ಇತ್ತೀಚೆಗೆ ಸಾರಾ ಅರ್ಜುನ್ ಪ್ರತಾಪ್ ಬಾಜ್ವಾ ಎಂಬುವರ ಜೊತೆ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಪ್ರೇಮ ಕಥೆಯ ಬಗ್ಗೆಯೂ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಸಿನಿಮಾದ ಕಥೆಯಂತೆ ಆಫ್-ಸ್ಕ್ರೀನ್ ನಲ್ಲೂ ಪತಿ, ಪತ್ನಿ ಮತ್ತು 'ಮೋಸ'ದ ಬಗ್ಗೆ ಚರ್ಚೆಗಳು ಜೋರಾಗಿವೆ.

ಬಾಲಿವುಡ್‌ನ ಚಟಪಟ ಹುಡುಗಿ ಸಾರಾ ಅಲಿ ಖಾನ್ (Sara Ali Khan) ಯಾವಾಗಲೂ ಏನಾದರೂ ಒಂದು ನೇರವಾದ ಮಾತು ಹೇಳಿ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಸಂಬಂಧಗಳ ಬಗ್ಗೆ ಆಡಿರುವ ಮಾತು ಕೇವಲ ಸುದ್ದಿಯಲ್ಲ, ದೊಡ್ಡ ಮಟ್ಟದ ವಾಗ್ವಾದಕ್ಕೆ ನಾಂದಿ ಹಾಡಿದೆ. "ಪ್ರೀತಿಯಲ್ಲಿ ಒಮ್ಮೆ ಮೋಸ ಮಾಡಿದವನನ್ನು ಯಾವತ್ತೂ ನಂಬಬಾರದು" ಎನ್ನುವ ಸಾರಾ ಅವರ ಸಿದ್ಧಾಂತಕ್ಕೆ ಈಗ ಇಡೀ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಗತಿ ಏನೆಂದರೆ, 'ಪತಿ ಪತ್ನಿ ಔರ್ ವೋ ದೋ' ಚಿತ್ರದ ಪ್ರಮೋಷನ್ ವೇಳೆ ನಂಬಿಕೆ ದ್ರೋಹದ ಬಗ್ಗೆ ಚರ್ಚೆ ಶುರುವಾಯಿತು. ಅಲ್ಲಿ ಸಾರಾ ಹೇಳಿದ್ದು ಹೀಗೆ- "ಮೋಸ ಎನ್ನುವುದು ಕೇವಲ ಒಂದು ತಪ್ಪಲ್ಲ, ಅದು ಆ ವ್ಯಕ್ತಿಯ ಗುಣ. ಒಮ್ಮೆ ಆ ಗಡಿಯನ್ನು ದಾಟಿದ ಮೇಲೆ ಅವರನ್ನು ಮತ್ತೆ ನಂಬುವುದು ಕಷ್ಟ. ಒಮ್ಮೆ ಚೀಟರ್ ಎನಿಸಿಕೊಂಡರೆ ಯಾವಾಗಲೂ ಚೀಟರ್ ಅಷ್ಟೇ!" ಈ ಮಾತುಗಳನ್ನು ಕೇಳಿದ ಕೂಡಲೇ ಪಕ್ಕದಲ್ಲೇ ಇದ್ದ ಆಯುಷ್ಮಾನ್ ಖುರಾನಾ (Ayushmann Khurrana) ಮಧ್ಯಪ್ರವೇಶಿಸಿ, "ನೋಡಿ ಸಾರಾ, ಎಲ್ಲರೂ ಬದಲಾಗುತ್ತಾರೆ. ಕೆಟ್ಟ ಗುಣಗಳಿಂದ ಹೊರಬಂದು ಒಳ್ಳೆಯವರಾದವರು ಎಷ್ಟೋ ಜನರಿದ್ದಾರೆ," ಎಂದು ಸಾರಾ ಅವರ ವಾದಕ್ಕೆ ತಣ್ಣೀರು ಸುರಿಸಿದರು.

ಆದರೆ ಪಟೌಡಿ ಸುಂದರಿ ಸುಮ್ಮನೆ ಕುಳಿತುಕೊಳ್ಳುವವರಲ್ಲ! ಆಯುಷ್ಮಾನ್ ಮಾತಿಗೆ ಕೌಂಟರ್ ನೀಡಿದ ಅವರು, "ನೀವು ಬದಲಾಗಬಹುದು ಎಂದು ನಾನು ಒಪ್ಪುತ್ತೇನೆ. ಆದರೆ ಒಮ್ಮೆ ಮೋಸಗಾರ ಎಂಬ ಟ್ಯಾಗ್ ಅಂಟಿಕೊಂಡ ಮೇಲೆ ಅದನ್ನು ಅಳಿಸುವುದು ಹೇಗೆ? ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದವರಿಗೆ ನೀವು ಮತ್ತೆ ಮೋಸ ಮಾಡುವುದಿಲ್ಲ ಎನ್ನುವ ಖಾತ್ರಿ ಏನು?" ಎಂದು ಪ್ರಶ್ನಿಸಿದರು.

ಇವರಿಬ್ಬರ ಮಾತಿನ ಚಕಮಕಿ ನೋಡಿ ಅಲ್ಲಿದ್ದ ರಕುಲ್ ಪ್ರೀತ್ ಕೂಡ ಗಲಿಬಿಲಿಯಾದರು. ರಕುಲ್ ಕೂಡ ಆಯುಷ್ಮಾನ್ ಪರವಾಗಿ ಬ್ಯಾಟ್ ಬೀಸಿ, "ಪರಿಸ್ಥಿತಿಗಳು ಮನುಷ್ಯನಿಂದ ತಪ್ಪು ಮಾಡಿಸಬಹುದು, ಹಾಗೆಂದ ಮಾತ್ರಕ್ಕೆ ಅವರು ಯಾವಾಗಲೂ ಕೆಟ್ಟವರಾಗಿರುವುದಿಲ್ಲ," ಎಂದರು.

ಕೊನೆಗೆ ಆಯುಷ್ಮಾನ್ ಖುರಾನಾ ವಾತಾವರಣವನ್ನು ತಿಳಿಗೊಳಿಸಲು ಸಾರಾ ಅವರ ಹಳೆಯ ಡೇಟಿಂಗ್ ಜೀವನದ ಬಗ್ಗೆ ಜೋಕ್ ಮಾಡಿದರು. "ಸಾರಾ, ಅವನನ್ನು ಮರೆತುಬಿಡು.. ಹೋಗಲಿ ಬಿಡು, ಕ್ಷಮಿಸು," ಎಂದು ಕಾಲೆಳೆಯುತ್ತಿದ್ದಂತೆ ಸಾರಾ ಮುಖದಲ್ಲಿ ನಗು ಕಾಣಿಸಿಕೊಂಡಿತು.

ಇತ್ತೀಚೆಗೆ ಸಾರಾ ಅರ್ಜುನ್ ಪ್ರತಾಪ್ ಬಾಜ್ವಾ ಎಂಬುವರ ಜೊತೆ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಪ್ರೇಮ ಕಥೆಯ ಬಗ್ಗೆಯೂ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಸಿನಿಮಾದ ಕಥೆಯಂತೆ ಆಫ್-ಸ್ಕ್ರೀನ್ ನಲ್ಲೂ ಪತಿ, ಪತ್ನಿ ಮತ್ತು 'ಮೋಸ'ದ ಬಗ್ಗೆ ಚರ್ಚೆಗಳು ಜೋರಾಗಿವೆ. ಮೇ 15 ರಂದು ತೆರೆಕಂಡ ಈ ಸಿನಿಮಾ ಈಗ ಎಲ್ಲರ ಗಮನ ಸೆಳೆಯುತ್ತಿದೆ.