Weekly Horoscope: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಉದ್ಯೋಗದಲ್ಲಿ ಸ್ವಲ್ಪ ಅತಂತ್ರತೆ ಉಂಟಾಗಲಿದೆ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

First Published Nov 5, 2023, 11:13 AM IST | Last Updated Nov 5, 2023, 11:13 AM IST

ಈ ವಾರದ ವಿಶೇಷ ನೋಡುವುದಾದ್ರೆ, ನವೆಂಬರ್ 06 ರಂದು ಸೋಮವಾರ ಬುಧಗ್ರಹ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡುತ್ತಾನೆ. ನವೆಂಬರ್ 11 - ಶನಿವಾರ - ಧನ ತ್ರಯೋದಶಿಯಾಗಿದ್ದು, ಇದು ನೀರು ತುಂಬುವ ಹಬ್ಬವಾಗಿದೆ. ಇಲ್ಲಿಂದ ದೀಪಾವಳಿ ಆರಂಭವಾಗುತ್ತದೆ. ಈ ವಾರ ಮಿಥುನ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯ ಬಲವಿಲ್ಲ, ಅಲರ್ಜಿಗಳ ಬಾಧೆ, ಚರ್ಮ ಸಂಬಂಧಿ ತೊಂದರೆ, ವೃತ್ತಿಯಲ್ಲಿ ಅನುಕೂಲ, ಹಣ ಸಹಾಯ ಇರಲಿದೆ. ವಾರ ಮಧ್ಯದಲ್ಲಿ ಸಹೋದರರ ಸಹಕಾರ, ವೃತ್ತಿಯಲ್ಲಿ ಅನುಕೂಲವಿದ್ದು, ಸ್ನೇಹಿತರು-ಬಂಧುಗಳಲ್ಲಿ ಮನಸ್ತಾಪ ಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟ. ವಾರಾಂತ್ಯದಲ್ಲಿ ನೀರಿನ ಅಭಾವ ಉಂಟಾಗಲಿದ್ದು, ಬಂಧು-ಮಿತ್ರರಲ್ಲಿ ಬೇಸರ ಉಂಟಾಗಲಿದೆ. ಸಾಲದ ಸುಳಿಗೆ ಸಿಲುಕುವಿರಿ. ಈ ರಾಶಿಯವರು ಪರಿಹಾರಕ್ಕೆ ವಿಷ್ಣು ಸನ್ನಿಧಾನದಲ್ಲಿ ಗಂಧಾಲಂಕಾರ ಮಾಡಿಸಿ.

ಇದನ್ನೂ ವೀಕ್ಷಿಸಿ:  ಬೆಂಗಳೂರು ಫೌಂಡೇಶನ್ ವತಿಯಿಂದ ಗೌರವ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ..ರಾಜ್ಯಪಾಲರಿಂದ ವಂದನೆ