Published : May 18, 2026, 05:12 AM ISTUpdated : May 18, 2026, 10:50 PM IST

India Latest News Live: ಇರಾನ್ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ; ಯಾವುದೇ ಕ್ಷಣದಲ್ಲೂ ಯುದ್ಧ ಸ್ಫೋಟಗೊಳ್ಳುವ ಭೀತಿ!

ಸಾರಾಂಶ

ಮಾಸ್ಕೋ: ರಷ್ಯಾದ ಮೇಲೆ ಉಕ್ರೇನ್ 1000ಕ್ಕೂಹೆಚ್ಚು ಡ್ರೋನ್‌ ಬಳಸಿ ನಡೆಸಿದ್ದ ಅತಿದೊಡ್ಡ ದಾಳಿಯಲ್ಲಿ ಮಾಸ್ಕೋದಲ್ಲಿ ಓರ್ವ ಭಾರತೀಯ ಸೇರಿ 4 ಜನರು ಸಾವನ್ನಪ್ಪಿದ್ದಾರೆ. ಮೂರು ಭಾರತೀಯರೂ ಸೇರಿ 12 ಜನ ಗಾಯಗೊಂಡಿದ್ದಾರೆ.

ಉಕ್ರೇನ್‌ ನಡೆಸಿದ ದಾಳಿ ಯಾವ ಮಟ್ಟಿಗೆ ಇತ್ತು ಎಂದರೆ ಮಾಸ್ಕೋದಲ್ಲಿನ ರಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣದ ಮೇಲೂ ಡ್ರೋನ್ ಅವಶೇಷಗಳು ಬಿದ್ದಿವೆ. ಆದರೆ ಯಾವುದೇ ಹಾನಿ ಆಗಿಲ್ಲ.

ಉಕ್ರೇನಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಡ್ರೋನ್ ದಾಳಿ ದೃಢಪಡಿಸಿದ್ದು, ‘ದಾಳಿ ಸಂಪೂರ್ಣ ಸಮರ್ಥನೀಯ. 500 ಕಿ.ಮೀ. ದೂರದಿಂದ ರಷ್ಯಾ ಪ್ರದೇಶಗಳ ಮೇಲೆ ಡ್ರೋನ್‌ ಹಾರಿಸಿದ್ದೇವೆ’ ಎಂದಿದ್ದಾರೆ. ಆದರೆ ಉಕ್ರೇನ್‌ನ ಬಹುತೇಕ ಡ್ರೋನ್‌ಗಳನ್ನು ಹೊಡೆದು ಉರುಳಿಸಿದ್ದೇವೆ ಎಂದು ರಷ್ಯಾ ಹೇಳಿದೆ.

ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ 287 ಡ್ರೋನ್‌ ಬಳಸಿ ಪ್ರತಿದಾಳಿ ಡನೆಸಿದೆ. ಆದರೆ 279 ಡ್ರೋನ್‌ಗಳನ್ನು ನಾಶ ಮಾಡಿದ್ದಾಗಿ ಉಕ್ರೇನ್‌ ಹೇಳಿದೆ.

ಭಾರತೀಯ ಸಾವು:

ಮಾಸ್ಕೋ ಪ್ರದೇಶದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ. ಆದರೆ ಮೃತರ ಅಥವಾ ಗಾಯಗೊಂಡವರ ಗುರುತುಗಳನ್ನು ಅದು ಬಹಿರಂಗಪಡಿಸಲಿಲ್ಲ.

10:51 PM (IST) May 18

ಇರಾನ್ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ; ಯಾವುದೇ ಕ್ಷಣದಲ್ಲೂ ಯುದ್ಧ ಸ್ಫೋಟಗೊಳ್ಳುವ ಭೀತಿ!

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಇರಾನ್ ಕಳುಹಿಸಿದ್ದ ಪರಿಷ್ಕೃತ ಶಾಂತಿ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದೆ. ಮಾತುಕತೆ ವಿಫಲವಾದರೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

Read Full Story

10:12 PM (IST) May 18

ಮೈಲೇಜ್‌ನಲ್ಲಿ ಪೆಟ್ರೋಲ್ ಕಾರುಗಳ ಧೂಳೀಪಟ ಮಾಡಿದ ಇವಿ - ಒಂದೇ ಕಾರಿನ ಎರಡು ಮಾಡೆಲ್‌ಗಳ ಟೆಸ್ಟ್ ರಿಸಲ್ಟ್ ನೋಡಿ ವಾಹನ ಪ್ರಿಯರು ಶಾಕ್!

ಒಂದೇ ಕಾರಿನ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ನಡುವೆ ನಡೆಸಿದ ಪರೀಕ್ಷೆಯು ಇಂಧನ ದಕ್ಷತೆಯಲ್ಲಿ ಆಘಾತಕಾರಿ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ. ಎಲೆಕ್ಟ್ರಿಕ್ ಕಾರುಗಳು, ವಿಶೇಷವಾಗಿ ನಗರ ಟ್ರಾಫಿಕ್‌ನಲ್ಲಿ, ರೀಜನರೇಟಿವ್ ಬ್ರೇಕಿಂಗ್‌ನಂತಹ ತಂತ್ರಜ್ಞಾನದಿಂದಾಗಿ ಹೆಚ್ಚು ಮೈಲೇಜ್ ನೀಡಿವೆ.

Read Full Story

09:21 PM (IST) May 18

60ರಲ್ಲೂ ಸಲ್ಮಾನ್ ಖಾನ್‌ ಇಷ್ಟೊಂದು ಫಿಟ್ ಆಗಿರೋದು ಹೇಗೆ? ಈ ಒಂದು ಪದಾರ್ಥ ಮುಟ್ಟೋದೇ ಇಲ್ವಂತೆ!

ಸಲ್ಮಾನ್ ಖಾನ್‌ಗೆ 60 ವರ್ಷ ದಾಟಿದೆ. ಆದರೂ ಅವರ ಫಿಟ್‌ನೆಸ್ ನೋಡಿದ್ರೆ ಎಲ್ಲರಿಗೂ ಅಚ್ಚರಿ. ಈ ವಯಸ್ಸಿನಲ್ಲೂ ಅವರು ತಮ್ಮನ್ನು ಹೇಗೆ ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಅನ್ನೋದನ್ನು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಸಲ್ಮಾನ್ ಅವರೇ ಬಾಯ್ಬಿಟ್ಟಿದ್ದಾರೆ. ಅವರ ಫಿಟ್‌ನೆಸ್ ಸೀಕ್ರೆಟ್ಸ್ ಇಲ್ಲಿದೆ ನೋಡಿ…

Read Full Story

09:13 PM (IST) May 18

ಪೆಟ್ರೋಲ್-ಡೀಸೆಲ್ ಚಿಂತೆ ಬಿಡಿ, ಇನ್ನು ನೀರಿನಿಂದ ಓಡಲಿವೆ ವಾಹನಗಳು - ಇಂಧನ ಜಗತ್ತಿನಲ್ಲಿ ಹೊಸ ಕ್ರಾಂತಿಗೆ ವಿಶಿಷ್ಟ ಫಾರ್ಮುಲಾ?

ಮೊನಾಕೊ ಮೂಲದ FOWE ಇಕೋ ಸೊಲ್ಯೂಷನ್ಸ್ ಕಂಪನಿಯು 'ಕಾವಿಟೆಕ್' ಎಂಬ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಇಂಧನ ಮತ್ತು ನೀರನ್ನು ಮಿಶ್ರಣ ಮಾಡಿ, ದಹನ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಶೇ. 10ರಷ್ಟು ಇಂಧನ ಉಳಿತಾಯ ಮಾಡುತ್ತದೆ.

Read Full Story

08:47 PM (IST) May 18

Waka Waka ಬಳಿಕ ಮತ್ತೆ ಬಂದ್ರು ಶಕೀರಾ - ಫಿಫಾ ವಿಶ್ವಕಪ್‌ಗೆ ಹೊಸ ಹಾಡು 'ಡೈ ಡೈ' ಟೀಸರ್ ರಿಲೀಸ್

ಪಾಪ್ ಸೂಪರ್‌ಸ್ಟಾರ್ ಶಕೀರಾ ಅವರು ಫಿಫಾ ವಿಶ್ವಕಪ್‌ಗಾಗಿ 'ಡೈ ಡೈ' ಹಾಡಿನ ಟೀಸರ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಫೈನಲ್ ಹಾಫ್‌ಟೈಮ್ ಶೋದಲ್ಲಿ ಪ್ರದರ್ಶನ ನೀಡಲಿರುವ ಮಾಹಿತಿ ಚರ್ಚೆಗೆ ಕಾರಣವಾಗಿದೆ.

Read Full Story

08:44 PM (IST) May 18

ಮಧ್ಯಪ್ರಾಚ್ಯ ರಾಜಕಾರಣದಲ್ಲಿ ಭಾರಿ ಸಂಚಲನ - ಸೌದಿ ಅರೇಬಿಯಾಕ್ಕೆ ಲಗ್ಗೆ ಇಟ್ಟ 8,000 ಪಾಕಿಸ್ತಾನಿ ಸೈನಿಕರು!

ಅಮೆರಿಕ-ಇರಾನ್ ಸಂಘರ್ಷದ ನಡುವೆ, ಪಾಕಿಸ್ತಾನವು ಸೌದಿ ಅರೇಬಿಯಾದೊಂದಿಗೆ ರಹಸ್ಯ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಭಾಗವಾಗಿ, 8,000 ಪಾಕಿಸ್ತಾನಿ ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಸೌದಿಯಲ್ಲಿ ನಿಯೋಜಿಸಲಾಗಿದೆ.

Read Full Story

08:27 PM (IST) May 18

ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ! 100ರಲ್ಲಿ ಒಂದು ಅಪರೂಪದ ಘಟನೆ

ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣಾನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಇದು ಅತ್ಯಂತ ವಿರಳ ಘಟನೆಯಾಗಿದ್ದು, ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ. ಈ ಅಪರೂಪದ ಘಟನೆಯು ಉದ್ಯಾನವನದ ಆರೋಗ್ಯಕರ ಪರಿಸರಕ್ಕೆ ಸಾಕ್ಷಿಯಾಗಿದೆ.
Read Full Story

08:06 PM (IST) May 18

ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭೀಕರ ದುರಂತ - ಮದುವೆಗೆ ಹೋಗುತ್ತಿದ್ದ ವಾಹನಕ್ಕೆ ಕಂಟೈನರ್ ಲಾರಿ ಡಿಕ್ಕಿ; 11 ಮಂದಿ ಸಾವು!

ಮಹಾರಾಷ್ಟ್ರದ ಪಾಲ್ಘರ್ ಬಳಿ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದುವೆ ದಿಬ್ಬಣದ ಟ್ರಕ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

08:02 PM (IST) May 18

ತಾಲಿಬಾನ್ ಫರ್ಮಾನು - ಕನ್ಯೆಯ ಮೌನ ಮದುವೆಗೆ ಸಮ್ಮತಿ ಎಂದರ್ಥ, ಬಾಲ್ಯವಿವಾಹಕ್ಕೆ ತಾಲಿಬಾನಿಗಳಿಂದ ಮನ್ನಣೆ! ವಿಶ್ವದ ಟೀಕೆ

ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತವು ಹೊಸ ವಿವಾದಾತ್ಮಕ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನಿನ ಪ್ರಕಾರ, ಋತುಮತಿಯಾದ ಹುಡುಗಿಯ ಮೌನವನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಲಾಗಿದ್ದು, ಇದು ಬಾಲ್ಯವಿವಾಹಕ್ಕೆ ಪರೋಕ್ಷ ಮಾನ್ಯತೆ ನೀಡುತ್ತದೆ ಎಂಬ ಆರೋಪದೊಂದಿಗೆ ಜಾಗತಿಕ ವಿರೋಧಕ್ಕೆ ಕಾರಣವಾಗಿದೆ.
Read Full Story

07:44 PM (IST) May 18

ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ - ಒಂದು ರೂಪಾಯಿ ಖರ್ಚಿಲ್ಲದೆ ಆಧಾರ್ ಕಾರ್ಡ್ ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತೆ ಅವಕಾಶ!

ಆಧಾರ್ ಕಾರ್ಡ್‌ನಲ್ಲಿನ ತಪ್ಪುಗಳನ್ನು ಉಚಿತವಾಗಿ ಸರಿಪಡಿಸಿಕೊಳ್ಳುವ ಗಡುವನ್ನು 14 ಜೂನ್ 2027 ರವರೆಗೆ ವಿಸ್ತರಿಸಲಾಗಿದೆ. ಈ ಸೌಲಭ್ಯವು 'ಮೈ ಆಧಾರ್' ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಸಾರ್ವಜನಿಕರು ಹೆಸರು, ಜನ್ಮದಿನಾಂಕ, ಮತ್ತು ವಿಳಾಸವನ್ನು ಯಾವುದೇ ಶುಲ್ಕವಿಲ್ಲದೆ ತಿದ್ದುಪಡಿ ಮಾಡಿಕೊಳ್ಳಬಹುದು.

Read Full Story

07:44 PM (IST) May 18

ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ ಆಗ್ಬೇಕು, ಇದು ಮಕ್ಕಳ ಮನಸ್ಸು ಕೆಡಿಸಲ್ಲ - ನಟಿ ಸಬಾ ಹೇಳಿಕೆ ವೈರಲ್

ನಟಿ ಸಬಾ ಆಜಾದ್ ಅವರು ಎಲ್ಲಾ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಹಿಳೆಯರ ಆರೋಗ್ಯ ಕುರಿತ ಸಂಶೋಧನೆ ಕೊರತೆ ಬಗ್ಗೆಯೂ ಮಾತನಾಡಿದ್ದಾರೆ.

Read Full Story

07:15 PM (IST) May 18

ಈಕೆ ಸಾಮಾನ್ಯ ಮಹಿಳೆ ಅಲ್ಲ! ಈಕೆಯ ಸಾಧನೆಗೆ ಅಧಿಕಾರಿಗಳೇ ಸೆಲ್ಯೂಟ್, IAFನ ಟಾಪ್ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಆದ ಈ ಸೂಪರ್ ವುಮನ್ ಯಾರು?

ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ಸಾನ್ಯಾ, 'ಕ್ಯಾಟಗರಿ-ಎ' ಕ್ವಾಲಿಫೈಡ್ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ (QFI) ಅರ್ಹತೆ ಪಡೆದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಮಿಲಿಟರಿ ಪೈಲಟ್‌ಗಳಿಗೆ ನೀಡಲಾಗುವ ಈ ಅತ್ಯುನ್ನತ ತರಬೇತುದಾರರ ರೇಟಿಂಗ್ ಬಗ್ಗೆ ಕುತೂಹಲಕಾರಿ ಮಾಹಿತಿ ತಿಳಿಯಿರಿ.

Read Full Story

07:14 PM (IST) May 18

70ರಲ್ಲೂ 'ಮೆಗಾ158' ಚಿತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸಿದ ಮೆಗಾಸ್ಟಾರ್ - ವರ್ಕೌಟ್ ವಿಡಿಯೋ ವೈರಲ್

ಮೆಗಾಸ್ಟಾರ್ ಚಿರಂಜೀವಿ ತಮ್ಮ ಹೊಸ ಸಿನಿಮಾ ‘ಮೆಗಾ158’ಗಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದ ಚಿತ್ರದ ಮುಹೂರ್ತ ಮೇ 21ರಂದು ನಡೆಯಲಿದೆ.

Read Full Story

06:57 PM (IST) May 18

ಚೀನಾ ಮಣ್ಣಿನಲ್ಲಿ ಸಿಕ್ಕಿತು ರಕ್ಷಣಾ ವಲಯದ ಭಾರೀ ಖಜಾನೆ - ಮಿಸೈಲ್, ಫೈಟರ್ ಜೆಟ್‌ ತಯಾರಿಕೆಗೆ ಬೇಕಾದ 17 ಅಪರೂಪದ ಖನಿಜ ಪತ್ತೆ!

ಚೀನಾ ತನ್ನ ಹಿಮಾವೃತ ಪ್ರದೇಶದಲ್ಲಿ ಫೈಟರ್ ಜೆಟ್‌ ಮತ್ತು ಕ್ಷಿಪಣಿ ತಯಾರಿಕೆಗೆ ಬಳಸುವ 17 ಅಪರೂಪದ ಖನಿಜಗಳ ಬೃಹತ್ ನಿಕ್ಷೇಪವನ್ನು ಪತ್ತೆಹಚ್ಚಿದೆ. ಈ ಸಂಶೋಧನೆಯು ಜಾಗತಿಕ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ ಚೀನಾದ ಏಕಸ್ವಾಮ್ಯವನ್ನು ಮತ್ತಷ್ಟು ಬಲಪಡಿಸಲಿದೆ.

Read Full Story

06:50 PM (IST) May 18

'ಎಲ್ಲರೂ ನೋವನ್ನು ಮುಚ್ಚಿಟ್ಟುಕೊಂಡೇ ಬದುಕುತ್ತಾರೆ' - ರವಿ ಮೋಹನ್ ಬಗ್ಗೆ ನಟಿ ಅಮೇಯಾ ಹೇಳಿದ್ದೇನು?

ರವಿ ಮೋಹನ್ (ಜಯಂ ರವಿ) ವೈಯಕ್ತಿಕ ಜೀವನ ಹಾಗೂ ವಿಚ್ಛೇದನ ವಿವಾದದ ಬಗ್ಗೆ ನಟಿ ಅಮೇಯಾ ನಾಯರ್ ಪ್ರತಿಕ್ರಿಯೆ ನೀಡಿದ್ದು, ಅವರು ಮಾನಸಿಕ ಒತ್ತಡದಲ್ಲಿರುವಂತೆ ಕಾಣುತ್ತಾರೆ ಎಂದಿದ್ದಾರೆ.

Read Full Story

06:50 PM (IST) May 18

Russian Oil - ಅಮೆರಿಕ ನಿರ್ಬಂಧ ಹಾಕಿದ್ರೂ ಡೋಂಟ್ ಕೇರ್! ರಷ್ಯಾ ತೈಲ ಖರೀದಿ ನಿಲ್ಲಲ್ಲ ಅಂದ ಭಾರತ

ಅಮೆರಿಕದ ನಿರ್ಬಂಧಗಳ ಹೊರತಾಗಿಯೂ, ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸಲಿದೆ. ದೇಶದ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ, ವಾಣಿಜ್ಯಿಕವಾಗಿ ಲಾಭದಾಯಕವಾಗಿದ್ದರೆ ಮಾತ್ರ ತೈಲ ಆಮದು ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Read Full Story

06:28 PM (IST) May 18

ಹೇಗಿದೆ ರಾಮ್ ಚರಣ್, ಶಿವಣ್ಣ ನಟನೆಯ ಪೆದ್ದಿ ಟ್ರೇಲರ್? - ಆ್ಯಕ್ಷನ್ ಸೂಪರ್, ಆದರೆ ದೊಡ್ಡ ಮೈನಸ್ ಇದೇ!

ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಪೆದ್ದಿ'. ಬುಚ್ಚಿಬಾಬು ಸಾನಾ ನಿರ್ದೇಶನದ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆ್ಯಕ್ಷನ್, ಎಮೋಶನ್ಸ್ ಚೆನ್ನಾಗಿದ್ದರೂ, ಒಂದು ದೊಡ್ಡ ಮೈನಸ್ ಪಾಯಿಂಟ್ ಇದೆ. ಅದೇನು?

Read Full Story

06:23 PM (IST) May 18

ದೇಶದ ಮೊದಲ ಬುಲೆಟ್ ರೈಲು ವಿನ್ಯಾಸ ಅನಾವರಣ - ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲಿನ 'ಫಸ್ಟ್ ಲುಕ್' ರಿಲೀಸ್‌

ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಅಧಿಕೃತ ವಿನ್ಯಾಸವನ್ನು ಅನಾವರಣಗೊಳಿಸಲಾಗಿದೆ. ಮುಂಬೈ-ಅಹಮದಾಬಾದ್ ನಡುವಿನ ಈ 508 ಕಿ.ಮೀ. ಮಾರ್ಗದ ಕಾಮಗಾರಿ, ಸಮುದ್ರದಾಳದ ಸುರಂಗ ಮತ್ತು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರೈಲುಗಳ ಅಭಿವೃದ್ಧಿ ಸೇರಿದಂತೆ, ವೇಗವಾಗಿ ಸಾಗುತ್ತಿದೆ.
Read Full Story

06:06 PM (IST) May 18

Shocking - 'ನಾನು ಪರಿಪೂರ್ಣಳು, ನನಗೆ ಅದಕ್ಕಾಗಿ ಬೇರೊಬ್ಬ ಸಂಗಾತಿಯ ಅಗತ್ಯ ಇಲ್ಲ' ಎಂದ ಸಾರಾ ಅಲಿ ಖಾನ್!

ಒಂದು ಸಂದರ್ಶನದಲ್ಲಿ, ಸಾರಾ ಅಲಿ ಖಾನ್ ತಾನು ಮದುವೆಗೆ ಆತುರಪಡುತ್ತಿಲ್ಲ ಮತ್ತು ಸದ್ಯಕ್ಕೆ ತನ್ನ ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನ ಹರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮೊದಲು ತನ್ನನ್ನು ತಾನು ರೂಪಿಸಿಕೊಳ್ಳಬೇಕು ಮತ್ತು ಸ್ವತಂತ್ರವಾಗಿ ಜೀವನವನ್ನು ಸ್ವೀಕರಿಸಬೇಕು ಎಂದು ಅವರು ನಂಬುತ್ತಾರೆ.

Read Full Story

05:33 PM (IST) May 18

ತಮಿಳುನಾಡು ಟಿವಿಕೆ ಸರ್ಕಾರಕ್ಕೆ ಕಂಟಕ, ವಿಜಯ್ ಆಡಳಿತ 6 ತಿಂಗಳಲ್ಲಿ ಕೊನೆ - ಭವಿಷ್ಯ ನುಡಿದ ರಾಧಾಕೃಷ್ಣನನ್!

ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನನ್ ಅವರು, ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಆರು ತಿಂಗಳೊಳಗೆ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತಮ್ಮ ನಾಯಕ ಎಂ.ಕೆ. ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

Read Full Story

05:20 PM (IST) May 18

ಥಾರ್ ಪ್ರೇಮಿಗಳಿಗೊಂದು ಗುಡ್ ನ್ಯೂಸ್ - ಕೇವಲ 4 ಲಕ್ಷ ರೂ. ಕೊಟ್ಟು ಜಬರ್ದಸ್ತ್ ಮಹೀಂದ್ರಾ ಥಾರ್ ಮನೆಗೆ ತನ್ನಿ!

ಯುವಕರ ನೆಚ್ಚಿನ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಕಡಿಮೆ ಬಜೆಟ್‌ನಲ್ಲೂ ಖರೀದಿಸಬಹುದು. ಕೇವಲ 4 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಮನೆಗೆ ತರಬಹುದಾಗಿದ್ದು, ಈ ಲೇಖನವು ಅದರ ಫೈನಾನ್ಸ್ ಯೋಜನೆ, ಇಎಂಐ ಮತ್ತು ಸಾಲದ ಸಂಪೂರ್ಣ ಲೆಕ್ಕಾಚಾರವನ್ನು ವಿವರಿಸುತ್ತದೆ.
Read Full Story

05:02 PM (IST) May 18

ರಾಮ್ ಚರಣ್ ಅಲ್ಲ, ಕುಸ್ತಿ ಆಡೋ ವಿರಾಟ್ ಕೊಹ್ಲಿ - ಪೆದ್ದಿ ಟ್ರೇಲರ್‌ಗೆ ಮನಸೋತ ನಿರ್ಮಾಪಕ ನಾಗ ವಂಶಿ!

ರಾಮ್ ಚರಣ್ ನಟನೆಯ ‘ಪೆದ್ದಿ’ ಟ್ರೈಲರ್ ನೋಡಿ ನಿರ್ಮಾಪಕ ನಾಗ ವಂಶಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ. ಜಾನ್ವಿ ಕಪೂರ್ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗಿದೆ.

Read Full Story

04:37 PM (IST) May 18

'ನಮಾಜ್‌ ಮಾಡೋಕೆ ಸಮಸ್ಯೆ ಇಲ್ಲ, ಆದ್ರೆ ರಸ್ತೆಯಲ್ಲಿ ಮಾಡ್ಬೇಡಿ..' ಯುಪಿ ಸಿಎಂ ಯೋಗಿ ಅದಿತ್ಯನಾಥ್‌ ಖಡಕ್‌ ವಾರ್ನಿಂಗ್‌

ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಗಳ ಮೇಲೆ ನಮಾಜ್ ಮಾಡುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರೀತಿಯಿಂದ ಮನವೊಲಿಸಲು ಪ್ರಯತ್ನಿಸುತ್ತೇವೆ, ಅದು ವಿಫಲವಾದರೆ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ. 

Read Full Story

04:18 PM (IST) May 18

ಆಶಾ ಕಾರ್ಯಕರ್ತೆಯರ ವೇತನ ಭಾರೀ ಪ್ರಮಾಣದಲ್ಲಿ ಏರಿಕೆ, ಜೂ.15ರಿಂದ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ

ಕೇರಳದ ನೂತನ ಯುಡಿಎಫ್ ಸರ್ಕಾರವು ತನ್ನ ಮೊದಲ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಇಲಾಖೆ ಸ್ಥಾಪಿಸುವ ಗ್ಯಾರಂಟಿಗಳನ್ನು ಘೋಷಿಸಿದೆ. ಇದರೊಂದಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಹೆಚ್ಚಳ ಮಾಡಿದೆ.

Read Full Story

03:27 PM (IST) May 18

Love Cheating - ಸಾರಾ ಅಲಿ ಖಾನ್ V/S ಆಯುಷ್ಮಾನ್ ಖುರಾನಾ - ಲವ್ 'ಚೀಟಿಂಗ್' ಬಗ್ಗೆ ಶುರುವಾಯ್ತು ದೊಡ್ಡ ರಾದ್ಧಾಂತ!

ಇತ್ತೀಚೆಗೆ ಸಾರಾ ಅರ್ಜುನ್ ಪ್ರತಾಪ್ ಬಾಜ್ವಾ ಎಂಬುವರ ಜೊತೆ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಪ್ರೇಮ ಕಥೆಯ ಬಗ್ಗೆಯೂ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಸಿನಿಮಾದ ಕಥೆಯಂತೆ ಆಫ್-ಸ್ಕ್ರೀನ್ ನಲ್ಲೂ ಪತಿ, ಪತ್ನಿ ಮತ್ತು 'ಮೋಸ'ದ ಬಗ್ಗೆ ಚರ್ಚೆಗಳು ಜೋರಾಗಿವೆ.

Read Full Story

02:31 PM (IST) May 18

ಮೋದಿ ಯುಎಇ ಭೇಟಿ; ಭಾರತಕ್ಕೆ 30 ಮಿಲಿಯನ್ ಬ್ಯಾರಲ್ ತೈಲ ಗ್ಯಾರಂಟಿ

ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹದಲ್ಲಿ ಯುಎಇಯ ಕೊಡುಗೆ 30 ಮಿಲಿಯನ್ ಬ್ಯಾರಲ್‌ಗಳಷ್ಟು ಹೆಚ್ಚಾಗಲಿದೆ. ಸಾಮಾನ್ಯ ಭಾರತೀಯರಿಗೆ ವಾಹನಗಳು ಇಂಧನ ಕೊರತೆಯಿಲ್ಲದೆ ಚಲಿಸಲಿವೆ, ದೂರ ದೇಶದಲ್ಲಿ ತೊಂದರೆ ಉಂಟಾದರೂ ನಮ್ಮ ಅಡುಗೆ ಮನೆಯ ಒಲೆ ತಡೆಯಿಲ್ಲದೆ ಉರಿಯಲಿದೆ ಎನ್ನುವ ಭರವಸೆ ಲಭಿಸಿದೆ.

Read Full Story

02:01 PM (IST) May 18

ಫಾರ್ಚುನರ್ ಕಾರು, 1 ಕೋಟಿ ರೂ ವರದಕ್ಷಿಣೆ ಕೊಟ್ಟರೂ ಕಿರುಕುಳ, ದುರಂತ ಅಂತ್ಯ ಕಂಡ 24ರ ಯುವತಿ

ಫಾರ್ಚುನರ್ ಕಾರು, 1 ಕೋಟಿ ರೂಪಾಯಿ ನಗದು ವರದಕ್ಷಿಣೆ ಕೊಟ್ಟು ಮಗಳ ಮದುವೆ ಮಾಡಿಸಲಾಗಿತ್ತು. ಮದುವೆಯಾದ 14 ತಿಂಗಳಿಗೆ ನರಕ ಯಾತನೆ ಅನುಭವಿಸಿದ 24ರ ಯುವತಿ ಜಿಗಿದು ದುರಂತ ಅಂತ್ಯಕಂಡಿದ್ದಾಳೆ.

 

Read Full Story

12:37 PM (IST) May 18

ಓಡಾಟಕ್ಕೆ ಬ್ರೇಕ್, ಇಂಧನ ಸಂಕಷ್ಟದಿಂದ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ? ಚೇರ್ಮೆನ್ ಸ್ಪಷ್ಟನೆ

ಇಂಧನ ಸಂಕಷ್ಟದಿಂದ ಐಪಿಎಲ್ ಟೂರ್ನಿ ಎರಡೇ ಕ್ರೀಡಾಂಗಣಕ್ಕೆ ಸೀಮಿತಗೊಳಿಸುವುದು, ಅನಗತ್ಯ ಓಡಾಟಗಳಿಗೆ ನಿರ್ಬಂಧ, ಪ್ರಯಾಣ ಕಡಿತ ಸೇರಿದಂತೆ ಹಲವು ಬದಲಾವಣೆ ಮಾಡಲಾಗುತ್ತಿದೆಯಾ? ಈ ಕುರಿತು ಐಪಿಎಲ್ ಚೇರ್ಮನ್ ಸ್ಪಷ್ಟನೆ ನೀಡಿದ್ದಾರೆ.

Read Full Story

11:55 AM (IST) May 18

ಪುರುಷರೂ ಇಷ್ಟ ಪಡುವ 'ಹೆಣ್ಣಿನ ಎನರ್ಜಿ' ರಹಸ್ಯ ಬಿಚ್ಚಿಟ್ಟ 'ಟಾಕ್ಸಿಕ್' ನಟಿ ಕಿಯಾರಾ ಅಡ್ವಾನಿ - ಹೀಗೂ ಉಂಟೇ?

'ಲಸ್ಟ್ ಸ್ಟೋರೀಸ್' ಚಿತ್ರವನ್ನು ಮಾಡಿದ್ದು ಒಂದು ಧೈರ್ಯದ ನಿರ್ಧಾರವಾಗಿತ್ತು ಎಂದಿದ್ದಾರೆ. 'ಆಗ ನಾನು ಮಹಿಳಾ ಸಬಲೀಕರಣದ ಬಗ್ಗೆ ಯೋಚಿಸಿರಲಿಲ್ಲ, ಕೇವಲ ಲಸ ಮಾಡುವ ಅವಕಾಶಕ್ಕಾಗಿ ಆ ಪಾತ್ರ ಮಾಡಿದ್ದೆ. ಆದರೆ ಇಂದು ಹಿಂತಿರುಗಿ ನೋಡಿದಾಗ, ಆ ಚಿತ್ರ ನನಗೆ ಒಂದು ದೊಡ್ಡ ಬ್ರೇಕ್ ನೀಡಿತು' ಎಂದಿದ್ದಾರೆ.

Read Full Story

11:50 AM (IST) May 18

ಬಿಜಿಪಿ ನಾಯಕನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ, ದೇಹದ ಗಾಯದ ಗುರುತು ಹೆಚ್ಚಿಸಿದ ಅನುಮಾನ

ಮಾವಿನ ಮರದಲ್ಲಿ ಬಿಜೆಪಿ ನಾಯಕನ ಶವ ನೇಣುಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ಆದರೆ ನಾಯಕನ ದೇಹದಲ್ಲಿನ ಹಲವು ಗಾಯಗ ಗುರುತು ಸಾವಿನ ಅನುಮಾನ ಹೆಚ್ಚಿಸಿದೆ. ಇತ್ತ ನಾಯಕನ ಪುತ್ರ ದೂರು ದಾಖಲಿಸಿದ್ದಾನೆ.

 

Read Full Story

11:19 AM (IST) May 18

ಚೆನ್ನೈನಲ್ಲಿ ನನ್ನ ಕೊನೆಯ ಟಿ20, ಧೋನಿ ಹೇಳಿದಂತೆ ಇದು ಕೂಲ್ ಕ್ಯಾಪ್ಟನ್ ವಿದಾಯದ ಪಂದ್ಯ?

ತವರಿನಲ್ಲಿ ನನ್ನ ಕೊನೆಯ ಏಕದಿನ ಪಂದ್ಯ ರಾಂಚಿ. ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲಿ. ಇದು ಧೋನಿ ಹೇಳಿದ ಮಾತು. ಈ ಐಪಿಎಲ್‌ನಲ್ಲಿ ಒಂದು ಪಂದ್ಯ ಆಡದ ಧೋನಿ ಇಂದು ಚೆನ್ನೈನಲ್ಲಿ ವಿದಾಯದ ಪಂದ್ಯ ಆಡುವ ಸಾಧ್ಯತೆ ಇದೆ.

Read Full Story

10:38 AM (IST) May 18

ಕೇರಳ ಸಿಎಂ ಆಗಿ ವಿಡಿ ಸತೀಶನ್ ಪ್ರಮಾವಚನ, ನೂಕುನುಗ್ಗಲಿನಲ್ಲಿ ಶಾಸಕರಿಗೂ ಸಿಗದ ಸೀಟು

ಕೇರಳದಲ್ಲಿ 10 ವರ್ಷ ಬಳಿಕ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೊಸ ಅಧ್ಯಾಯ ಆರಂಭಿಸಿದೆ. ವಿಡಿ ಸತೀಶನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಭಾರಿ ನೂಕು ನುಗ್ಗಲು ಸಂಭವಿಸಿದೆ.

Read Full Story

09:41 AM (IST) May 18

ಸಸರಾಂ ಪಾಟ್ನಾ ಪ್ರಯಾಣಿಕರ ರೈಲು ಹೊರಡ್ತಿದ್ದಂತೆ ಹೊತ್ತಿ ಉರಿದ ಬೋಗಿ, ರೈಲು ನಿಲ್ದಾಣದಲ್ಲೇ ಘಟನೆ

ಪ್ರಯಾಣಿಕರ ಹೊತ್ತ ರೈಲು ಇನ್ನೇನು ರೈಲು ನಿಲ್ದಾಣದಿಂದ ಹೊರಡಬೇಕು ಅನ್ನವಷ್ಟರಲ್ಲೇ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಬೆಂಕಿ ನಂದಿಸುವಷ್ಟರಲ್ಲೇ ಕೋಚ್ ಬೆಂಕಿಗೆ ಆಹುತಿಯಾಗಿದೆ.

 

Read Full Story

09:38 AM (IST) May 18

ಬಂದಿದ್ದು ಭಯೋತ್ಪಾದನೆಗೆ, ಮಾಡಿಸಿಕೊಂಡಿದ್ದು ಕೂದಲು ಕಸಿ! NIA ವಿಚಾರಣೆಯಲ್ಲಿ ಉಗ್ರ ಮಾಹಿತಿ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಬಂದಿದ್ದ ಪಾಕಿಸ್ತಾನಿ ಲಷ್ಕರ್ ಉಗ್ರನೊಬ್ಬ, ತನ್ನ ಕಾರ್ಯಾಚರಣೆ ಬದಿಗಿಟ್ಟು ಕೂದಲು ಕಸಿ ಮಾಡಿಸಿಕೊಂಡಿದ್ದಾನೆ. ತೀವ್ರ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಈತ, ಕಾಶ್ಮೀರದಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವೆಂದು ತಿಳಿದು ಈ ನಿರ್ಧಾರ ಕೈಗೊಂಡಿದ್ದು, ಎನ್‌ಐಎ ವಿಚಾರಣೆ ವೇಳೆ ಈ ಸತ್ಯ ಬಯಲಾಗಿದೆ.
Read Full Story

07:29 AM (IST) May 18

Health Emergency - ಆಫ್ರಿಕಾ ದೇಶಗಳಲ್ಲಿ ಎಬೋಲಾ ಪತ್ತೆ - 88 ಬಲಿ, 300 ಜನಕ್ಕೆ ಸೋಂಕು ಶಂಕೆ

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಹರಡುವಿಕೆಯಿಂದಾಗಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಲಸಿಕೆ ಇಲ್ಲದ ಈ ಬುಂಡಿಬುಗ್ಯೋ ವೈರಸ್‌ನಿಂದಾಗಿ ಈಗಾಗಲೇ 88 ಜನರು ಮೃತಪಟ್ಟಿದ್ದು, ಮಿಲಿಟರಿ ಸಂಘರ್ಷ ಮತ್ತು ಜನರ ವಲಸೆಯಿಂದಾಗಿ ಸೋಂಕು ನಿಯಂತ್ರಣ ಸವಾಲಾಗಿದೆ.
Read Full Story

07:28 AM (IST) May 18

ಏರ್ ಶೋ ವೈಮಾನಿಕ ಪ್ರದರ್ಶನ ವೇಳೆ 2 ಜೆಟ್ ಡಿಕ್ಕಿಯಾಗಿ ವೀಕ್ಷಕರ ಪಕ್ಕದಲ್ಲೇ ಪತನ, ದೃಶ್ಯ ಸೆರೆ

ಸಾಹಸಮಯ ವೈಮಾನಿಕ ಪ್ರದರ್ಶನ ವೇಳೆ ಯುಎಸ್ ಫೈಟರ್ ಜೆಟ್ ಆಗಸದಲ್ಲೇ ಡಿಕ್ಕಿಯಾಗಿದೆ. ಪರಿಣಾಮ ಎರಡು ವಿಮಾನಗಳು ವೀಕ್ಷಕರ ಪಕ್ಕದಲ್ಲೇ ಪತನಗೊಂಡಿದೆ. ಆಗಸದಲ್ಲಿನ ಈ ಬೀಕರ ದೃಶ್ಯ ಸೆರೆಯಾಗಿದೆ.

Read Full Story

07:23 AM (IST) May 18

ಸಿಬಿಎಸ್‌ಇ ಮಹತ್ವದ ಬದಲಾವಣೆ - ವಿದ್ಯಾರ್ಥಿಗಳಿಗಿದು ಅಚ್ಚರಿಯ ಸುದ್ದಿ!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ: ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಮೌಲ್ಯಮಾಪನಕ್ಕಾಗಿ ಆನ್‌-ಸ್ಕ್ರೀನ್‌ ಮಾರ್ಕಿಂಗ್‌ (ಒಎಸ್‌ಎಂ) ವ್ಯವಸ್ಥೆಯನ್ನು ಬಳಸಲಾಗಿದೆ.

Read Full Story

07:00 AM (IST) May 18

ಡೊನಾಲ್ಡ್ ಟ್ರಂಪ್, ನೆತನ್ಯಾಹು ಹೆಸರಿನ ಎಮ್ಮೆಗಳು ಸಿಕ್ಕಾಪಟ್ಟೆ ವೈರಲ್; ವಿಡಿಯೋ ನೋಡಿ

ಬಾಂಗ್ಲಾದೇಶದಲ್ಲಿ ಎರಡು ಎಮ್ಮೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಹೆಸರಿಡಲಾಗಿದೆ. ಟ್ರಂಪ್ ಎಮ್ಮೆಯು ತನ್ನ ಕೇಶವಿನ್ಯಾಸದಿಂದ ಗಮನ ಸೆಳೆದರೆ, ನೆತನ್ಯಾಹು ಎಮ್ಮೆಯು ತನ್ನ ವಿಚಿತ್ರ ಸ್ವಭಾವದಿಂದ ಗುರುತಿಸಲ್ಪಟ್ಟಿದೆ.

Read Full Story

06:25 AM (IST) May 18

ಯುದ್ಧ ಸ್ಥಗಿತಕ್ಕೆ ಇರಾನ್‌ಗೆ ಅಮೆರಿಕ 5 ಹೊಸ ಕಂಡೀಷನ್ ; ಉಭಯ ದೇಶಗಳ ನಡುವೆ ಷರತ್ತು- ಪ್ರತಿಷರತ್ತು

ಯುದ್ಧ ಸ್ಥಗಿತ ಮಾತುಕತೆಯ ಭಾಗವಾಗಿ ಅಮೆರಿಕವು ಇರಾನ್ ಮುಂದೆ ಐದು ಷರತ್ತುಗಳನ್ನು ಇಟ್ಟಿದೆ, ಇದರಲ್ಲಿ 400 ಕೆ.ಜಿ ಸಂಸ್ಕರಿತ ಯುರೇನಿಯಂ ಹಸ್ತಾಂತರವೂ ಸೇರಿದೆ. ಆದರೆ, ಈ ಷರತ್ತುಗಳನ್ನು ಹಳೆಯದೆಂದು ತಿರಸ್ಕರಿಸಿರುವ ಇರಾನ್, ತನ್ನ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ತನ್ನದೇ ಆದ ಬೇಡಿಕೆಗಳನ್ನು ಮುಂದಿಟ್ಟಿದೆ.
Read Full Story

06:18 AM (IST) May 18

ಟ್ರಂಪ್‌ ಹತ್ಯೆ ಸೇರಿ 18 ದಾಳಿ ಸಂಚು ರೂಪಿಸಿದ್ದ ಉಗ್ರ ಸೆರೆ; ಇರಾನ್ ಮೇಲಿನ ದಾಳಿಗೆ ಪ್ರತೀಕಾರದ ಕ್ರಮ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು ಯುರೋಪ್‌ನಲ್ಲಿ ಹಲವು ದಾಳಿಗಳನ್ನು ಯೋಜಿಸಿದ್ದ ಇರಾನ್ ಬೆಂಬಲಿತ ಇರಾಕಿ ಉಗ್ರ ಮೊಹಮ್ಮದ್ ಬಕರ್‌ನನ್ನು ಅಮೆರಿಕ ಬಂಧಿಸಿದೆ. ಹಿಯಾ ಎಂಬ ಹೊಸ ಸಂಘಟನೆಯ ಕಮಾಂಡರ್ ಆಗಿದ್ದ ಈತನ ಬಂಧನದೊಂದಿಗೆ ಭಯಾನಕ ಜಿಹಾದಿ ಸಂಚೊಂದು ಬಯಲಾಗಿದೆ.
Read Full Story

More Trending News