MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಚೆನ್ನೈನಲ್ಲಿ ನನ್ನ ಕೊನೆಯ ಟಿ20, ಧೋನಿ ಹೇಳಿದಂತೆ ಇದು ಕೂಲ್ ಕ್ಯಾಪ್ಟನ್ ವಿದಾಯದ ಪಂದ್ಯ?

ಚೆನ್ನೈನಲ್ಲಿ ನನ್ನ ಕೊನೆಯ ಟಿ20, ಧೋನಿ ಹೇಳಿದಂತೆ ಇದು ಕೂಲ್ ಕ್ಯಾಪ್ಟನ್ ವಿದಾಯದ ಪಂದ್ಯ?

ತವರಿನಲ್ಲಿ ನನ್ನ ಕೊನೆಯ ಏಕದಿನ ಪಂದ್ಯ ರಾಂಚಿ. ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲಿ. ಇದು ಧೋನಿ ಹೇಳಿದ ಮಾತು. ಈ ಐಪಿಎಲ್‌ನಲ್ಲಿ ಒಂದು ಪಂದ್ಯ ಆಡದ ಧೋನಿ ಇಂದು ಚೆನ್ನೈನಲ್ಲಿ ವಿದಾಯದ ಪಂದ್ಯ ಆಡುವ ಸಾಧ್ಯತೆ ಇದೆ.

1 Min read
Author : Chethan Kumar
Published : May 18 2026, 11:19 AM IST
Share this Photo Gallery
  • FB
  • TW
  • Linkdin
  • Whatsapp
15
ಚೆನ್ನೈನಲ್ಲಿ ಸಿಎಸ್‌ಕೆ ಕೊನೆಯ ಪಂದ್ಯ
Image Credit : X/@ChennaiIPL

ಚೆನ್ನೈನಲ್ಲಿ ಸಿಎಸ್‌ಕೆ ಕೊನೆಯ ಪಂದ್ಯ

2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತವರಿನಲ್ಲಿ ಕೊನೆಯ ಲೀಗ್ ಪಂದ್ಯ ಆಡುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಂಜುರಿ ಕಾರಣದಿಂದ ಹೊರಗುಳಿದ ಧೋನಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯಕ್ಕಾಗಿ ಚೆನ್ನೈನಲ್ಲಿ ತಂಡ ಸೇರಿಕೊಂಡಿದ್ದಾರೆ. ಅಭ್ಯಾಸವನ್ನು ನಡೆಸಿದ್ದಾರೆ. ಇದರ ನಡುವೆ ಧೋನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಜೊತೆಗೆ ಇದು ವಿದಾಯದ ಪಂದ್ಯ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಧೋನಿ ಹೇಳಿದ ಮಾತೇ ಕಾರಣ.

Add Asianetnews Kannada as a Preferred SourcegooglePreferred
25
ಧೋನಿ ವಿದಾಯದ ಪಂದ್ಯ
Image Credit : Instagram/chennaiipl

ಧೋನಿ ವಿದಾಯದ ಪಂದ್ಯ

ತವರಿನಲ್ಲಿ ಸಿಎಸ್‌ಕೆ ಕೊನೆಯ ಪಂದ್ಯ ಆಡುತ್ತಿದೆ. ಅಂತಿಮ ಎರಡು ಪಂದ್ಯ ಗೆದ್ದರೆ ಸಿಎಸ್‌ಕೆಗೆ ಪ್ಲೇಆಫ್ ಅವಕಾಶ ತೆರೆಯಲಿದೆ. ಇತ್ತ ಧೋನಿ ಇಂದಿನ ಪಂದ್ಯ ಆಡಿ ಐಪಿಎಲ್ ಟೂರ್ನಿಯಿಂದಲೂ ವಿದಾಯ ಹೇಳುವ ಸಾಧ್ಯತೆ ಕಾಣಿಸುತ್ತಿದೆ. ಇಂಜುರಿಯಿಂದ ಚೇತರಿಸಿಕೊಂಡು ಬಂದಿರುವ ಧೋನಿಗೆ ಇಂದೇ ಕೊನೆಯ ಪಂದ್ಯ ಆಗಲು ಧೋನಿ ಹೇಳಿದ ಚೆನ್ನೈ ಮಾತು ಕಾರಣವಾಗಿದೆ.

Related Articles

Related image1
Dhoni: ತಲಾ... ತಲಾ ಅಂತಾ ಕೂಗಿದ ಮೂರು ವರ್ಷದ ಪುಟಾಣಿ ಅಭಿಮಾನಿ ಹತ್ರ ಬಂದ ಧೋನಿ, ಚೆಪಾಕ್‌ನಲ್ಲಿ ಭಾವುಕ ಕ್ಷಣ (ವಿಡಿಯೋ)
Related image2
ಕೇವಲ 36 ಎಸೆತಗಳಲ್ಲಿ ಶತಕ, ಧೋನಿ ತಂಡಕ್ಕೆ ಮುಂಬೈ 'ಬಾಹುಬಲಿ'! ಯಾರು ಈ ಆಯುಷ್ ವರ್ತಕ್?
35
ಚೆನ್ನೈನಲ್ಲಿ ನನ್ನ ಕೊನೆಯ ಪಂದ್ಯ
Image Credit : X/@mufaddal_vohra

ಚೆನ್ನೈನಲ್ಲಿ ನನ್ನ ಕೊನೆಯ ಪಂದ್ಯ

2021ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಧೋನಿ ವಿದಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ನನ್ನ ಕ್ರಿಕೆಟ್ ಕುರಿತು ನನಗೆ ಯಾವತ್ತೂ ಪ್ಲಾನ್ ಇರುತ್ತೆ. ತವರಿನಲ್ಲಿ ನಾನು ಕೊನೆಯ ಏಕದಿನ ಪಂದ್ಯವನ್ನು ಹುಟ್ಟೂರು ರಾಂಚಿಯಲ್ಲಿ ಆಡಿದ್ದೆ. ಟಿ20 ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡುತ್ತೇನೆ. ಅದು ಮುಂದಿನ ಬಾರಿ ಅಥವಾ ಮುಂದಿನ 5 ವರ್ಷದಲ್ಲಿ, ಯಾವತ್ತು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು.

45
ಧೋನಿ ಹೇಳಿದಂತೆ 5 ವರ್ಷ, ಚೆನ್ನೈ ಪಂದ್ಯ
Image Credit : Asianet News

ಧೋನಿ ಹೇಳಿದಂತೆ 5 ವರ್ಷ, ಚೆನ್ನೈ ಪಂದ್ಯ

ಧೋನಿ ಹೇಳಿದಂತೆ ಇಂದಿಗೆ 5 ವರ್ಷವಾಗಿದೆ. ಇತ್ತ ಧೋನಿ ಆಸೆಯಂತೆ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ಕೊನೆಯ ಲೀಗ್ ಪಂದ್ಯ ಇದಾಗಿದೆ. ಇಷ್ಟೇ ಅಲ್ಲ ಇಂಜುರಿಯಿಂದ ಒಂದು ಪಂದ್ಯ ಆಡದ ಧೋನಿ ಇದೀಗ ಚೇತರಿಸಿಕೊಂಡು ಅಭ್ಯಾಸ ಕೂಡ ಮಾಡಿದ್ದಾರೆ. ಮುಂದಿನ ವರ್ಷ ಫಿಟ್ನೆಸ್, ಇಂಜುರಿ ಕಾರಣಗಳಿಂದ ಧೋನಿ ಐಪಿಎಲ್ ಆಡುವ ಸಾಧ್ಯತೆ ಕಡಿಮೆ. ಹೀಗಾಗಿ ಇಂದು ಧೋನಿ ವಿದಾಯದ ಪಂದ್ಯ ಆಡುವ ಸಾಧ್ಯತೆ ಹೆಚ್ಚು.

55
2025ರ ಬಳಿಕ ಐಪಿಎಲ್ ಪಂದ್ಯ ಆಡಿಲ್ಲ ಧೋನಿ
Image Credit : Getty

2025ರ ಬಳಿಕ ಐಪಿಎಲ್ ಪಂದ್ಯ ಆಡಿಲ್ಲ ಧೋನಿ

2026ರಲ್ಲಿ ಧೋನಿ ಒಂದು ಐಪಿಎಲ್ ಪಂದ್ಯ ಆಡಿಲ್ಲ. ಕೊನೆಯ ಐಪಿಎಲ್ ಪಂದ್ಯ ಆಢಿದ್ದು 2025ರ ಆವೃತ್ತಿಯಲ್ಲಿ. ಗುಜರಾತ್ ಟೈಟಾನ್ಸ್ ವಿರುದ್ಧ ಧೋನಿ ಆಡಿದ್ದರು. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡಿಲ್ಲ, ಕೀಪಿಂಗ್ ವೇಳೆ ಒಂದು ಕ್ಯಾಚ್ ಹಿಡಿದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಎಂ.ಎಸ್. ಧೋನಿ
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್
ಕ್ರಿಕೆಟ್

Latest Videos
Recommended Stories
Recommended image1
ಚಾಹಲ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಆರ್‌ಜೆ ಮಹ್ವಶ್, ನೀಡಿದ್ರು ಕಾರಣ
Recommended image2
ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ, ಪಂಜಾಬ್ ಕಿಂಗ್ಸ್‌ ಮಣಿಸಿ ಅಗ್ರಸ್ಥಾನಕ್ಕೇರಿದ ಡಿಫೆಂಡಿಂಗ್ ಚಾಂಪಿಯನ್ಸ್
Recommended image3
Fact Check: ಕ್ರಿಕೆಟರ್‌ ತಿಲಕ್‌ ವರ್ಮರನ್ನು ಲವ್‌ ಮಾಡುತ್ತಿದ್ದಾರಾ ಕನ್ನಡದ ಈ ನಟಿ? ಯಾರದು?
Related Stories
Recommended image1
Dhoni: ತಲಾ... ತಲಾ ಅಂತಾ ಕೂಗಿದ ಮೂರು ವರ್ಷದ ಪುಟಾಣಿ ಅಭಿಮಾನಿ ಹತ್ರ ಬಂದ ಧೋನಿ, ಚೆಪಾಕ್‌ನಲ್ಲಿ ಭಾವುಕ ಕ್ಷಣ (ವಿಡಿಯೋ)
Recommended image2
ಕೇವಲ 36 ಎಸೆತಗಳಲ್ಲಿ ಶತಕ, ಧೋನಿ ತಂಡಕ್ಕೆ ಮುಂಬೈ 'ಬಾಹುಬಲಿ'! ಯಾರು ಈ ಆಯುಷ್ ವರ್ತಕ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved