Asianet Suvarna News Asianet Suvarna News

ಧರ್ಮ ದಂಗಲ್:‌ ಬೆಂಗಳೂರಿನ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ನೋಟಿಸ್‌

ಮಸೀದಿ ಮಾತ್ರವಲ್ಲ, ದೇಗುಲಗಳಿಗೆ (Temple) ಬಂತು ನೋಟಿಸ್. ಪೂಜಾ ಸಮಯದಲ್ಲಿ ಜೋರಾಗಿ ಶಬ್ದದ (Sound)ಮೂಲಕ ತೊಂದರೆಯಾಗುತ್ತಿದೆ ಎಂದು ಮಲ್ಲೇಶ್ವರಂ (Malleshwaram) ವೇಣುಗೋಪಾಲ ದೇವಾಲಯಕ್ಕೆ ನೊಟೀಸ್ ನೀಡಲಾಗಿದೆ.

ಬೆಂಗಳೂರು (ಏ. 21): ಮಸೀದಿ ಮಾತ್ರವಲ್ಲ, ದೇಗುಲಗಳಿಗೆ (Temple) ಬಂತು ನೋಟಿಸ್. ಪೂಜಾ ಸಮಯದಲ್ಲಿ ಜೋರಾಗಿ ಶಬ್ದದ (Sound)ಮೂಲಕ ತೊಂದರೆಯಾಗುತ್ತಿದೆ ಎಂದು ಮಲ್ಲೇಶ್ವರಂ (Malleshwaram) ವೇಣುಗೋಪಾಲ ದೇವಾಲಯಕ್ಕೆ ನೊಟೀಸ್ ನೀಡಲಾಗಿದೆ.

ಆಜಾನ್ ವಿರುದ್ಧ ಸಮರ: ಬಿಜೆಪಿ ಸರ್ಕಾರಕ್ಕೆ ಧಮ್ ಇದ್ದಿದ್ರೆ ಕ್ರಮ ಕೈಗೊಳ್ಳುತ್ತಿದ್ರು: ಮುತಾಲಿಕ್

ಮಲ್ಲೇಶ್ವರಂ ಠಾಣೆಗೆ ಸಾರ್ವಜನಿಕರು ಮೌಖಿಕ ದೂರು ನೀಡಿದ್ದಾರೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ 45 ಡೆಸಿಬಲ್ ಶಬ್ದ ಮೀರಬಾರದು. ಜನವಸತಿ ಪ್ರದೇಶದಲ್ಲಿ ಹೆಚ್ಚು ಸೌಂಡ್ ಮಾಡಿದ್ದಕ್ಕೆ ನೊಟೀಸ್ ನೀಡಲಾಗಿದೆ. ಆದೇಶ ಮೀರಿದರೆ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.