ಸಾಹಸಮಯ ವೈಮಾನಿಕ ಪ್ರದರ್ಶನ ವೇಳೆ ಯುಎಸ್ ಫೈಟರ್ ಜೆಟ್ ಆಗಸದಲ್ಲೇ ಡಿಕ್ಕಿಯಾಗಿದೆ. ಪರಿಣಾಮ ಎರಡು ವಿಮಾನಗಳು ವೀಕ್ಷಕರ ಪಕ್ಕದಲ್ಲೇ ಪತನಗೊಂಡಿದೆ. ಆಗಸದಲ್ಲಿನ ಈ ಬೀಕರ ದೃಶ್ಯ ಸೆರೆಯಾಗಿದೆ.

ಇದಾಹೋ (ಮೇ.18) ಏರ್ ಶೋ ವೈಮಾನಿಕ ಪ್ರದರ್ಶನ ವೇಳೆ ಯುಎಸ್ ಫೈಟರ್ ಜೆಟ್ ಡಿಕ್ಕಿಯಾಗಿ ಪತನಗೊಂಡಿದೆ. ಸಾಹಸಮಯ ಗನ್ ಸ್ಟ್ರೈಕ್ ಪ್ರದರ್ಶನ ವೇಳೆ ಎರಡು ಫೈಟರ್ ಜೆಟ್ ಡಿಕ್ಕಿಯಾಗಿದೆ. ಪರಿಣಾಮ ಎರಡು ಯುದ್ದ ವಿಮಾನ ಏರ್ ಶೋ ವೀಕ್ಷಿಸಲು ಆಗಮಿಸಿದ ವೀಕ್ಷಕರ ಪಕ್ಕದಲ್ಲೇ ಪತನಗೊಂಡ ಘಟನೆ ಅಮೆರಿಕದ ಇದಾಹೋದಲ್ಲಿರುವ ಮೌಂಟೈನ್ ಏರ್‌ಬೇಸ್‌ನಲ್ಲಿ ನಡೆದಿದೆ. ಅದೃಷ್ಠವಶಾತ್ ನಾಲ್ವರು ಪೈಲೆಟ್ ಸುರಕ್ಷಿತವಾಗಿ ಪ್ಯಾರಾಚ್ಯೂಟ್ ಮೂಲಕ ಇಳಿದಿದ್ದಾರೆ. ಈ ಭೀಕರ ಘಟನೆ ದೃಶ್ಯ ಸೆರೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಸದಲ್ಲಿ ಸಾಹಸಮಯ ಗನ್‌ಫೈಟರ್ ಶೋ

ಏರ್ ಶೋ ಆರಂಭಗೊಂಡ ಎರಡನೇ ದಿನ ಗನ್‌ಫೈಟರ್ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಏರ್ ಶೋ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ ಯುದ್ದ ವಿಮಾನಗಳು ಆಗಸದಲ್ಲಿ ಹಾರಾಡುತ್ತಾ ದಾಳಿ ನಡೆಸಲಿದೆ. ಗನ್ ಸ್ಟ್ರೈಕ್ ನಡೆಸುತ್ತಾ ಪ್ರದರ್ಶನ ನೀಡಲಿದೆ. ಹೀಗೆ ಗನ್‌ ಸ್ಟ್ರೈಕ್ ಏರ್ ಶೋದಲ್ಲಿ ಎರಡು ಫೈಟರ್ ಜೆಟ್ ಜೊತೆಯಾಗಿ ಸ್ಟ್ರೈಕ್ ಮಾಡಲು ಪ್ಲಾನ್ ಮಾಡಿತ್ತು. ಇದರಿಂದ ಎರಡು ಯುದ್ದ ವಿಮಾನಗಳು ಜೊತೆ ಜೊತೆಯಾಗಿ ಗನ್ ಸ್ಟ್ರೈಕ್ ಮಾಡಲು ಹತ್ತಿರ ಬಂದಿತ್ತು. ಈ ವೇಳೆ ಡಿಕ್ಕಿಯಾಗಿದೆ. ಗನ್ ಸ್ಟ್ರೈಕ್ ನಡೆಸುತ್ತಿದ್ದಂತೆ ವಿಮಾನ ಪತನ ಆರಂಭಗೊಂಡಿದೆ. ಜೊತೆಗೆ ಬೆಂಕಿ ಕಾಣಿಸಿಕೊಂಡಿದೆ.

ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಎರಡು ವಿಮಾನದ ನಾಲ್ವರು ಪೈಲೆಟ್‌ಗಳು ವಿಮಾನದಿಂದ ಸುರಕ್ಷಿತವಾಗಿ ಪ್ಯಾರಾಚ್ಯೂಟ್ ಬಳಸಿ ಕೆಳಕ್ಕೆ ಇಳಿದಿದ್ದಾರೆ. ಇತ್ತ ವಿಮಾನ ನೇರವಾಗಿ ವೀಕ್ಷಕರ ಪಕ್ಕದಲ್ಲೇ ಪತನಗೊಂಡಿದೆ. ವಿಮಾನ ನಿಲಕ್ಕೆ ಅಪ್ಪಳಿಸುತ್ತಿದ್ದಂತೆ ಸ್ಫೋಟಗೊಂಡಿದೆ. ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮಿದೆ. ಇತ್ತ ಕಪ್ಪು ಹೊಗೆ ಇಡೀ ವಾತಾವರಣ ಆವರಿಸಿದೆ. ಪೈಲೆಟ್‌ಗಳು ಸುರಕ್ಷಿತವಾಗಿ ವೀಕ್ಷಕರ ಕೆಲ ದೂರದಲ್ಲೇ ಲ್ಯಾಂಡ್ ಆಗಿದ್ದಾರೆ.

Scroll to load tweet…

ಇಡೀ ವಲಯವನ್ನು ಲಾಕ್‌ಡೌನ್ ಮಾಡಲಾಗಿದ್ದು, ಎಲ್ಲಾ ಚಟುವಟಿಕೆ ನಿರ್ಬಂಧಿಸಿದೆ. ಇದೀಗ ಅಮೆರಿಕ ತನಿಖೆಗೆ ಆದೇಶಿಸಿದೆ. ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ಈ ಘಟನೆ ಕುರಿತು ಅಮೆರಿಕ ತನಿಖಾ ಎಜೆನ್ಸಿಗಳು ತನಿಖೆ ನಡೆಸುತ್ತಿದೆ. ಜೊತೆಗೆ ಈ ವಲಯದಲ್ಲಿ ಯಾವುದೇ ಓಡಾಟಕ್ಕೂ ಅವಕಾಶ ನೀಡಿಲ್ಲ. ಏರ್ ಬೇಸ್ ಪಕ್ಕದಲ್ಲಿರುವ ಸಾರ್ವಜಿಕ ರಸ್ತೆಯನ್ನು ಬಂದ್ ಮಾಡಲಾಗಿದೆ. ವೀಕ್ಷಕರು ಆತಂಕಕಾರಿ ಘಚನೆಯನ್ನು ಬಿಚ್ಚಿಟ್ಟಿದ್ದಾರೆ. ಹಲವರು ಕಣ್ಮುಚ್ಚಿ ತೆರೆಯುವದರೊಳಗೆ ಎರಡು ವಿಮಾನ ಪತನಗೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.