ಹೂಗಳಲ್ಲರಳಿದ ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ, ಲಾಲ್‌ಬಾಗ್ ಫ್ಲವರ್ ಶೋ ಆಕರ್ಷಣೆ

ಕರ್ನಾಟಕ ರತ್ನ ದಿವಂಗತ ಡಾ.ರಾಜ್‌ಕುಮಾರ್‌ ಮತ್ತು ಡಾ.ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಾರ್ಥ ತೋಟಗಾರಿಕೆ ಇಲಾಖೆ  ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಇದಕ್ಕೆ ವಿವಿಧ ಜಾತಿಯ 10 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.

Share this Video
  • FB
  • Linkdin
  • Whatsapp

ಕರ್ನಾಟಕ ರತ್ನ ದಿವಂಗತ ಡಾ.ರಾಜ್‌ಕುಮಾರ್‌ ಮತ್ತು ಡಾ.ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಾರ್ಥ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಇದಕ್ಕೆ ವಿವಿಧ ಜಾತಿಯ 10 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ

ಗಾಜಿನ ಮನೆಯ ಒಳಭಾಗದಲ್ಲಿ ಗುಲಾಬಿ, ಸೇವಂತಿಗೆ, ಜರ್ಬೆರ, ಲಿಲ್ಲಿ ಸೆರಿದಂತೆ 6.20 ಲಕ್ಷ ಮತ್ತು ಕುಂಡಗಳಲ್ಲಿ ಬೆಳೆದಿರುವ 3.50 ಲಕ್ಷ ಹೂವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, 27 ಜಾತಿಯ ವಿದೇಶಿ ಮತ್ತು ಶೀತವಲಯದ 13 ಜಾತಿಯ ಹೂವುಗಳು ಬಳಕೆಯಾಗಲಿವೆ. 

ಗಾಜಿನ ಮನೆಯಲ್ಲಿ ಮೈಸೂರಿನ ‘ಶಕ್ತಿಧಾಮ’ ಗಾಜನೂರಿನ ಮನೆಯನ್ನು ನಿರ್ಮಿಸಲಾಗಿದ್ದು, ಹೊರಭಾಗದಲ್ಲಿ ಡಾ.ರಾಜ್‌ ಮತ್ತು ಪುನೀತ್‌ ಅವರ ಪ್ರತಿಮೆಗಳು ಎಲ್ಲರನ್ನೂ ಸ್ವಾಗತಿಸಲಿವೆ. ಬಿದಿರಿನ ಚೌಕಟ್ಟಿನಲ್ಲಿ ಅರಳಿದ ಫೋಟೊಗಳು, ಡಾ. ರಾಜ್‌ ಮತ್ತು ಪುನೀತ್‌ ಬಗೆಗಿನ ಪೇಂಟಿಂಗ್‌ ಶಿಬಿರ, ಇವರ ಚಿತ್ರಗಳಿಗೆ ಜೀವ ತುಂಬಲು ನಾನಾ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸಲಿರುವ ಮಕ್ಕಳು, ಮರಳಿನಲ್ಲಿ ಅರಳಿರುವ ಡಾ. ರಾಜ್‌ ಮತ್ತು ಪುನೀತ್‌ ಪ್ರತಿಮೆಗಳು. ಉದ್ಯಾನದ ಹೊರಾಂಗಣದಲ್ಲಿ ಎಲ್‌ಇಡಿ ಪರದೆಗಳ ಮೂಲಕ ರಾಜ್‌ ಮತ್ತು ಪುನೀತ್‌ ಅವರ ವಿರಾಟ್‌ ದರ್ಶನ ಪ್ರದರ್ಶನಗೊಳ್ಳಲಿದೆ.

Related Video