Asianet Suvarna News Asianet Suvarna News

Mysuru: ಜಂಗಲ್‌ ಲಾಡ್ಜಸ್‌ ವಿರುದ್ಧ ಪತ್ರ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ

*  ಹಣ ಪಡೆದು ವಂಚನೆ ಆರೋಪ
*  ಉದ್ಯಮಿ ಆತ್ಮಹತ್ಯೆ- ವಿಳಂಬವಾಗಿ ಬೆಳಕಿಗೆ ಬಂದಿರುವ ಪ್ರಕರಣ
*  ಜಿ.ಆರ್‌. ಶರತ್‌ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

Businessman Committed Suicide in Mysuru grg
Author
Bengaluru, First Published May 10, 2022, 8:00 AM IST | Last Updated May 10, 2022, 8:00 AM IST

ಮೈಸೂರು(ಮೇ.10): ಜಂಗಲ್‌ ಲಾಡ್ಜಸ್‌ ಆ್ಯಂಡ್‌ ರೆಸಾರ್ಟ್‌ನ ಅಧ್ಯಕ್ಷ ಎಂ. ಅಪ್ಪಣ್ಣ ಅವರು ಹಣ ಪಡೆದು ವಂಚನೆ ಮಾಡಿರುವುದಾಗಿ ಪತ್ರ ಬರೆದಿಟ್ಟು ಉದ್ಯಮಿಯೊಬ್ಬರು(Businessman) ಆತ್ಮಹತ್ಯೆ(Suicide) ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ(Mysuru) ಕೆಸರೆ 3ನೇ ಹಂತದ ನಿವಾಸಿ ಜಿ.ಆರ್‌. ಶರತ್‌(35) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಇವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಮೈಸೂರಿನಲ್ಲಿ ವಾಣಜ್ಯ ವ್ಯವಹಾರ ಮಾಡಿಕೊಂಡಿದ್ದರು. ಕಳೆದ ಮಾ.18 ರಂದು ಶರತ್‌ ಮನೆಯಲ್ಲಿ ಪತ್ರ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಸಾವಿಗೆ ಪ್ರವೀಣ್‌ ಮತ್ತು ಅಪ್ಪಣ್ಣ ಕಾರಣ. ಪ್ರವೀಣ್‌ ನನಗೆ ಸ್ವದೇಶಿ ಗ್ರೂಪ್‌ ಪಾಲುಗಾರಿಕೆಯಲ್ಲಿ ಮೋಸ ಮಾಡಿದ್ದು, ನನಗೆ ಶೇ.50 ಪಾಲು ನೀಡುವುದಾಗಿ ಮೋಸ ಮಾಡಿದ್ದಾನೆ. ಮತ್ತು ಅಪ್ಪಣ್ಣ ನನ್ನಿಂದ ಹಣ(Money) ಪಡೆದು ಸುಮಾರು 8 ಲಕ್ಷವರೆಗೂ ಮೋಸ ಮಾಡಿದ್ದು, ನನ್ನ ಕುಟುಂಬಕ್ಕೆ ಇವರಿಂದ ನ್ಯಾಯ ಕೊಡಿಸಿ ಎಂದು ಪತ್ರ ಬರೆದಿದ್ದಾರೆ.
ಈ ಸಂಬಂಧ ಶರತ್‌ ಪತ್ನಿ ಕೃಪಾಲಿನಿ ನೀಡಿರುವ ದೂರಿನಂತೆ ಎನ್‌.ಆರ್‌. ಪೊಲೀಸ್‌(Police) ಠಾಣೆಯಲ್ಲಿ ಪ್ರವೀಣ್‌ ಮತ್ತು ಅಪ್ಪಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರೀತಿಸುವಂತೆ ಯುವಕನ ಕಾಟ, ವಿಷ ಸೇವಿಸಿದ ಯುವತಿ, 20 ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತ ವಿದ್ಯಾಶ್ರೀ!

ಅಪ್ಪಣ್ಣ ಸ್ಪಷ್ಟನೆ: 

ಶರತ್‌ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಸ್‌ ದಾಖಲಾಗಿರುವುದು ಗೊತ್ತಿಲ್ಲ. ನಮ್ಮಿಬ್ಬರ ನಡುವೆ ಯಾವುದೇ ಹಣಕಾಸು ವ್ಯವಹಾರ ಇಲ್ಲ. ನಾನು 27 ಲಕ್ಷ ರು. ಕೊಡಬೇಕು ಎಂದು 2019 ರಲ್ಲಿ ನನ್ನ ವಿರುದ್ಧ ಆತ ಕುವೆಂಪನಗರ ಠಾಣೆಗೆ ದೂರು ನೀಡಿದ್ದ. ಆದರೆ ಅಂದಿನ ಡಿಸಿಪಿ ವಿಚಾರಣೆ ಕಾಲಕ್ಕೆ ಸುಳ್ಳು ದೂರು ನೀಡಿದ್ದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದಿದ್ದಾರೆ.
 

Latest Videos
Follow Us:
Download App:
  • android
  • ios