MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಚೀನಾ ಮಣ್ಣಿನಲ್ಲಿ ಸಿಕ್ಕಿತು ರಕ್ಷಣಾ ವಲಯದ ಭಾರೀ ಖಜಾನೆ: ಮಿಸೈಲ್, ಫೈಟರ್ ಜೆಟ್‌ ತಯಾರಿಕೆಗೆ ಬೇಕಾದ 17 ಅಪರೂಪದ ಖನಿಜ ಪತ್ತೆ!

ಚೀನಾ ಮಣ್ಣಿನಲ್ಲಿ ಸಿಕ್ಕಿತು ರಕ್ಷಣಾ ವಲಯದ ಭಾರೀ ಖಜಾನೆ: ಮಿಸೈಲ್, ಫೈಟರ್ ಜೆಟ್‌ ತಯಾರಿಕೆಗೆ ಬೇಕಾದ 17 ಅಪರೂಪದ ಖನಿಜ ಪತ್ತೆ!

ಚೀನಾ ತನ್ನ ಹಿಮಾವೃತ ಪ್ರದೇಶದಲ್ಲಿ ಫೈಟರ್ ಜೆಟ್‌ ಮತ್ತು ಕ್ಷಿಪಣಿ ತಯಾರಿಕೆಗೆ ಬಳಸುವ 17 ಅಪರೂಪದ ಖನಿಜಗಳ ಬೃಹತ್ ನಿಕ್ಷೇಪವನ್ನು ಪತ್ತೆಹಚ್ಚಿದೆ. ಈ ಸಂಶೋಧನೆಯು ಜಾಗತಿಕ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ ಚೀನಾದ ಏಕಸ್ವಾಮ್ಯವನ್ನು ಮತ್ತಷ್ಟು ಬಲಪಡಿಸಲಿದೆ.

2 Min read
Author : Santosh Naik
Published : May 18 2026, 06:57 PM IST
Share this Photo Gallery
  • FB
  • TW
  • Linkdin
  • Whatsapp
16
17 ಅಪರೂಪದ ಖನಿಜ ಧಾತು ಪತ್ತೆ
Image Credit : X

17 ಅಪರೂಪದ ಖನಿಜ ಧಾತು ಪತ್ತೆ

ಜಾಗತಿಕ ಮಾರುಕಟ್ಟೆ ಹಾಗೂ ತಂತ್ರಜ್ಞಾನ ವಲಯದಲ್ಲಿ ಈಗಾಗಲೇ ತನ್ನದೇ ಆದ ಪ್ರಭಾವ ಹೊಂದಿರುವ ಚೀನಾ ಕೈಗೆ ಈಗ ಜಗತ್ತನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಲ್ಲ ಅತ್ಯಂತ ಪ್ರಬಲ ಅಸ್ತ್ರವೊಂದು ಸಿಕ್ಕಿದೆ. ವಿಶ್ವದ ಕೆಲವು ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಈ ಸೂಕ್ಷ್ಮ ಸಂದರ್ಭದಲ್ಲೇ, ಚೀನಾ ತನ್ನ ದುರ್ಗಮ ಹಿಮಾವೃತ ಪ್ರದೇಶದಲ್ಲಿ ಫೈಟರ್ ಜೆಟ್‌ಗಳು ಮತ್ತು ಕ್ಷಿಪಣಿಗಳನ್ನು (Missiles) ತಯಾರಿಸಲು ಬಳಸಲಾಗುವ 17 ಅತ್ಯಂತ ಅಪರೂಪದ ಖನಿಜ ಧಾತುಗಳ (Rare Earth Minerals) ಬೃಹತ್ ನಿಕ್ಷೇಪವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

Add Asianetnews Kannada as a Preferred SourcegooglePreferred
26
ಸುದೀರ್ಘ ಸಂಶೋಧನೆಯ ಬಳಿಕ ಸಿಕ್ಕ ಯಶಸ್ಸು
Image Credit : X

ಸುದೀರ್ಘ ಸಂಶೋಧನೆಯ ಬಳಿಕ ಸಿಕ್ಕ ಯಶಸ್ಸು

ವಿಜ್ಞಾನಿಗಳ ಪ್ರಕಾರ, ಪ್ರಸ್ತುತ ಸಂಶೋಧನೆಯಲ್ಲಿ ಪ್ರಾಥಮಿಕವಾಗಿ ಸೀರಿಯಮ್ (Cerium), ನಿಯೋಡೈಮಿಯಮ್ (Neodymium) ಮತ್ತು ಡಿಸ್ಪ್ರೋಸಿಯಮ್ (Dysprosium) ಎಂಬ ಅತ್ಯಂತ ಮೌಲ್ಯಯುತ ಧಾತುಗಳು ಪತ್ತೆಯಾಗಿವೆ. ಪ್ರಸ್ತುತ ಇಡೀ ಜಗತ್ತಿಗೆ ಶೇಕಡಾ 90% ರಷ್ಟು ಅಪರೂಪದ ಖನಿಜಗಳನ್ನು ಚೀನಾ ಒಂದೇ ರಫ್ತು ಮಾಡುತ್ತಿದ್ದು, ಹೊಸ ನಿಕ್ಷೇಪದ ಪತ್ತೆಯಿಂದಾಗಿ ಈ ವಲಯದಲ್ಲಿ ಚೀನಾದ ಏಕಸ್ವಾಮ್ಯ ಹಾಗೂ ಜಾಗತಿಕ ಪ್ರಭಾವ ಇನ್ನಷ್ಟು ಬಲಿಷ್ಠವಾಗಲಿದೆ. 'ಸೌತ್ ಚೈನಾ ಮಾರ್ನಿಂಗ್ ಪೋಸ್ಟ್' ವರದಿಯ ಪ್ರಕಾರ, ಹಿಮಾವೃತ ಪ್ರದೇಶದಲ್ಲಿ ಹಿಮ ಕರಗಿದ ನಂತರ ಚೀನಾದ ಭೂವಿಜ್ಞಾನಿಗಳು ನಡೆಸಿದ ಸುದೀರ್ಘ ಪರಿಶೋಧನೆಯಲ್ಲಿ ಈ ಯಶಸ್ಸು ಸಿಕ್ಕಿದೆ.

Related Articles

Related image1
ಟ್ರಂಪ್ ಪ್ರವಾಸ ಮುಗಿಯುತ್ತಿದ್ದಂತೆಯೇ, ಚೀನಾ ಕೊಟ್ಟ ಉಡುಗೊರೆಯನ್ನು ಕಸದಬುಟ್ಟಿಗೆ ಎಸೆದ ಅಮೆರಿಕ ಅಧಿಕಾರಿಗಳು!
Related image2
ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!
36
ಹಿಮ ಕರಗಿ ಬಯಲಾದ ರಹಸ್ಯ; ಚೀನಾ ವಿಜ್ಞಾನಿಗಳ ಹೊಸ ಮೈಲಿಗಲ್ಲು
Image Credit : X

ಹಿಮ ಕರಗಿ ಬಯಲಾದ ರಹಸ್ಯ; ಚೀನಾ ವಿಜ್ಞಾನಿಗಳ ಹೊಸ ಮೈಲಿಗಲ್ಲು

ಚೀನಾದ ಅತ್ಯಂತ ಶೀತಲ ಪ್ರದೇಶಗಳಾದ 'ಹೈಲಾಂಗ್‌ಜಿಯಾಂಗ್' (Heilongjiang) ಮತ್ತು 'ಜಿಲಿನ್' (Jilin) ಪ್ರಾಂತ್ಯಗಳಲ್ಲಿ ಈ ಸಂಶೋಧನೆ ನಡೆಸಲಾಗಿದೆ. ವಿಜ್ಞಾನಿಗಳ ಪ್ರಕಾರ, ಈ ಪ್ರದೇಶದ ಮಣ್ಣಿನ ಮಾದರಿಗಳನ್ನು ತೀವ್ರವಾಗಿ ಸಮೀಕ್ಷೆ ನಡೆಸಿದಾಗ ಈ ಸತ್ಯ ಹೊರಬಿದ್ದಿದೆ. ಈ ಭಾಗದಲ್ಲಿ ಈ ಹಿಂದೆ ಇದ್ದ ಬಂಡೆಗಳು ಆಲ್ಕಲೈನ್ ಗ್ರಾನೈಟ್‌ನಿಂದ (Alkaline Granite) ಮಾಡಲ್ಪಟ್ಟಿದ್ದವು. ಇಲ್ಲಿ ಚಳಿಗಾಲದ ಅತಿಯಾದ ಶೀತ ಮತ್ತು ಬೇಸಿಗೆಯ ತಾಪಮಾನದ ಏರಿಳಿತದ ಕಾರಣದಿಂದಾಗಿ ನಿರಂತರವಾಗಿ ಹಿಮ ಗಡ್ಡೆಯಾಗುವ ಮತ್ತು ಕರಗುವ ಪ್ರಕ್ರಿಯೆ ನಡೆದಿತ್ತು.

46
ಮಣ್ಣಿನಲ್ಲಿ ಹರಡಿಕೊಂಡಿದ್ದ ಬಂಡೆಗಳು
Image Credit : X

ಮಣ್ಣಿನಲ್ಲಿ ಹರಡಿಕೊಂಡಿದ್ದ ಬಂಡೆಗಳು

ಈ ನೈಸರ್ಗಿಕ ಪ್ರಕ್ರಿಯೆಯಿಂದಾಗಿ ಬಂಡೆಗಳು ಒಡೆದು ಪುಡಿಯಾಗಿ ಇಡೀ ಮಣ್ಣಿನಲ್ಲಿ ಹರಡಿಕೊಂಡಿದ್ದವು. ಈ ಮಣ್ಣನ್ನು ಪರೀಕ್ಷಿಸಿದಾಗ ವಿಜ್ಞಾನಿಗಳಿಗೆ ಈ ಅತ್ಯಂತ ಅಪರೂಪದ ಧಾತುಗಳು ಲಭ್ಯವಾಗಿವೆ. ಚೀನಾದ ಭೂವಿಜ್ಞಾನಿಗಳ ಪ್ರಕಾರ, ಸದ್ಯ ಈ ಯೋಜನೆಯ ಮೇಲೆ ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಈ ದುರ್ಗಮ ಪ್ರದೇಶದಿಂದ ಖನಿಜಗಳನ್ನು ಹೊರತೆಗೆಯುವ ಪ್ರಕ್ರಿಯೆ ಆರಂಭವಾಗಲಿದೆ.

56
ಚೀನಾ ಪಾಲಿಗೆ ಈ ಖಜಾನೆ ಏಕೆ ಅತ್ಯಂತ ಮುಖ್ಯ ಮತ್ತು ಅಪಾಯಕಾರಿ?
Image Credit : X

ಚೀನಾ ಪಾಲಿಗೆ ಈ ಖಜಾನೆ ಏಕೆ ಅತ್ಯಂತ ಮುಖ್ಯ ಮತ್ತು ಅಪಾಯಕಾರಿ?

ಈ ಮಣ್ಣಿನಲ್ಲಿ ಪತ್ತೆಯಾಗಿರುವ ಮೂರು ಪ್ರಮುಖ ಧಾತುಗಳು ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅತ್ಯಂತ ಕ್ರಾಂತಿಕಾರಿ ಪಾತ್ರ ವಹಿಸುತ್ತವೆ. ಅವುಗಳ ಕಾರ್ಯವೈಖರಿ ಹೀಗಿದೆ:

ನಿಯೋಡೈಮಿಯಮ್ (Neodymium): ಈ ಧಾತುವನ್ನು ಫೈಟರ್ ಜೆಟ್‌ಗಳು ಹಾಗೂ ಮಿಸೈಲ್‌ಗಳಲ್ಲಿ ಬಳಸಲಾಗುವ ಅತ್ಯಂತ ಶಕ್ತಿಶಾಲಿ ಮೋಟಾರ್‌ಗಳ ತಯಾರಿಕೆಗೆ ಬಳಸಲಾಗುತ್ತದೆ. ನಿಯೋಡೈಮಿಯಮ್‌ನಿಂದ ಅತ್ಯಂತ ಪ್ರಬಲವಾದ ಅಯಸ್ಕಾಂತಗಳನ್ನು (Magnets) ತಯಾರಿಸಬಹುದು. ಇದರಿಂದಾಗಿ ಜೆಟ್ ಹಾಗೂ ಕ್ಷಿಪಣಿಗಳ ಮೋಟಾರ್‌ಗಳು ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ.

ಡಿಸ್ಪ್ರೋಸಿಯಮ್ (Dysprosium): ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಕಾರ್ಯಾಚರಣೆ ನಡೆಸುವಾಗ ಎಂಜಿನ್ ಮತ್ತು ಮೋಟಾರ್‌ಗಳು ವಿಪರೀತವಾಗಿ ಕಾಯುತ್ತವೆ. ಇಂತಹ ಅತಿಯಾದ ಬಿಸಿ ಹಾಗೂ ಕಠಿಣ ವಾತಾವರಣದಲ್ಲೂ ಮೋಟಾರ್‌ಗಳು ಕೆಡದಂತೆ, ಸ್ಥಿರವಾಗಿ ಕಾರ್ಯನಿರ್ವಹಿಸಲು ಡಿಸ್ಪ್ರೋಸಿಯಮ್ ಅನ್ನು ಬಳಸಲಾಗುತ್ತದೆ.

ಸೀರಿಯಮ್ (Cerium): ಇಂಧನವನ್ನು ಕ್ಷಣಾರ್ಧದಲ್ಲಿ ಪ್ರಜ್ವಲಿಸಲು (Ignition) ಹಾಗೂ ಯುದ್ಧಸಾಮಗ್ರಿ ಮತ್ತು ಮದ್ದುಗುಂಡುಗಳ (Ammunition) ಸ್ಫೋಟಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ.

66
ಅಮೆರಿಕಕ್ಕೆ ತಲೆನೋವು ತಂದ ಸಂಶೋಧನೆ
Image Credit : X

ಅಮೆರಿಕಕ್ಕೆ ತಲೆನೋವು ತಂದ ಸಂಶೋಧನೆ

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಅಮೆರಿಕ, ಚೀನಾ, ಫ್ರಾನ್ಸ್, ಬ್ರಿಟನ್, ರಷ್ಯಾ ಮತ್ತು ಭಾರತ ಸೇರಿದಂತೆ ಪ್ರಮುಖ ಜಾಗತಿಕ ಬಲಾಢ್ಯ ದೇಶಗಳು ತಮ್ಮ ರಕ್ಷಣಾ ತಂತ್ರಜ್ಞಾನ, ಸುಧಾರಿತ ಕ್ಷಿಪಣಿ ಮತ್ತು ಅತ್ಯಾಧುನಿಕ ಫೈಟರ್ ಜೆಟ್‌ಗಳ ತಯಾರಿಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿವೆ. ಇಂತಹ ಸಂದರ್ಭದಲ್ಲಿ ಕ್ಷಿಪಣಿ ತಂತ್ರಜ್ಞಾನಕ್ಕೆ ಅತ್ಯಗತ್ಯವಾಗಿರುವ ಕಚ್ಚಾ ವಸ್ತುಗಳ ನಿಕ್ಷೇಪ ಚೀನಾದ ಪಾಲಾಗಿರುವುದು ಜಾಗತಿಕ ರಕ್ಷಣಾ ವಲಯದಲ್ಲಿ ಅಮೆರಿಕ ಸೇರಿದಂತೆ ಇತರೆ ಪ್ರಮುಖ ದೇಶಗಳಿಗೆ ಹೊಸ ತಲೆನೋವು ತಂದಿಟ್ಟಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಚೀನಾ
ತಂತ್ರಜ್ಞಾನ
ಸುದ್ದಿ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
Russian Oil: ಅಮೆರಿಕ ನಿರ್ಬಂಧ ಹಾಕಿದ್ರೂ ಡೋಂಟ್ ಕೇರ್! ರಷ್ಯಾ ತೈಲ ಖರೀದಿ ನಿಲ್ಲಲ್ಲ ಅಂದ ಭಾರತ
Recommended image2
32ನೇ ಬಾರಿ ಎವರೆಸ್ಟ್‌ ಹತ್ತಿ ಕಾಮೀ ರೀತಾ ಶೆರ್ಪಾ ದಾಖಲೆ; ಪರ್ವತದಲ್ಲಿ ಅಳಿಸಲಾಗದ ದಾಖಲೆ
Recommended image3
Health Emergency: ಆಫ್ರಿಕಾ ದೇಶಗಳಲ್ಲಿ ಎಬೋಲಾ ಪತ್ತೆ: 88 ಬಲಿ, 300 ಜನಕ್ಕೆ ಸೋಂಕು ಶಂಕೆ
Related Stories
Recommended image1
ಟ್ರಂಪ್ ಪ್ರವಾಸ ಮುಗಿಯುತ್ತಿದ್ದಂತೆಯೇ, ಚೀನಾ ಕೊಟ್ಟ ಉಡುಗೊರೆಯನ್ನು ಕಸದಬುಟ್ಟಿಗೆ ಎಸೆದ ಅಮೆರಿಕ ಅಧಿಕಾರಿಗಳು!
Recommended image2
ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved