ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!

ತನ್ನದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಚಂದ್ರು ಎಂಬ ಯುವಕ ಬರ್ಬರವಾಗಿ ಕೊಲೆಯಾಗಿದ್ದಾನೆ. ಮಧ್ಯರಾತ್ರಿ ಮಹಿಳೆಯ ಕರೆಯಿಂದ ಮನೆಯಿಂದ ಹೊರಟ ಆತನನ್ನು, ಆಕೆಯ ಪತಿ ಮತ್ತು ಸಹೋದರನ ಜೊತೆ ಸೇರಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟುಹಾಕಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಪ್ರೀತಿ ಮಿತಿ ಮೀರಿದರೆ ಪ್ರಾಣಕ್ಕೆ ಸಂಚಕಾರ ಎಂಬ ಮಾತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ತನ್ನದೇ ಗ್ರಾಮದ ಮಹಿಳೆಯೊಬ್ಬಳ ಜೊತೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧವು ಒಬ್ಬ ತರುಣನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಮೂರು ದಿನಗಳ ಕಾಲ ನಾಪತ್ತೆಯಾಗಿದ್ದ ಯುವಕ ಚಂದ್ರು, ಕೊನೆಗೆ ಸೇತುವೆಯೊಂದರ ಕೆಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

Add Asianetnews Kannada as a Preferred SourcegooglePreferred

ಬಡತನ ಸೀಳಿ ಬಂದಿದ್ದ ಚಂದ್ರು: 

ಕೊಲೆಯಾದ ಚಂದ್ರು ಒಬ್ಬ ಅತ್ಯಂತ ಕಷ್ಟಜೀವಿ. ಬಡ ಕುಟುಂಬದಲ್ಲಿ ಹುಟ್ಟಿದ್ದ ಈತ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಹಗಲಿರುಳು ಶ್ರಮಿಸಿದ್ದ. ಆರಂಭದಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಚಂದ್ರು, ತನ್ನ ಶ್ರಮದ ಫಲವಾಗಿ ಎರಡು ಬುಲೆರೋ ವಾಹನಗಳಿಗೆ ಮಾಲೀಕನಾಗಿದ್ದ. ಅಪ್ಪ, ಅಮ್ಮ ಮತ್ತು ಇಬ್ಬರು ಸಹೋದರರಿಗೆ ಆಧಾರಸ್ತಂಭವಾಗಿದ್ದ ಈತ, ಇಡೀ ಊರಿನಲ್ಲೇ 'ಒಳ್ಳೆಯ ಹುಡುಗ' ಎಂಬ ಹೆಸರು ಗಳಿಸಿದ್ದ. ಆದರೆ ಆತನ ಒಂದು ತಪ್ಪು ನಿರ್ಧಾರ ಇಡೀ ಜೀವನವನ್ನೇ ಬಲಿತೆಗೆದುಕೊಂಡಿದೆ.

ಮಧ್ಯರಾತ್ರಿ ಬಂದ ಆ ಒಂದು ಕರೆ:

ಘಟನೆ ನಡೆದ ದಿನ ರಾತ್ರಿ ಚಂದ್ರು ಮನೆಯಲ್ಲಿ ಮಲಗಿದ್ದ. ಆದರೆ ಮಧ್ಯರಾತ್ರಿ ಆತನ ಮೊಬೈಲ್‌ಗೆ ಒಂದು ಕರೆ ಬಂದಿದೆ. ಅದು ಆತ ಸಂಬಂಧ ಇಟ್ಟುಕೊಂಡಿದ್ದ ಅದೇ ಗ್ರಾಮದ ಮಹಿಳೆಯ ಕರೆ. ಅವಳು ಕರೆದಿದ್ದೇ ತಡ, ಚಂದ್ರು ಮನೆಯವರಿಗೆ ತಿಳಿಸದೆ ಹೊರಟು ಹೋಗಿದ್ದಾನೆ. ಮರುದಿನ ಬೆಳಿಗ್ಗೆ ನೋಡಿದಾಗ ಚಂದ್ರು ನಾಪತ್ತೆಯಾಗಿದ್ದ. ಕುಟುಂಬಸ್ಥರು ಮೂರು ದಿನಗಳ ಕಾಲ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ನಾಲ್ಕನೇ ದಿನ ಸೇತುವೆಯೊಂದರ ಕೆಳಗೆ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾದಾಗ ಇಡೀ ಕುಟುಂಬ ಆಘಾತಕ್ಕೆ ಒಳಗಾಯಿತು. ಹಂತಕರು ಚಂದ್ರುವನ್ನು ಕೊಂದು, ಗುರುತು ಸಿಗದಂತೆ ಮೃತದೇಹಕ್ಕೆ ಬೆಂಕಿ ಹಚ್ಚಿದ್ದರು.

ರಹಸ್ಯ ಬಿಚ್ಚಿಟ್ಟ ಮೊಬೈಲ್ ಸುಳಿವು:

ಯಾವುದೇ ಸುಳಿವು ಬಿಡದಂತೆ ಕೊಲೆ ಮಾಡಿದ್ದ ಹಂತಕರಿಗೆ ವಿಧಿಯಾಟ ಬೇರೆಯೇ ಇತ್ತು. ಪೊಲೀಸರು ಚಂದ್ರು ಬಳಸುತ್ತಿದ್ದ ಮೊಬೈಲ್ ಫೋನ್‌ನ ಕರೆ ದಾಖಲೆಗಳನ್ನು (CDR) ಪರಿಶೀಲಿಸಿದಾಗ, ಅಂತಿಮವಾಗಿ ಆತನಿಗೆ ಕರೆ ಮಾಡಿದ್ದು ಅದೇ ಮಹಿಳೆ ಎಂದು ತಿಳಿದುಬಂದಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಕೊಲೆಯ ಸತ್ಯ ಬಯಲಾಗಿದೆ.

ಇದನ್ನೂ ನೋಡಿ:ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!

ಕೊಲೆಗೆ ಕಾರಣವೇನು?

ಚಂದ್ರು ಮತ್ತು ಅದೇ ಗ್ರಾಮದ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಷಯ ಮಹಿಳೆಯ ಗಂಡ ಮತ್ತು ಅಣ್ಣನಿಗೆ ತಿಳಿದುಹೋಗಿತ್ತು. ಅವರು ಚಂದ್ರುಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಸ್ವತಃ ಮಹಿಳೆಯೇ "ನಮ್ಮ ಸಂಬಂಧವನ್ನು ಇಲ್ಲಿಗೆ ನಿಲ್ಲಿಸೋಣ" ಎಂದು ಚಂದ್ರುಗೆ ಬೇಡಿಕೊಂಡಿದ್ದಳಾದರೂ, ಚಂದ್ರು ಮಾತ್ರ ಆಕೆಯ ಸಹವಾಸ ಬಿಟ್ಟಿರಲಿಲ್ಲ. ಪದೇ ಪದೇ ಆಕೆಗೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಇದರಿಂದ ರೋಸಿಹೋದ ಮಹಿಳೆ, ತನ್ನ ಗಂಡ ಮತ್ತು ಅಣ್ಣನ ಜೊತೆ ಸೇರಿ ಚಂದ್ರುವನ್ನು ಮುಗಿಸಲು ಸ್ಕೆಚ್ ಹಾಕಿದ್ದಳು.

ಸ್ಕೆಚ್‌ನಂತೆ ಮಧ್ಯರಾತ್ರಿ ಚಂದ್ರುವನ್ನು ಮನೆಗೆ ಕರೆಸಿಕೊಂಡ ಮಹಿಳೆ, ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಗಂಡ ಮತ್ತು ಅಣ್ಣನ ಸಹಾಯದಿಂದ ಆತನನ್ನು ಕೊಂದು ಹಾಕಿದ್ದಾಳೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸೇತುವೆಯ ಕೆಳಗೆ ಎಸೆದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸದ್ಯ ಪೊಲೀಸರು ಮಹಿಳೆ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Related Video