ಇತ್ತ ಸಿಐಡಿ ವಶದಲ್ಲಿ ತಮ್ಮ, ಅತ್ತ ಆತ್ಮಹತ್ಯೆ ಮಾಡಿಕೊಂಡ ಅಣ್ಣ

*ಕೆಲಸದಿಂದ ತೆಗೆದು ಹಾಕಿದಕ್ಕೆ ಮನನೊಂದು ವಾಸು ಆತ್ಮಹತ್ಯೆ
*ಮನು ಸಿಐಡಿ ಕಸ್ಟಡಿಗೂ ಆತ್ಮಹತ್ಯೆಗೂ ಸಂಬಂಧವಿಲ್ಲ
* ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನಾಗಿದ್ದ ವಾಸು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ 11): ಪಿಎಸ್‌ಐ ನೇಮಕಾತಿ ಹಗರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ನಡುವೆ ಪಿಎಸ್‌ಐ ಆಗಿ ನೇಮಕವಾಗಿದ್ದ, ಸಿಐಡಿ ಕಸ್ಟಡಿಯಲ್ಲಿರುವ ಮನು ಅಣ್ಣನ ವಾಸು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಕೆಲಸದಿಂದ ತೆಗೆದು ಹಾಕಿದಕ್ಕೆ ಮನನೊಂದು ವಾಸು ಆತ್ಮಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಮನು ಸಿಐಡಿ ಕಸ್ಟಡಿಗೂ, ವಾಸು ಆತ್ಮಹತ್ಯೆಗೂ ಸಂಬಂಧವಿಲ್ಲ ಎಂದು ತಾಯಿ ಶಿವಮ್ಮ ಹೇಳಿದ್ದಾರೆ. ಮೃತ ವಾಸು ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನಾಗಿ ಕೆಲಸದಲ್ಲಿದ್ದ. 

ಇದನ್ನೂ ಓದಿ:Mysuru: ಜಂಗಲ್‌ ಲಾಡ್ಜಸ್‌ ವಿರುದ್ಧ ಪತ್ರ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ

ಇನ್ನು "ನನ್ನ ಗಂಡ ಕೆಲಸ ಇಲ್ಲ ಅಂತಾ ಬೇಜಾರಾಗಿದ್ರು, ತುಂಬಾ ಕುಡಿತಿದ್ರು. ಕೆಲಸ ಕಳೆದುಕೊಂಡಿದ್ದಕ್ಕೆ ಖಿನ್ನತೆಗೊಳಗಾಗಿದ್ರು" ಎಂದು ವಾಸು ಪತ್ನಿ ಪಲ್ಲವಿ ಹೇಳಿದ್ದಾರೆ. ಅಣ್ಣ ಕುಡಿಯುವುದು ತಮ್ಮನಿಗೆ ಇಷ್ಟವಾಗುತ್ತುರಲಿಲ್ಲ ಎಂದು ಅವರು ಹೇಳಿದ್ದಾರೆ. 

Related Video