ಬೆಂಗಳೂರು, (ಫೆ.08): ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ ಅನ್ನು ಶುಕ್ರವಾರ ಮಧ್ಯಾಹ್ನ ಮಂಡಿಸಿದರು. 

ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಇದಾಗಿದೆ. ಜುಲೈ 5, 2018ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸೌಧದಲ್ಲಿ ಬಜೆಟ್ ಮಂಡನೆ ಮಾಡಿದ್ದರು.

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

 ಇನ್ನು ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ)  ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು  17,212 ಕೋಟಿ ರೂ. ಅನುದಾನ ನೀಡಿದ್ದಾರೆ.

ಬಜೆಟ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಶಿಕಾರಿಪುರ ಮತ್ತು ಬಾದಾಮಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.

ನೀರಾವರಿ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಅವರು ಘೋಷಣೆ ಮಾಡಿದರು. ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸಲು 1600 ಕೋಟಿ ಯೋಜನೆಯನ್ನು ಘೋಷಣೆ ಮಾಡಿದರು.

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಲ್ಲಿ ಕೆರೆ ತುಂಬಿಸಲು 200 ಕೋಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗಾಗಿ 300 ಕೋಟಿ ಅನುದಾನ ಘೋಷಿಸಿದರು.

* ಏತ ನೀರಾವರಿ ಯೋಜನೆಗಳಿಗೆ 1563 ಕೋಟಿ ರೂ.
* ಕೆರೆ ತುಂಬಿಸುವ ಯೋಜನೆಗಳಿಗೆ 1680 ಕೋಟಿ ರೂ
* ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ 445 ಕೋಟಿ ರೂ.,
* ನೀರಾವರಿ ಯೋಜನೆಗಳಿಗೆ 477 ಕೋಟಿ ರೂ.,
* ಕಾಲುವೆಗಳ ಆಧುನೀಕರಣ-ಅಭಿವೃದ್ಧಿ ಕಾಮಗಾರಿಗಳಿಗೆ 860 ಕೋಟಿ ಕೋಟಿ.ರೂ.
* ಬ್ರಿಡ್ಜ್ ಮತ್ತು ಬ್ಯಾರೇಜ್ ನಿರ್ಮಾಣ ಕಾಮಗಾರಿಗಳಿಗೆ 160 ಕೋಟಿ ರೂ
* ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 506 ಕೋಟಿ ರೂ. 
* ಮಂಚನಬೆಲೆ ಜಲಾಶಯ ಕೆಳಭಾಗದ ಉದ್ಯಾನವನ ಅಭಿವೃದ್ಧಿ, ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೆ 125 ಕೋಟಿ ರೂ. 
* ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದ ಪುನಶ್ಚೇತನ ಕಾಮಗಾರಿಗಳಿಗೆ 75 ಕೋಟಿ ರೂ. ಅನುದಾನ ನಿಗದಿ.

ಸಣ್ಣ ನೀರಾವರಿ
*ಕೆ.ಸಿ.ವ್ಯಾಲಿ ಯೋಜನೆ ಅಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 40 ಎಂಎಲ್‍ಡಿ ನೀರು ಕೊಂಡೊಯ್ಯಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಳಿಗೆ 40 ಕೋಟಿ ರೂ. ಅನುದಾನ.
* ಪಾಂಡವಪುರ ತಾಲ್ಲೂಕಿನ ಬಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿವ ಕಾಮಗಾರಿಗೆ 100 ಕೋಟಿ ರೂ.
* ಮುಂದಿನ 3 ವರ್ಷಗಳಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಬೀದರ್ ಜಿಲ್ಲೆಯ ಎಲ್ಲಾ ಕೆರೆಗಳ ಸುಧಾರಣೆಗೆ ಕ್ರಮ.
* ಶಿವಮೊಗ್ಗ ಜಿಲ್ಲೆಯ ಹೊಳೆ ಹನಸವಾಡಿ ಗ್ರಾಮದ ಹತ್ತಿರ ತುಂಗಾ ನದಿಯಿಂದ ಏತ ನೀರಾವರಿ ಮೂಲಕ 8 ಕೆರೆಗಳಿಗೆ ನೀರು ತುಂಬಿಸಲು 13 ಕೋಟಿ ರೂ. ಅನುದಾನ.
* ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 2,500 ಎಕರೆ ಜಮೀನುಗಳಿಗೆ ಕಲ್ಲಮರಡಿ ಏತ ನೀರಾವರಿ ಯೋಜನೆ ಜಾರಿ.

 ಆಯವ್ಯಯ ಮುಖ್ಯಾಂಶಗಳು 2019-20

* ರಾಜ್ಯದಲ್ಲಿ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿರುವ ಅತಿ ಬಳಕೆ ತಾಲ್ಲೂಕುಗಳಲ್ಲಿ ಅಂತರ್ಜಲ ವೃದ್ಧಿಸಲು ಚೆಕ್‍ಡ್ಯಾಂ, ಬ್ಯಾರೇಜ್ ಬಾಂದಾರಗಳು,  ಮರೂಪೂರಭ ರಚನೆ ಕಾಮಗಾರಿಗಳಿಗೆ ಗೆ 10 ಕೋಟಿ ರೂ. ಅನುದಾನ.