ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಇಂಧನ ಕೊರತೆ ಎದುರಾಗಿದೆ. ಇದನ್ನು ನಿಭಾಯಿಸಲು ಹೊಸ ಸರ್ಕಾರಿ ವಾಹನಗಳ ಖರೀದಿ ನಿಷೇಧ, ಮದುವೆಗಳಲ್ಲಿ ಒಂದೇ ಬಗೆಯ ಅಡುಗೆ ಮತ್ತು ರಾತ್ರಿ 9 ಗಂಟೆಗೆ ಅಂಗಡಿ ಮುಚ್ಚುವಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಇಸ್ಲಾಮಾಬಾದ್ (ಸೆ.19): ಯುಎಸ್ ಇರಾನ್ ಯುದ್ಧ, ಮಧ್ಯಪ್ರಾಚ್ಯದಲ್ಲಿ ಮತ್ತೆ ಕಾವೇರುತ್ತಿರುವ ಉದ್ವಿಗ್ನತೆಯ ಪರಿಣಾಮ ಪಾಕಿಸ್ತಾನದಲ್ಲಿ ಇಂಧನದ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಪರಿಸ್ಥಿತಿ ನಿಭಾಯಿಸಲು ತನ್ನ ನಾಗರಿಕರಿಗೆ ಹಲವು ಕಠಿಣ ನಿಯಮಗಳನ್ನ ವಿಧಿಸಲು ಶುರು ಮಾಡಿದೆ.
ಪಾಕಿಸ್ತಾನ ಇರಾನ್ ಪಕ್ಕದಲ್ಲೇ ಇದ್ದರೂ, ಇರಾನ್ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ ಇಂಧನ ಕೊರತೆ ಅದೆಷ್ಟು ತೀವ್ರವಾಗಿದೆಯೆಂದರೆ ಹಲವು ಕಠಿಣ ನಿಯಮಗಳನ್ನು ವಿಧಿಸಿದೆ. ಇದರಡಿ. ಹೊಸ ಸರ್ಕಾರಿ ವಾಹನ ಖರೀದಿಸುವುದನ್ನೇ ನಿಷೇಧಿಸಿದೆ. ಸದ್ಯ ಇರುವ ಸರ್ಕಾರಿ ವಾಹನಗಳನ್ನೇ ಬಳಕೆ ಮಾಡಬೇಕು, ಯಾವುದೇ ಕಾರಣಕ್ಕೂ ಸಿಬ್ಬಂದಿ, ಅಧಿಕಾರಿಗಳಿಗೆ ಹೊಸ ವಾಹನ ಖರೀದಿಸುವಂತಿಲ್ಲ.
ಮದುವೆಗಳಲ್ಲಿ ಒಂದೇ ವಿಧದ ಅಡುಗೆ ಮಾಡಲು ಅಪ್ಪಣೆ!
ಮದುವೆ ಎಂದರೇನೆ ಅಲ್ಲಿ ಬಗೆ ಬಗೆಯ ಆಹಾರ ಇರಲೇಬೇಕು. ಆದರೆ ಪಾಕಿಸ್ತಾನ ತನ್ನ ದೇಶದ ನಾಗರಿಕರಿಗೆ ಕಠಿಣ ನಿಯಮ ವಿಧಿಸಿದೆ. ಇದರ ಅಡಿ ಇನ್ಮುಂದೆ ದೇಶಾದ್ಯಂತ ನಡೆಯುವ ಮದುವೆಗಳಲ್ಲಿ ಒಂದೇ ವಿಧದ ಅಡುಗೆ ಮಾಡಲು ಅಪ್ಪಣೆ ನೀಡಿದೆ. ಅಂದರೆ ಮದುವೆಯಲ್ಲಿ ಅನ್ನ-ಸಾಂಬಾರು ಜೊತೆಗೆ ಬಿರಿಯಾನಿ, ಜಿಲೇಬಿ, ಪಾಯಸ ಮಾಡುತ್ತೇವೆ ಎಂದರೆ ಅವಕಾಶ ಇಲ್ಲ. ಏನೇ ಮಾಡಿದರೂ ಅದು ವಿಧದ ಅಡುಗೆ ಆಗಿರಬೇಕು.
ಏನೇನು ಕ್ರಮಗಳು?
ಉಳಿದಂತೆ, 3 ತಿಂಗಳುಗಳ ಕಾಲ ಸರ್ಕಾರಿ ವಾಹನಗಳಿಗೆ ಹಂಚಲಾಗುವ ಇಂಧನದ ಪ್ರಮಾಣ ಶೇ.50ರಷ್ಟು ಇಳಿಕೆ ಮಾಡಲಾಗಿದೆ. ಅಧಿಕಾರಿಗಳ ವಿದೇಶ ಪ್ರವಾಸಗಳನ್ನು ನಿಷೇಧಿಸಿದೆ. ಅಗತ್ಯ ಸಭೆಗಳನ್ನು ಆನ್‌ಲೈನ್ ಮೂಲಕ ನಡೆಸುವುದು ಇದರಿಂದ ಇಂಧನ ಖರ್ಚು ತಪ್ಪಿಸಬಹುದು. ರಾತ್ರಿ 9 ಗಂಟೆಯೊಳಗೆ ಅಂಗಡಿ, ಮಾರುಕಟ್ಟೆ, ಮಾಲ್ ಮತ್ತು ವಾಣಿಜ್ಯ ಕೇಂದ್ರಗಳನ್ನು ಮುಚ್ಚುವುದು ಸೇರಿದಂತೆ ಇಂಧನ ಉಳಿತಾಯಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.


