Mekedatu Padayatre: ಹೈಕೋರ್ಟ್ ನಮ್ಮ ಪಾದಯಾತ್ರೆ ತಡೆಯಲಿ, ಬಳಿಕ ಮುಂದಿನ ನಿರ್ಧಾರ: ಸಿದ್ದರಾಮಯ್ಯ

ಹೈಕೋರ್ಟ್ (High Court) ಸರ್ಕಾರದ ವೈಫಲ್ಯತೆಯನ್ನು ಎತ್ತಿ ಹಿಡಿದಿದೆ. ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಯಲಿ. ನಂತರ ಮುಂದಿನ ನಿರ್ಧಾರ ಮಾಡುತ್ತೇವೆ. ಕೋರ್ಟ್‌ನ ಆದೇಶನವನ್ನೂ ನಾವು ಗೌರವಿಸುತ್ತೇವೆ' ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 12): ಕೋವಿಡ್ ಹೆಚ್ಚಾಗುತ್ತಿರುವ (Covid 19) ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆ (Mekedatu Padaytare) ಬಗ್ಗೆ ಹೈಕೋರ್ಟ್ (High Court) ರಾಜ್ಯ ಸರ್ಕಾರಕ್ಕೆ ಛಾಟಿ ಬೀಸಿದೆ. 

Mekedatu Padayatre: ಹೈಕೋರ್ಟ್ ಗರಂ ಗೃಹ ಸಚಿವರ ತುರ್ತು ಸಭೆ, ಪಾದಯಾತ್ರೆಗೆ ತಡೆ.?

ಪಾದಯಾತ್ರೆಗೆ ಯಾಕೆ ಅವಕಾಶ ಕೊಟ್ಟಿದ್ದೀರಿ..? ಯಾಕೆ ತಡೆಯುತ್ತಿಲ್ಲ, ಪಾದಯಾತ್ರೆ ತಡೆಯಲು ನೀವು ಅಸಹಾಯಕರೇ.? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಪಾದಯಾತ್ರೆ ತಡೆಯದಿದ್ರೆ ನಾವು ನಿರ್ದೇಶನ ಕೊಡಬೇಕಾಗುತ್ತದೆ ಎಂದು ಒಂದು ದಿನ ಕಾಲಾವಕಾಶ ಕೊಟ್ಟಿದೆ. ಕೆಪಿಸಿಸಿಗೂ ಷೋಕಾಸ್ ನೋಟಿಸ್ ಕೊಟ್ಟಿದೆ. 

ಹೈಕೋರ್ಟ್ ಸರ್ಕಾರದ ವೈಫಲ್ಯತೆಯನ್ನು ಎತ್ತಿ ಹಿಡಿದಿದೆ. ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಯಲಿ. ನಂತರ ಮುಂದಿನ ನಿರ್ಧಾರ ಮಾಡುತ್ತೇವೆ. ಕೋರ್ಟ್‌ನ ಆದೇಶನವನ್ನೂ ನಾವು ಗೌರವಿಸುತ್ತೇವೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Related Video