ ಸಿಎಂ .!

ಬಜೆಟ್ ನಲ್ಲಿ ಔರಾದ್ಕರ್ ವರದಿ ಎದುರು ನೋಡುತ್ತಿದ್ದ ರಾಜ್ಯ ಪೊಲೀಸರು.!

ಔರದ್ಕರ್ ಜಾರಿ ಮಾಡುವುದಾಗಿ ಪೊಲೀಸರಿಗೆ ನೀರಿಕ್ಷೆ ಹುಟ್ಟಿಸ್ಸಿದ್ದ ಸಿಎಂ .!

ಆದ್ರೆ ಬಜೆಟ್ ನಲ್ಲಿ ಔರದ್ಕರ್ ಜಾರಿಯಾಗದ ಹಿನ್ನೇಲೆ ನಿರಾಸೆಗೊಂಡ ಪೊಲೀಸರು..!

ಔರದ್ಕರ್ ವರದಿ ಜಾರಿ ಮಾಡದೇ ಕೇವಲ ಕಷ್ಟ ಪರಿಹಾರ ಭತ್ಯೆ ಅನುಧಾನವನ್ನ ಕೋಟ್ಟ ಸಿಎಂ.!

ಔರದ್ಕರ್ ವರದಿ ಜಾರಿಯಾಗಿದ್ರೆ ಪೊಲೀಸರಿಗೆ ಹೆಚ್ಚಾಗುತ್ತಿದ್ದ 30 ಪರ್ಸೆಂಟ್ ವೇತನ

03:49 PM (IST) Feb 08

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ರಾಜ್ಯ ಬಜೆಟ್ ನಲ್ಲಿ ಮಹದಾಯಿ ಯೋಜನೆ ನಿರ್ಲಕ್ಷ್ಯ ಹಿನ್ನೆಲೆ

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದರು ವಿಭಿನ್ನ ಪ್ರತಿಭಟನೆ

ತಮಟೆ ಬಾರಿಸುವ ಮೂಲಕ ವಿಭಿನ್ನ ಪ್ರತಿಭಟನೆ

ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ

ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಳಂಬ

ಯೋಜನೆ ಜಾರಿ ಹಾಗೂ‌ ಅನುದಾನ ತೆಗೆದಿಡದಿರಲು ಆಕ್ರೋಶ

03:08 PM (IST) Feb 08

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

 ಇನ್ನು ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ) ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು 17,212 ಕೋಟಿ ರೂ. ಅನುದಾನ ನೀಡಿದ್ದಾರೆ.

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

03:06 PM (IST) Feb 08

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ

03:05 PM (IST) Feb 08

ಕಾರ್ಮಿಕರಿಗೆ ಬಂಪರ್ ಸ್ಕೀಮ್ಸ್

ಕಟ್ಟಡ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರಿಗೆ ಯೋಜನೆ

ಶ್ರಮಿಕ ಸೌರಭ ಯೋಜನೆಗೆ ಜಾರಿಗೆ ರಾಜ್ಯ ಸರ್ಕಾರದಿಂದ ನಿರ್ಧಾರ

ಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 5 ಲಕ್ಷ ಮುಂಗಡ ಹಣ

ಕಾರ್ಮಿಕರ ಸ್ವಂತ ಮನೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ

ಕಾರ್ಮಿಕ -ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ ಚಿಕಿತ್ಸೆ ವೆಚ್ಚ

ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂ ಪರಿಹಾರ

ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕೂ 2,500 ರೂ

ಕಾರ್ಮಿಕರ ಮಕ್ಕಳ ಸ್ವಯಂ ಉದ್ಯೋಗ ಪ್ರೋತ್ಸಾಹಕ್ಕೆ 50 ಸಾವಿರ

ಉದ್ಯೋಗ ಪ್ರೋತ್ಸಾಹಿಸಲು 50 ಸಾವಿರ ಬಡ್ಡಿರಹಿತ ಸಹಾಯಧನ

03:03 PM (IST) Feb 08

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವು

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ವ್ಯವಸ್ಥೆ

ಪೆಟ್ರೋಲ್ ಆಟೋ ಎಲೆಕ್ಟ್ರಿಕ್ ಆಟೋ ಪರಿವರ್ತನೆಗೆ ಸಹಾಯಧನ

ಸಾರಿಗೆ ಇಲಾಖೆ ಮೂಲಕ ಈ ಯೋಜನೆಗೆ 30 ಕೋಟಿ ರೂಪಾಯಿ

ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಚಾಲಕರ ದಿನಾಚರಣೆ

ಎಲ್ಲಾ ಜಿಲ್ಲೆಗಳಲ್ಲಿಯೂ ಚಾಲಕರ ದಿನಾಚರಣೆ ಮಾಡಲು ತೀರ್ಮಾನ

ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ್ದರೆ ಪುರಸ್ಕಾರ

ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ ಪುರಸ್ಕಾ

02:43 PM (IST) Feb 08

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ. 

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

02:43 PM (IST) Feb 08

ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಮಾಹಿತಿ ತಂತ್ರಜ್ಞಾನ ನೀತಿ ಪರಿಷ್ಕರಣೆ ಮಾಡಲು ತೀರ್ಮಾನ 

ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ

ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಹೊಸ ಪರಿಪೋಷಣಗಳ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ

ತುಮಕೂರಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ

7 ಕೋಟಿ ರೂಪಾಯಿ ವೆಚ್ಚದಲ್ಲಿ K-Tech ನಾವೀನ್ಯತೆ ಕೇಂದ್ರ

ಕೆ-ಟೆಕ್ ಇನ್ನೋವೇಷನ್ ಹಬ್ ಸ್ಥಾಪನೆಗೆ 7 ಕೋಟಿ ರೂಪಾಯಿ

02:41 PM (IST) Feb 08

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ

ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ತಂತ್ರಜ್ಞಾನ ಬಳಸಿ ಸಮೀಕ್ಷೆ

02:38 PM (IST) Feb 08

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

02:22 PM (IST) Feb 08

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಧಾನ್ಯ ವಿತರಣೆಗೆ 3,700 ಕೋಟಿ ರೂ. ಅನುದಾನ