‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!

ಬಿಜೆಪಿ ಶಾಸಕರ ಪೈಕಿ ಎಂ.ಪಿ. ರೇಣುಕಾಚಾರ್ಯ ಯಾವಾಗಲೂ ಡಿಫರೆಂಟ್ ಕಾರಣಗಳಿಗೆ ಸುದ್ದಿಯಲ್ಲಿರುವವರು. ಕೆಲವೊಮ್ಮೆ ನೀರಿಲ್ಲದ ಕಡೆ ಹುಟ್ಟು ಹಾಕಿದರೆ, ಮತ್ತೊಮ್ಮೆ ಲಾರಿ ಓಡಿಸ್ತಾರೆ. ಆದರೆ ಈ ಬಾರಿ ರೇಣುಕಾಚಾರ್ಯರನ್ನು ಸುದ್ದಿಗೆ ತಂದಿರುವುದು ಒಂದು ಹೋರಿ! ಹೌದು,  ದಾವಣಗೆರೆ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ರೇಣುಕಾಚಾರ್ಯಗೆ ಹೋರಿ‌ಯೊಂದು ತಿವಿದಿದೆ.

Share this Video
  • FB
  • Linkdin
  • Whatsapp

ದಾವಣಗೆರೆ (ನ.01): ಬಿಜೆಪಿ ಶಾಸಕರ ಪೈಕಿ ಎಂ.ಪಿ. ರೇಣುಕಾಚಾರ್ಯ ಯಾವಾಗಲೂ ಡಿಫರೆಂಟ್ ಕಾರಣಗಳಿಗೆ ಸುದ್ದಿಯಲ್ಲಿರುವವರು. ಕೆಲವೊಮ್ಮೆ ನೀರಿಲ್ಲದ ಕಡೆ ಹುಟ್ಟು ಹಾಕಿದರೆ, ಮತ್ತೊಮ್ಮೆ ಲಾರಿ ಓಡಿಸ್ತಾರೆ. ಒಮ್ಮೆ ತನ್ನನ್ನು ಹೊನ್ನಾಳಿ ಹುಲಿ ಎಂದು ಬಣ್ಣಿಸುತ್ತಾರೆ, ಇನ್ನೊಮ್ಮೆ ನ್ಯಾ. ಸಂತೋಷ್ ಹೆಗ್ಡೆಯವರನ್ನು ವಿಕೃತ ಮನಸ್ಸಿನ ವ್ಯಕ್ತಿ ಎನ್ನುತ್ತಾರೆ. ಅನರ್ಹ ಶಾಸಕರನ್ನು ತ್ಯಾಗ-ಬಲಿದಾನ ನೀಡೋ ಸೈನಿಕರಿಗೂ ಹೋಲಿಸಿ ಸುದ್ದಿಯಾಗ್ತಾರೆ.

ಆದರೆ ಈ ಬಾರಿ ರೇಣುಕಾಚಾರ್ಯರನ್ನು ಸುದ್ದಿಗೆ ತಂದಿರುವುದು ಒಂದು ಹೋರಿ! ಹೌದು, ದಾವಣಗೆರೆ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ರೇಣುಕಾಚಾರ್ಯಗೆ ಹೋರಿ‌ಯೊಂದು ತಿವಿದಿದೆ.ರೇಣುಕಾಚಾರ್ಯರನ್ನು ಬೆಂಬಲಿಗರು ಹೆಗಲ ಮೇಲೆ ಕೂರಿಸಿ ಸಂಭ್ರಮಿಸುತ್ತಿದ್ದ ವೇಳೆ ಹೋರಿ ನುಗ್ಗಿದೆ! ಅದರ ಓಟದ ರಭಸಕ್ಕೆ ರೇಣುಕಾಚಾರ್ಯ ಕೆಳಗೆ ಬಿದ್ದಿದ್ದಾರೆ. ಅವರಿಗೆ ಮತ್ತು ಇನ್ನಿತರ ಐದು ಮಂದಿಗೆ ತರಚಿದ ಗಾಯವಾಗಿದೆ.

Related Video