ಬಾಂಗ್ಲಾದೇಶದಲ್ಲಿ ಎರಡು ಎಮ್ಮೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಹೆಸರಿಡಲಾಗಿದೆ. ಟ್ರಂಪ್ ಎಮ್ಮೆಯು ತನ್ನ ಕೇಶವಿನ್ಯಾಸದಿಂದ ಗಮನ ಸೆಳೆದರೆ, ನೆತನ್ಯಾಹು ಎಮ್ಮೆಯು ತನ್ನ ವಿಚಿತ್ರ ಸ್ವಭಾವದಿಂದ ಗುರುತಿಸಲ್ಪಟ್ಟಿದೆ.

ಢಾಕಾ: ಬಾಂಗ್ಲಾದೇಶದಲ್ಲಿ ಇರುವ 2 ಎಮ್ಮೆಗಳನ್ನು ನೋಡಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇಸ್ರೇಲ್‌ ಪ್ರಧಾನಿ ನೆತನ್ಯಾಹು ನೆತನ್ಯಾಹು ನೆನಪಾಗುತ್ತಾರಂತೆ. ಆದ್ದರಿಂದ ಅವುಗಳಿಗೆ ಆ ನಾಯಕರ ಹೆಸರನ್ನೇ ಇಡಲಾಗಿದೆ!

- ಅಚ್ಚರಿ ಎನ್ನಿಸಿದರೂ ಇದು ನಿಜ, ಟ್ರಂಪ್‌ ಎಮ್ಮೆಯ ಮೈಬಣ್ಣ ಹಾಗೂ ಕೂದಲ ಬಣ್ಣ ತಿಳಿಯಾಗಿದ್ದು, ಸ್ವಭಾವ ಶಾಂತವಾಗಿದೆ. ಇದು 700 ಕೆ.ಜಿ. ತೂಗುತ್ತಿದೆ. ಇದರ ಹೇರ್‌ ಸ್ಟೈಲ್‌ ಕೂಡ ಡೊನಾಲ್ಡ್ ಟ್ರಂಪ್‌ರಂತೆ ಇದೆ.

750 ಕೆ.ಜಿ. ತೂಗುವ ಎಮ್ಮೆ

ಇನ್ನು ನೆತನ್ಯಾಹು ಹೆಸರಿನ 750 ಕೆ.ಜಿ. ತೂಗುವ ಎಮ್ಮೆ ಆಗಾಗ ಗೊರಕೆ ಹೊಡೆಯುವುದು, ಪಾಲಕರ ಮೇಲೆ ಸುಖಾಸುಮ್ಮನೆ ಆಕ್ರಮಣ ಮಾಡುವುದು ಇತ್ಯಾದಿಗಳನ್ನು ಮಾಡುತ್ತದೆ.

ಆದರೆ, ಈದ್‌ ಹಬ್ಬ ಸಮೀಪಿಸುತ್ತಿರುವುದರಿಂದ ಇವುಗಳನ್ನೀಗ ಮಾರಿರುವುದಾಗಿ ಮಾಲೀಕರು ಹೇಳಿದ್ದಾರೆ. ಈ ಎಮ್ಮೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

Scroll to load tweet…