ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದ್ವೇಷ ಹೆಚ್ಚುತ್ತಿದ್ದು,ಬಾಂಗ್ಲಾ ಸರ್ಕಾರ ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದೆ.

Share this Video
  • FB
  • Linkdin
  • Whatsapp

ಬಾಂಗ್ಲಾ ಸರ್ಕಾರ ಹಿಂದೂ ಧಾರ್ಮಿಕ ಮುಖಂಡ, ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನ ದೇಶದ್ರೋಹದ ಆರೋಪದ ಮೇಲೆ ಬಂಧಿಸಿದೆ.. ಶೇಖ್ ಹಸೀನಾ ಸರ್ಕಾರ ಪತನದ ನಂತರ ಹಿಂದೂಗಳು ಟಾರ್ಗೆಟ್ ಆಗಿದಾರೆ ಅನ್ನೋ ಮಾತಿಗೆ, ಈ ಘಟನೆಯೇ ಹಸಿ ಹಸಿ ಸಾಕ್ಷಿ.ಸದ್ಗುರುವನ್ನೇ ಸೆರೆ ಹಿಡಿದು ಕಂಬಿ ಹಿಂದೆ ನಿಲ್ಲಿಸೋಕೆ ಹೊರಟುಬಿಟ್ಟಿದೆ, ಬಾಂಗ್ಲಾದೇಶದಲ್ಲಿ ತಲೆ ಎತ್ತಿರೋ ಹೊಸ ಸರ್ಕಾರ.. ಅಷ್ಟಕ್ಕೂ ಆ ಹಿಂದೂ ಸನ್ಯಾಸಿ ಮೇಲೆ ಅವರಿಗೆ ಈ ಪರಿ ಸಿಟ್ಟೇಕೆ? ದ್ವೇಷವೇಕೆ? ದಿನದಿನಕ್ಕೂ ಹಿಂದೂಗಳ ಪಾಲಿಗೆ ಘೋರ ನರಕವಾಗ್ತಾ ಇರೋದೇಕೆ ಪಕ್ಕದ ದೇಶ? ಪಾಷಂಡಿ ಪಾಕಿಸ್ತಾನದ ಜೊತೆ ದುಷ್ಟ ಬಾಂಗ್ಲಾ ಕೂಡ ಜೈಜೋಡಿಸಿದೆ.. ಇದರಿಂದ ಭಾರತಕ್ಕೆ ಶುರುವಾಗೋಯ್ತಾ ಕೇಡುಗಾಲ? ಬಾಂಗ್ಲಾದೇಶ ಈಗ ಭಾರತದ ನೆರೆರಾಷ್ಟ್ರವಾಗಿ ಉಳಿದಿಲ್ಲ.. ಹೊಸ ಹೊರೆಯಾಗಿ ಬದಲಾಗ್ತಾ ಇದೆ.. ಭಾರತದ ಬದ್ಧ ವಿರೋಧಿ, ಪಾಕಿಸ್ತಾನದ ಜೊತೆ ಕೈಜೋಡಿಸಿ, ಭಾರತ ಹಾಗೂ ಹಿಂದೂಗಳ ವಿರುದ್ಧ ಎಗರಿಬೀಳೊಕೆ ಸಿದ್ಧವಾದ ಹಾಗೆ ಕಾಣ್ತಾ ಇದೆ. ಈ ಎಲ್ಲಾ ಆಘಾತಕಾರಿ ಪ್ರಶ್ನೆಗಳಿಗೂ ಆತಂಕಕಾರಿ ಉತ್ತರ ಸಿದ್ಧವಾಗಿ ನಿಂತಿದೆ.. ಹಿಂದೂಗಳ ಪಾಲಿಗೆ ನರಕವಾಗಿರೋ ಬಾಂಗ್ಲಾದೇಶದ ಕತೆ, ಇಲ್ಲಿದೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video