ಮುಟ್ಟು ನಿಲ್ಲುವ ಸಮಯದ ಬಗ್ಗೆ ಅನೇಕ ಮಹಿಳೆಯರು ಮುಕ್ತವಾಗಿ ಮಾತನಾಡುವುದಿಲ್ಲ. ನಟಿ ರಮ್ಯಾ ತಮ್ಮ 35ನೇ ವಯಸ್ಸಿನಲ್ಲಿಯೇ ಪೆರಿಮೆನೋಪಾಸ್‌ನಿಂದ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದು, ಈ ಅನುಭವವೇ ರಾಜ್ಯ ಸರ್ಕಾರದ 'ಋತುತಾರೆ' ಯೋಜನೆಗೆ ಸ್ಫೂರ್ತಿಯಾಗಿದೆ.
ಮುಟ್ಟು ನಿಲ್ಲುವ ಸಮಯ (menopause) ಎನ್ನುವುದು ಪ್ರತಿ ಹೆಣ್ಣೂ ಅನುಭವಿಸಲೇಬೇಕಿರುವ ಒಂದು ಘಟ್ಟ. ಕೆಲವರಿಗೆ 35 ಆದ್ಮೇಲೆ ಈ ಸಮಯ ಬಂದರೆ ಮತ್ತೆ ಕೆಲವರಿಗೆ 60 ಆದ ಮೇಲೆ ಬರುವುದು ಇದೆ. ಅವರವರ ದೇಹ ಪ್ರಕೃತಿ, ಫುಡ್ ಹ್ಯಾಬಿಟ್, ಪರಿಸರ, ವಂಶ ಪಾರಂಪರ್ಯ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಕೆಲವರಿಗೆ ಮುಟ್ಟು ನಿಲ್ಲುವ ಸುಮಾರು 10-12 ವರ್ಷಗಳ ಮೊದಲು (ಅದನ್ನು ಪೆರಿ ಮೆನೋಪಾಸ್- perimenopause) ಲಕ್ಷಣಗಳು ಕಂಡು ಬರುತ್ತವೆ. ಆ ಸಮಯದಲ್ಲಿ ದೇಹದಲ್ಲಿ ಇಸ್ಟ್ರೋಜಿನ್ ಕಡಿಮೆ ಆಗುವ ಕಾರಣದಿಂದ ಒಂದಲ್ಲೊಂದು ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ನಿದ್ದೆ ಬರದೇ ಇರುವುದು, ದೇಹದಲ್ಲಿ ಬದಲಾವಣೆ ಆಗೋದು, ಯಾವುದಕ್ಕೂ ಮನಸ್ಸು ಇಲ್ಲದೇ ಇರುವುದು, ಯಾರಾದರೂ ಚಿಕ್ಕ ವಿಷಯ ಹೇಳಿದರೂ ಅದು ದೊಡ್ಡ ಮಟ್ಟದಲ್ಲಿ ಕಿರಿಕಿರಿ ಎನ್ನಿಸುವುದು, ಕೆಲವೊಮ್ಮೆ ಈ ಲೈಫೇ ಬೇಡ ಎನ್ನಿಸುವುದು, ಎಲ್ಲರ ಮೇಲೂ ಕೋಪ ಬರುವುದು.... ಹೀಗೆ ಏನೇನೋ ಲಕ್ಷಣಗಳು, ಒಬ್ಬೊಬ್ಬರಲ್ಲಿ ಒಂದು ರೀತಿಯ ಲಕ್ಷಣಗಳು ಕಾಣಿಸುವುದು ಉಂಟು. ಆದರೆ ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಈ ನೋವನ್ನು ಕಚೇರಿಗಳಲ್ಲಿ, ಅಷ್ಟೇ ಏಕೆ ಮನೆಯವರೂ ಅರ್ಥ ಮಾಡಿಕೊಳ್ಳದೇ ಮತ್ತಷ್ಟ ನೋವು ಅನುಭವಿಸುವುದು ಇದೆ.
ಓಪನ್ ಆಗಿ ಮಾತನಾಡುವವರು ಕಮ್ಮಿ
ಆದರೆ, ಮುಟ್ಟು, ಮೆನೋಪಾಸ್ ಇಂಥ ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡುವವರು ತುಂಬಾ ಕಡಿಮೆ. ಆದರೆ ಇದೀಗ ರಾಜ್ಯ ಸರ್ಕಾರ, ಋತುತಾರೆ ಎನ್ನುವ ಹೊಸ ಯೋಜನೆಯನ್ನು ಶುರು ಮಾಡಿದ್ದು, ಇದಕ್ಕೆ ಮೋಹಕ ತಾರೆ ರಮ್ಯಾ ಅವರನ್ನು ರಾಯಭಾರಿ ಮಾಡಿದೆ. (ಇದರ ಸಂಪೂರ್ಣ ವಿವರ ಈ ಸುದ್ದಿಯ ನಡುವಿನhttps://kannada.asianetnews.com/health-life/johnson-and-johnson-seeks-to-end-decade-long-talc-litigation-with-52-thousand-cr-settlement-suc/articleshow-pqphw0t ಲಿಂಕ್ನಲ್ಲಿದೆ). ಈ ಸಂದರ್ಭದಲ್ಲಿ ನಟಿ ರಮ್ಯಾ ಮಾತನಾಡಿದ್ದಾರೆ. ಈ ಯೋಜನೆಯ ಆರಂಭದ ಕುರಿತು ಅವರು ಅತ್ಯಂತ ಸುಂದರವಾಗಿ ಮಾತನಾಡಿದ್ದಾರೆ.
'35 ವರ್ಷ ಆದ್ಮೇಲೆ ನಾನು ನಾನಾಗಿರಲಿಲ್ಲ'
'35 ವರ್ಷ ಆದ್ಮೇಲೆ ನಾನು ನನ್ನ ಹಾಗೆ ಇರಲಿಲ್ಲ. ನಾನು ನಾನಾಗಿರಲಿಲ್ಲ. ಏನೋ ತಪ್ಪಾಗಿದೆ ಎಂದು ತಿಳಿಯುತ್ತಿತ್ತು. ನನ್ನ ಎನರ್ಜಿ ಲೆವೆಲ್ ಕುಸಿದು ಹೋಯ್ತು. ನಿದ್ದೆ ಸರಿ ಬರ್ತಾ ಇರಲಿಲ್ಲ. ಪೀರಿಯಡ್ಸ್ ಸರಿ ಆಗ್ತಾ ಇರಲಿಲ್ಲ. ಡಾಕ್ಟರ್ ಬಳಿ ಹೋದ್ರೆ ಏನೂ ಇಲ್ಲ ಎಂದುಬಿಟ್ಟರು. ಇವೆಲ್ಲಾ ನಾರ್ಮಲ್ ವಿಟಮಿನ್ ಬಿ12, ಡಿ 3 ಕಡಿಮೆ ಆದಕ್ಕೆ ಹೀಗೆಲ್ಲಾ ಆಗ್ತಾ ಇದೆ ಎಂದರು. ಆದರೆ ನನಗೆ ಇಲ್ಲಾ ಏನೋ ಸಮಸ್ಯೆ ಇತ್ತು ಅಂದು ಗೊತ್ತಾಗಿತ್ತು. ಏನಾಗ್ತಿದೆ ಎನ್ನೋದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ವಿದೇಶಕ್ಕೆ ಹೋದರೂ ಇದರ ಬಗ್ಗೆ ಸರಿಯಾಗಿ ಯಾರೂ ಏನೂ ಹೇಳಲಿಲ್ಲ. ಏಕೆಂದರೆ ಎಂಬಿಬಿಎಸ್ನಲ್ಲಿಯೂ ಮೆನೋಪಾಸ್ ಬಗ್ಗೆ ಸರಿಯಾಗಿ ಸ್ಟಡಿ ಮಾಡಲಿಲ್ಲ. 40 ವರ್ಷ ಆದ್ಮೇಲೆ ನಿಮ್ಮ ಲೈಫ್ ಮುಗಿಯಿತು ಎನ್ನೋ ನಾರ್ಮಲ್ ಮಾತಿದೆ. ಸೋ ಮೆನೋಪಾಸ್ ಬಗ್ಗೆ ಒಂದು ಅಂಡರ್ಸ್ಟ್ಯಾಂಡ್ ಬೇಕಿತ್ತು ಎನ್ನುವ ಕಾರಣಕ್ಕೆ ತುಂಬಾ ರೀಸರ್ಚ್ ಮಾಡಿದೆ. ಬೇರೆ ದೇಶಗಳ ಪಾಲಿಸಿ ಬಗ್ಗೆ ಮಾತನಾಡಿದೆ. ಇದರ ಫಲವಾಗಿಯೇ ಬಂದದ್ದು ಈ ಋತುತಾರೆ ಯೋಜನೆ ಎಂದರು.
ಈ ಮೂಲಕ ಮೆನೋಪಾಸ್ ಸಮಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ಪರಿಹಾರ ನೀಡುವುದು, ಅವರಿಗೆ ಸಮಾಧಾನ ನೀಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಅದರ ಸಂಪೂರ್ಣ ಮಾಹಿತಿ ಈ ಕೆಳಗಿನ ಲಿಂಕ್ನಲ್ಲಿದೆ.


