ಧಾರವಾಡ:ಇರಲು ಸೂರು ಇಲ್ಲ, ಹಣವೂ ಇಲ್ಲ, ಕಂತಿನ ಹಣಕ್ಕಾಗಿ ಕಾದು ಕುಳಿತ ನೆರೆ ಸಂತ್ರಸ್ತರು

2019 ರಲ್ಲಿ ಅತೀವೃಷ್ಟಿಯಿಂದ (Flood) ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಸಾಕಷ್ಟು ಜನ ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡಿದ್ದರು. ಅದರಲ್ಲೂ ಧಾರವಾಡದ ಲಕಮಾಪುರ ಗ್ರಾಮದ ಜನ ಇರಲು ಸೂರಿಲ್ಲದೇ, ಪರಿಹಾರ ಪಡೆಯಲು ಬೆಂಗಳೂರಿಗೆ ಹೋಗಲು ಹಣವಿಲ್ಲದೇ ಅಸಹಾಯಕರಾಗಿದ್ದಾರೆ. 

Share this Video
  • FB
  • Linkdin
  • Whatsapp

2019 ರಲ್ಲಿ ಅತೀವೃಷ್ಟಿಯಿಂದ (Flood) ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಸಾಕಷ್ಟು ಜನ ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡಿದ್ದರು. ಅದರಲ್ಲೂ ಧಾರವಾಡದ ಲಕಮಾಪುರ ಗ್ರಾಮದ ಜನ ಇರಲು ಸೂರಿಲ್ಲದೇ, ಪರಿಹಾರ ಪಡೆಯಲು ಬೆಂಗಳೂರಿಗೆ ಹೋಗಲು ಹಣವಿಲ್ಲದೇ ಅಸಹಾಯಕರಾಗಿದ್ದಾರೆ. 

ಆಗಿನ ಸಿಎಂ ಆಗಿದ್ದ ಯಡಿಯೂರಪ್ಪನವರು, ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಮನೆ ಕಟ್ಟಲು ಶುರು ಮಾಡಿದ ಸಂತ್ರಸ್ತರಿಗೆ ಪೂರ್ತಿ ಹಣ ದೊರಕಿಲ್ಲ. ಹೀಗಾಗಿ ಮನೆ ಕಾರ್ಯ ಅರ್ಧಕ್ಕೆ ನಿಂತಿದ್ದು, ಸಂತ್ರಸ್ತರು ಕಂಗಾಲಾಗಿದ್ದಾರೆ. ಮೊದಲ ಕಂತಿನ ಹಣ ಬಂದಿದ್ದು, ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಹೈರಾಣಾಗಿದ್ದಾರೆ. ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ ಎಂದು ಸತಾಯಿಸುತ್ತಿದ್ದಾರೆ. 

Related Video