
Hijab Row: ಕೋರ್ಟ್ ಆದೇಶ ಪಾಲಿಸದಿದ್ರೆ ತರಗತಿಗೆ ನೋ ಎಂಟ್ರಿ: ಗೃಹ ಸಚಿವ
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಇಂದಿನಿಂದ ಪುನಾರಂಭಗೊಂಡಿದೆ.
ಬೆಂಗಳೂರು (ಫೆ. 16): ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಇಂದಿನಿಂದ ಪುನಾರಂಭಗೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Shivamogga: ಹಿಜಾಬ್‌ಗೆ ವಿದ್ಯಾರ್ಥಿನಿಯರ ಪಟ್ಟು, ಡಿವಿಎಸ್ ಕಾಲೇಜಿನಲ್ಲಿ ಹೈಡ್ರಾಮಾ
ನಾವು ಹಿಜಾಬ್ (Hijab)ಧರಿಸಿಯೇ ಬರುತ್ತೇವೆ ಎಂದು ಕೆಲವೆಡೆ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. 'ಕೋರ್ಟ್ ಆದೇಶವನ್ನು ಲೆಕ್ಕಿಸದೇ ಇದ್ದವರನ್ನು ನಮ್ಮ ಪೊಲೀಸರು ಲೆಕ್ಕಿಸಲ್ಲ. ಅವರನ್ನು ತರಗತಿಯೊಳಗೆ ಸೇರಿಸುವುದಿಲ್ಲ. ಆಡಳಿತ ಮಂಡಳಿ, ಶಿಕ್ಷಕರ ಹಿಂದೆ ಪೊಲೀಸರಿದ್ದಾರೆ. ಗಲಾಟೆ ಮಾಡುವವರು, ರಸ್ತೆಯಲ್ಲಿಯೇ ಇರಲಿ. ತರಗತಿಯೊಳಗೆ ಅವಕಾಶವಿಲ್ಲ' ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.