ನನಗಿನ್ನೂ ಲವರ್ ಸಿಕ್ಕಿಲ್ಲ, ಒಳ್ಳೆ ಹುಡ್ಗಿ ಸಿಕ್ರೆ ಲವ್ ಮಾಡ್ತೀನಿ: ವಿಕ್ರಂ ರವಿಚಂದ್ರನ್
ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ನಟನೆಯ ‘ತ್ರಿವಿಕ್ರಮ’(Thrivikram)ಜೂ.24 ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರ ಬಿಡುಗಡೆ ದಿನಾಂಕ ರಿವೀಲ್ ಮಾಡಲೆಂದೇ ಚಿತ್ರತಂಡ ಕಾರ್ಯಕ್ರಮ ಆಯೋಜಿಸಿತ್ತು.
ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ನಟನೆಯ ‘ತ್ರಿವಿಕ್ರಮ’(Thrivikram)ಜೂ.24 ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರ ಬಿಡುಗಡೆ ದಿನಾಂಕ ರಿವೀಲ್ ಮಾಡಲೆಂದೇ ಚಿತ್ರತಂಡ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿಕ್ರಂ ರವಿಚಂದ್ರನ್, ಚಿಕ್ಕ ವಯಸ್ಸಿನಿಂದ ಹೀರೋ ಆಗ್ಬೇಕು ಅಂತ ಆಸೆ. ನಿಮ್ಮ ಮನಸ್ಸನ್ನ ನಾನು ಮುಟ್ಟೇ ಮುಟ್ತೇನೆ. ಆ ಕ್ಯಾಪಾಸಿಟಿ ನನಗಿದೆ. ನನ್ನ ಆ್ಯಂಬೀಷನ್ ನಟ ಆಗಬೇಕು ಅನ್ನೋದಷ್ಟೆ. ರವಿಚಂದ್ರನ್ ಮಗನಾಗಿ, ಈಶ್ವರಿ ಸಂಸ್ಥೆಯ ಮೂರನೇ ತಲೆಮಾರಿನವನಾಗಿದ್ದರೂ ಜನ ಅದನ್ನೆಲ್ಲ ನೋಡಲ್ಲ. ಹೊಸ ನಟ ಅಂತಲೇ ನೋಡ್ತಾರೆ. ಇದೊಂದು ಮಿಡ್ಲ್ ಕ್ಲಾಸ್ ಹುಡುಗನ ಕತೆ. ಎಲ್ಲರ ನಂಬಿಕೆ ಉಳಿಸುವಂತೆ ನಟಿಸಿದ್ದೇನೆ’ ಎಂದರು.
'ತ್ರಿವಿಕ್ರಮ'ದಲ್ಲಿ ಮಾಸ್ ಅವತಾರದಲ್ಲಿ ಆದಿ ಲೋಕೇಶ್
ಇನ್ನು ಲವ್, ಮದುವೆ ಬಗ್ಗೆ ಕೇಳಿದಾಗ, ನಾನು ಲವ್ ಮ್ಯಾರೇಜ್ ಆಗ್ತೀನೋ ಇಲ್ವೋ ಗೊತ್ತಿಲ್ಲ. ಪ್ರೀತಿ ಮಾಡೋದು ನನ್ನ ಹಣೆಬರದಲ್ಲಿ ಬರದಿಲ್ಲ ಅನ್ನಿಸುತ್ತೆ. ನನಗೆ ಇನ್ನೂ ಲವರ್ ಸಿಕ್ಕಿಲ್ಲ. ಒಳ್ಳೆ ಹುಡ್ಗಿ ಸಿಕ್ರೆ ಲವ್ ಮಾಡ್ತೀನಿ ಎಂದರು.
.