- Home
- Entertainment
- TV Talk
- ದಶಕಗಳಿಂದ ಪೈಲಟ್ ಆಗೋ ಕನಸು ಕಂಡ 'ನಾ ನಿನ್ನ ಬಿಡಲಾರೆ' ದುರ್ಗಾ ಲೈಫ್ನಲ್ಲಿ ಅಂದು ಆಗಿದ್ದೇನು
ದಶಕಗಳಿಂದ ಪೈಲಟ್ ಆಗೋ ಕನಸು ಕಂಡ 'ನಾ ನಿನ್ನ ಬಿಡಲಾರೆ' ದುರ್ಗಾ ಲೈಫ್ನಲ್ಲಿ ಅಂದು ಆಗಿದ್ದೇನು
'ನಾ ನಿನ್ನ ಬಿಡಲಾರೆ' ಖ್ಯಾತಿಯ ನಟಿ ರಿಷಿಕಾ, ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಬಾಲ್ಯದಲ್ಲಿ ಪೈಲಟ್ ಆಗುವ ಕನಸು ಕಂಡಿದ್ದರು. ಆದರೆ, ವಂಡರ್ಲಾದಲ್ಲಿ ನಡೆದ ಒಂದು ಘಟನೆಯಿಂದಾಗಿ ತಮ್ಮ ಎತ್ತರದ ಭಯವನ್ನು ಅರಿತುಕೊಂಡು, ಆ ಕನಸನ್ನು ಕೈಬಿಟ್ಟು ನಟನಾ ಕ್ಷೇತ್ರಕ್ಕೆ ಬಂದರು.

ನಾ ನಿನ್ನ ಬಿಡಲಾರೆ ದುರ್ಗಾ
ನಟಿ ರಿಷಿಕಾ ಎನ್ನುವುದಕ್ಕಿಂತ ನಾ ನಿನ್ನ ಬಿಡಲಾರೆಯ ದುರ್ಗಾ ಎಂದರೆ ಎಲ್ಲರಿಗೂ ತಿಳಿದುಬಿಡುತ್ತದೆ. ಈ ಸೀರಿಯಲ್ನಲ್ಲಿ ಪೆದ್ದು ಪೆದ್ದಾಗಿ ನಟಿಸಿ ಈಗ ಪ್ರಬುದ್ಧ ಪತ್ನಿಯಾಗಿರುವ ದುರ್ಗಾಳ ರಿಯಲ್ ಹೆಸರು ರಿಷಿಕಾ.
ಎಂಜಿನಿಯರ್ ಪದವೀಧರೆ
ಮೂಲತಃ ಮಲೆನಾಡು ಶಿವಮೊಗ್ಗದವರಾದ ಇವರು, ಹುಟ್ಟಿ ಬೆಳೆದೆಲ್ಲಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ರಿಷಿಕಾ ಇಂಜಿನಿಯರಿಂಗ್ ಪದವೀಧರೆ. ಇಂಜಿನಿಯರಿಂಗ್ ಕೆಲಸಕ್ಕೆ ಸೇರುವ ಬದಲು ನಟನೆಯತ್ತ ಮುಖ ಮಾಡಿದರು. 2012 ರಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರೋ ನಟಿ, ಇದಾಗಲೇ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದಾರೆ.
ಹಲವು ಸೀರಿಯಲ್ಗಳಲ್ಲಿ ನಟನೆ
ನಾನಿ ನ್ನ ಬಿಡಲಾರೆ ಸೀರಿಯಲ್ ರಿಷಿಕಾಗೆ ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್ನಲ್ಲಿ ಸೈಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.
ಅಂದು ನಡೆದ ಘಟನೆ ಏನು?
ಅಂದಹಾಗೆ, ಚಿಕ್ಕಂದಿನಿಂದಲೂ ಪೈಲಟ್ ಆಗೋ ಕನಸು ಕಂಡ ರಿಷಿಕಾ ಕೊನೆಗೆ ತಮ್ಮ ಆಸೆಯನ್ನು ಅದೊಂದು ಘಟನೆಯಿಂದ ಅಲ್ಲಿಯೇ ಬಿಟ್ಟ ಬಗ್ಗೆ kannada.mojo360 ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ' ನನ್ನ ಅಪ್ಪ ಎಚ್ಎಎಲ್ನಲ್ಲಿ ಉದ್ಯೋಗದಲ್ಲಿ ಇದ್ದರು. ನಾನು ಅಪ್ಪನ ಜೊತೆ ಆಫೀಸ್ಗೆ ಹೋದಾಗಲೆಲ್ಲಾ ನನ್ನ ತಲೆಯಲ್ಲಿ ಓಡ್ತಿದ್ದಿದ್ದು ಒಂದೇ. ಪೈಲಟ್ ಆಗುವ ಕನಸು. ಅಲ್ಲಿ ಅಪ್ಪನ ಸೀರಿಯಲ್ ಏರೋನಾಟಿಕಲ್ ಎಂಜಿನಿಯರ್ ಇದ್ದರು. ಅವರ ಬಳಿ ಎಲ್ಲಾ ವಿವರ ಕೇಳಿ ಪಡೆದಿದ್ದೆ' ಎಂದು ಅಂದಿನ ಘಟನೆಗಳನ್ನು ರಿಷಿಕಾ ಹೇಳಿದ್ದಾರೆ.
ಸಣ್ಣಗೆ ಇದ್ಯಾ ಅಂದರು
'ಪಿಯುಸಿ ಆದ ಬಳಿಕ ಅಪ್ಪನ ಸೀನಿಯರ್ ಬಳಿ ಮಾತನಾಡಿದಾಗ, ನೀನು ತುಂಬಾ ಸಣ್ಣಗೆ ಇದ್ಯಾ, ಪೈಲಟ್ ಆಗಲು ಸ್ಟ್ರೆಂಗ್ಥ್ ಬೇಕು. ನೀನು ಆಯ್ಕೆ ಆಗೋದು ಕಷ್ಟ ಎಂದಾಗ ತುಂಬಾ ನೋವು ಪಟ್ಟುಕೊಂಡೆ. ಸ್ಟ್ರಾಂಗ್ ಆಗೋದು ಹೇಗೆ ಎನ್ನುವ ಚಿಂತೆನೂ ಕಾಡಿತ್ತು. ಹೇಗಾದರೂ ಮಾಡಿ ಪೈಲಟ್ ಆಗಲೇಬೇಕು ಎಂದು ಕನಸು ಕಂಡಿದ್ದೆ' ಎಂದಿದ್ದಾರೆ.
ಕನಸು ನುಚ್ಚು ನೂರು
ಆದರೆ, ಅವರ ಲೈಫ್ನಲ್ಲಿ ನಡೆದ ಆ ಒಂದು ಘಟನೆಯಿಂದ, ಪೈಲಟ್ ಕನಸು ನುಚ್ಚು ನೂರಾಯ್ತಂತೆ. ಅದೇನೆಂದರೆ, ಬೆಂಗಳೂರಿನ ವಂಡರ್ಲಾಗೆ ಹೋಗಿದಾಗ, ಅಲ್ಲಿ ಥಹರೇವಾರಿ ಆಟದ ವಸ್ತುಗಳಿವೆ. ಹಿಂದೆ- ಮುಂದೆ, ಮೇಲೆ- ಕೆಳಗೆ ಮಾಡುವ ಜೋಕಾಲಿ ಎಲ್ಲವೂ ಇದೆ. ಅದನ್ನು ಹತ್ತಿ ಕೆಳಗೆ ನೋಡಿದಾಗ ತಲೆ ಸುತ್ತಿ ಬಂತು. ಆಗಲೇ ನನಗೆ ಹೈಟ್ ಫೋಬಿಯಾ ಇರೋದು ತಿಳಿಯಿತು. ಇನ್ನು ನಾನು ಪೈಲಟ್ ಆದ್ರೆ ನನ್ನ ಕಥೆ ಮಾತ್ರವಲ್ಲ, ಜನರ ಕಥೆನೂ ಗೋವಿಂದ ಎಂದು ಅಷ್ಟೂ ವರ್ಷಗಳ ಆಸೆಗೆ ತಿಲಾಂಜಲಿ ಇಟ್ಟೆ ಎಂದಿದ್ದಾರೆ ರಿಷಿಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

