ಯುದ್ಧ ಸ್ಥಗಿತ ಮಾತುಕತೆಯ ಭಾಗವಾಗಿ ಅಮೆರಿಕವು ಇರಾನ್ ಮುಂದೆ ಐದು ಷರತ್ತುಗಳನ್ನು ಇಟ್ಟಿದೆ, ಇದರಲ್ಲಿ 400 ಕೆ.ಜಿ ಸಂಸ್ಕರಿತ ಯುರೇನಿಯಂ ಹಸ್ತಾಂತರವೂ ಸೇರಿದೆ. ಆದರೆ, ಈ ಷರತ್ತುಗಳನ್ನು ಹಳೆಯದೆಂದು ತಿರಸ್ಕರಿಸಿರುವ ಇರಾನ್, ತನ್ನ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ತನ್ನದೇ ಆದ ಬೇಡಿಕೆಗಳನ್ನು ಮುಂದಿಟ್ಟಿದೆ.

ವಾಷಿಂಗ್ಟನ್‌: ಸದ್ಯ ನಡೆಯುತ್ತಿರುವ ಯುದ್ಧಸ್ಥಗಿತ ಮಾತುಕತೆಯ ಭಾಗವಾಗಿ ಇರಾನ್‌ ಎದುರು ಅಮೆರಿಕ 5 ಷರತ್ತುಗಳನ್ನು ಇಟ್ಟಿದೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

‘ಇರಾನ್‌ ತನ್ನ ಬಳಿ ಇರುವ 400 ಕೆ.ಜಿ. ಸಂಸ್ಕರಿತ ಉರೇನಿಯಂ ಅನ್ನು ನಮಗೆ ಹಸ್ತಾಂತರಿಸಬೇಕು. ಇರಾನ್‌ನಲ್ಲಿನ ಕೆಲ ಪರಮಾಣು ಸ್ಥಾವರಗಳು ಮಾತ್ರ ಕಾರ್ಯನಿರ್ವಹಿಸಬೇಕು. ಇರಾನ್‌ ಮೇಲೆ ಈ ಹಿಂದೆ ಹೇರಿದ್ದ ನಿರ್ಬಂಧಗಳಿಂದ ಆಗಿರುವ ನಷ್ಟವನ್ನು ನಾವು ಭರಿಸುವುದಿಲ್ಲ. ಜತೆಗೆ, ವಿದೇಶಗಳಲ್ಲಿ ನಿರ್ಬಂಧಕ್ಕೆ ಒಳಗಾಗಿರುವ ಇರಾನ್‌ನ ಶೇ.25ರಷ್ಟು ಆಸ್ತಿಯನ್ನು ಬಿಡುಗಡೆ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ನಮಗೆ ಒಪ್ಪಿಗೆ ಇಲ್ಲ. ಈ ಎಲ್ಲಾ ಷರತ್ತುಗಳಿಗೇ ನೀವು ಒಪ್ಪಿದರೆ ಸಂಘರ್ಷ ಕೊನೆಯಾಗುವುದು’ ಎಂಬುವೇ ಆ 5 ಷರತ್ತುಗಳು ಇರಾನ್‌ನ ಫಾರ್ಸ್‌ ನ್ಯೂಸ್‌ ವರದಿ ಮಾಡಿದೆ.

ಇರಾನ್‌ ತಿರಸ್ಕಾರ:

ಈ ಷರತ್ತುಗಳಿಗೆ ಪ್ರತಿಕ್ರಿಯಿಸಿರುವ ಇರಾನ್‌, ‘ನಮಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಯುದ್ಧ ನಡೆಯುತ್ತಿದ್ದಾಗ ನಾವು ತಿರಸ್ಕರಿಸಿದ್ದ ಷರತ್ತುಗಳನ್ನೇ ಅಮೆರಿಕ ಮತ್ತೆ ವಿಧಿಸುತ್ತಿದೆ’ ಎಂದಿದೆ.

ಜತೆಗೆ, ಲೆಬನಾನ್‌ ಸೇರಿ ಎಲ್ಲಾ ಕಡೆಗಳಲ್ಲಿ ಸಂಘರ್ಷಗಳನ್ನು ನಿಲ್ಲಿಸುವುದು, ತನ್ನ ಮೇಲಿನ ನಿರ್ಬಂಧ ತೆರವುಗೊಳಿಸುವುದು, ವಿದೇಶದಲ್ಲಿರುವ ತನ್ನ ಆಸ್ತಿ ಬಿಡುಗಡೆ ಮಾಡುವುದು ಸೇರಿ ತನ್ನ ಹಿಂದಿನ 5 ಷರತ್ತುಗಳನ್ನು ಇರಾನ್‌ ಕೂಡ ಪ್ರಸ್ತಾಪಿಸಿದೆ.

ಮುಂದಿನ ಹಾದಿ ಏನು?

400 ಕೆಜಿ ಸಂಸ್ಕರಿತ ಯುರೇನಿಯಂ ಇರಾನ್‌ ನಮಗೆ ಹಸ್ತಾಂತರಿಸಬೇಕು

ಇರಾನ್‌ನಲ್ಲಿ ಸೀಮಿತ ಪ್ರಮಾಣದಲ್ಲಿ ಅಣು ವಿದ್ಯುತ್‌ ಘಟಕ ನಿರ್ವಹಿಸಬೇಕು

ಇರಾನ್‌ ಮೇಲೆ ಹೇರಿದ್ದ ನಿರ್ಬಂಧದಿಂದ ಆದ ನಷ್ಟವನ್ನು ಅಮೆರಿಕ ಭರಿಸುವುದಿಲ್ಲ

ವಿದೇಶಿ ಬ್ಯಾಂಕ್‌ಗಳಲ್ಲಿ ಜಫ್ತಿ ಮಾಡಿದ ಇರಾನ್‌ ಹಣವನ್ನು ಬಿಡುಗಡೆ ಮಾಡಲ್ಲ

ಈ ಐದು ಷರತ್ತಿಗೆ ಒಪ್ಪಿದರೆ ಯುದ್ಧ ಸ್ಥಗಿತಕ್ಕೆ ನಾವು ಸಿದ್ಧ: ಅಮೆರಿಕ ಸ್ಪಷ್ಟನೆ