ಬಿಗ್ 3 ವರದಿಗೆ ಮಿಡಿಯಿತು ಕರುನಾಡು: ಸಂತೋಷ್, ಐಶ್ವರ್ಯ ಕಣ್ಣೀರಿಗೆ ಕರಗಿದ ನಾಡಿನ ಜನತೆ..!

ಸಂತೋಷ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಗಂಡನನ್ನ ಉಳಿಸಿಕೊಳ್ಳಲು ಹಣಕ್ಕಾಗಿ ಪತ್ನಿ ಏಕಾಂಗಿಯಾಗಿ ಹೋರಾಡುತ್ತಿದ್ದಳು. ಆದ್ರೆ, ಯಾರೂ ನೆರವಿಗೆ ನಿಲ್ಲಲಿಲ್ಲ. ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3ಯ ಒಂದು ವರದಿ ಅವರಿಗೆ ನೆರವಾಯ್ತು. ಇದು ಬಿಗ್3ಯ ಮಾನವೀಯತೆಯ ಇಂಪ್ಯಾಕ್ಟ್ ಆಗಿದೆ.

Share this Video
  • FB
  • Linkdin
  • Whatsapp

ಸಂತೋಷ್ ಹಾಗೂ ಐಶ್ವರ್ಯ ಪ್ರೀತಿಸಿ ಮದುವೆಯಾದವರು. ಎಲ್ಲರ, ಜೀವನ ಸಾಗೋ ಹಾಗೇ ಇವರ ಜೀವನ ಸಾಗ್ತಾ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಸಂತೋಷ್‌ಗೆ ಹುಷಾರಿಲ್ಲದೇ ಕಿಡ್ನಿ ವೈಫಲ್ಯ ಶುರು ಆಯ್ತು. ಪತ್ನಿ ಅಲ್ಲಿ ಇಲ್ಲಿ ಹಣ ಹೊಂಚಿ ಚಿಕಿತ್ಸೆ ಕೊಡಿಸುತ್ತಿದ್ದಳು. ಆದ್ರೆ, ಸಂತೋಷ್‌ಗೆ ತುರ್ತಾಗಿ ಕಿಡ್ನಿ ಕಸಿ ಮಾಡಿಸಬೇಕಿದೆ. ಕಿಡ್ನಿ ದಾನಕ್ಕೆ ಸಂತೋಷ್ ಸೋದರ ಅರುಣ್ ಮುಂದಾಗಿದ್ದು, ಬೆಂಗಳೂರಿನ ರಾಮಯ್ಯ ಆಸ್ಪತ್ರೆಯವರು ಆಗಸ್ಟ್ 17ರೊಳಗೆ 7 ಲಕ್ಷ ಆರೆಂಜ್‌ ಮಾಡಿ ಕೊಂಡು ಬನ್ನಿ ಅಂತ ಹೇಳಿದ್ರು. ಬಿಗ್3ಯಲ್ಲಿ ವರದಿ ಮಾಡಿ ಅಕೌಂಟ್ ನಂಬರ್ ಸಮೇತ ನೆರವು ನೀಡಿ ಅನ್ನೋ ಕರೆ ನೀಡಿದ್ವಿ. ಬಿಗ್3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ನಾಡಿನ ಮೂಲೆ ಮೂಲೆಯಿಂದ ಸಂತೋಷ್ ಅಕೌಂಟ್‌ಗೆ ಹಣದ ನೆರವು ಹರಿದು ಬಂತು. ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಸಂದಾಯ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

Related Video