ಬಂದೆ ಬಿಡ್ತು ಸಂತು ಪಂತು ದೂರಾಗುವ ದಿನ: ಮನೆಯಿಂದ ಹೊರಗೆ ಹೋಗೋದು ವರ್ತೂರಾ- ತುಕಾಲಿನಾ?

ಬಿಗ್ ಬಾಸ್ ಸೀಸನ್ 10ರ ಸೆಮಿಫೈನಲ್‌ಗೆ ಇನ್ನೂ ಎರಡು ವಾರ ಮಾತ್ರ ಬಾಕಿ ಇದೆ. ಈ ವಾರ ಎಲಿಮಿನೇಷನ್ ಭೂತ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ರನ್ನ ಕಾಡಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಜಗಳವಾಡದೇ ಇಬ್ಬರೂ ತುಂಬಾ ಅನ್ಯೂನ್ಯವಾಗಿದ್ದವರು.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಸೀಸನ್ 10ರ ಸೆಮಿಫೈನಲ್‌ಗೆ ಇನ್ನೂ ಎರಡು ವಾರ ಮಾತ್ರ ಬಾಕಿ ಇದೆ. ಈ ವಾರ ಎಲಿಮಿನೇಷನ್ ಭೂತ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ರನ್ನ ಕಾಡಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಜಗಳವಾಡದೇ ಇಬ್ಬರೂ ತುಂಬಾ ಅನ್ಯೂನ್ಯವಾಗಿದ್ದವರು. ಬಿಗ್ಬಾಸ್ ಮನೆಯಲ್ಲಿ ಸ್ನೇಹಕ್ಕೆ ಹೆಸರುವಾಸಿ ಆಗಿದ್ದವರು ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್. ಬಿಗ್ ಬಾಸ್ ಮನೆಯಲ್ಲಿ ಇಂದು ತುಕಾಲಿ ಸಂತೋಷ್ ಅಥವಾ ವರ್ತೂರು ಸಂತೋಷ್ ಮನೆಯಿಂದ ಹೊರ ಹೀಗಬೇಕು. ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಅವರು ಇಂದು ಸಂತು ಪಂತು ಇಬ್ಬರಲ್ಲಿ ಒಬ್ಬರಿಗೆ ದೊಡ್ಡಮನೆಯ ಜರ್ನಿ ಮುಗಿಯಲಿದೆ ಎಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನ ಕೇಳಿದಾಗ ತುಕಾಲಿ ಸಂತೋಷ್ ಇನ್ನಷ್ಟು ದಿನ ಮನೆಯಲ್ಲಿರಲಿ ಫೈನಲ್‌ ಗೆ ಅವರೇ ಬರಬೇಕು ಅನ್ನೋ ಆಸೆ ನನಗಿದೆ ಅಂತ ವರ್ತೂರು ಸಂತೋಷ್ ಹೇಳಿದ್ದಾರೆ. ಇನ್ನು ತುಕಾಲಿ ಸಂತೋಷ್ ಕೂಡ ವರ್ತೂರು ಸಂತೋಷ್ ಈ ಮನೆಯಲ್ಲಿ ಇರಲಿ ನಾನು ಬೇಕಾದರೆ ಹೊರಗೆ ಹೋಗುತ್ತೇನೆ ಎಂದಿದ್ದಾರೆ. ವರ್ತೂರು ಸಂತೋಷ್ ತುಕಾಲಿ ಸಂತೋಷ್ ಸ್ನೇಹದ ಮಾತು ಕೇಳಿ ಕಿಚ್ಚ ಸುದೀಪ್‌ ಖುಷಿಯಾಗಿದ್ದಾರೆ, ಇಷ್ಟು ದಿನ ನಾನು ನೋಡಿದವರಲ್ಲಿ ನಿಮ್ಮಿಬ್ಬರ ಸ್ನೇಹ ತುಂಬಾ ಎತ್ತರಕ್ಕೆ ಹೋಗಿ ನಿಲ್ಲುತ್ತದೆ ಎಂದಿದ್ದಾರೆ. ಆದ್ರೆ ವಾರದ ಕತೆ ಕಿಚ್ಚನ ಜೊತೆ ಅಂತ ಬಂದಾಗ ಒಬ್ಬ ಕಂಟೆಸ್ಟೆಂಟ್ ಹೊರ ಹೋಗಬೇಕಿದೆ. ಹೀಗಾಗಿ ಈ ವಾರ ಮನೆಯಿಂದ ಹೊರ ಹೋಗೋದು ವರ್ತೂರು ಸಂತೋಷ, ತುಕಾಲಿ ಸಂತೋಷ ಅನ್ನೋ ಕುತೂಹಲ ಬಿಗ್ಬಾಸ್ ಪ್ರೇಕ್ಷಕರಲ್ಲಿದೆ. 

Related Video