ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹರೀಶ್ ರೈ ಅವರಿಗೆ ಶೇ.30ರಷ್ಟು ಕ್ಯಾನ್ಸರ್ ಗುಣಮುಖವಾಗಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಶಿವಣ್ಣ ಅವರ ಬೆಂಬಲ, ಮಂತ್ರಾಲಯದ ರಾಯರ ಆಶೀರ್ವಾದದಿಂದ ಹರೀಶ್ ರೈ ಈ ಯುದ್ಧವನ್ನು ಗೆದ್ದಿದ್ದಾರೆ.

Share this Video
  • FB
  • Linkdin
  • Whatsapp

ಕೆಜಿಎಫ್ ಚಾಚಾ ನಿಟ್ಟುಸಿರು ಬಿಟ್ಟಿದ್ದಾರೆ. ಹೊಸಿಲವರೆಗೆ ಬಂದಿದ್ದ ಕಂಟಕ ಈಗ ದೂರ ನಿಂತಿದೆ. ಇನ್ನೇನು ಮುಗಿಯಿತು ಕತೆ ಎನ್ನುವಾಗಲೇ ಹೊಸ ಬೆಳಕು ನಕ್ಕಿದೆ. ಖುದ್ದು ರಾಕಿಭಾಯ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಶಿವಣ್ಣ ಧೈರ್ಯ ತುಂಬಿದ್ದಾರೆ. ಹಡೆದವ್ವ ಮಗನ ಆರೋಗ್ಯಕ್ಕೆ ಹರಕೆ ಹೊತ್ತಿದ್ದಾರೆ. ಹಾಗಿದ್ದರೆ ಚಾಚಾ ಹರೀಶ್ ರೈ ಯಾವ ಅಪಾಯದಿಂದ ಪಾರಾದರು ? ಹೇಗೆ ಎಲ್ಲರೂ ಕೈ ಹಿಡಿದರು ? ಆ ಯುದ್ಧ ಗೆದ್ದ ಕಥನ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹರೀಶ್ ರೈಗೆ ಇನ್ನೊಂದು ಮಹಾ ಶಕ್ತಿ ಕೈ ಹಿಡಿದಿದೆ. ಅದು ಬೇರಾರೂ ಅಲ್ಲ. ಮಂತ್ರಾಲಯದ ರಾಯರು. ಯಾವಾಗ ಆರೋಗ್ಯ ಹೀಗಾಯಿತೊ. ತಕ್ಷಣ ರೈ ಗುರುರಾಯರಿಗೆ ಮೊರೆ ಹೋದರು. ಆಗ ಅಲ್ಲಿಂದ ಬಂದ ಮಂತ್ರಾಕ್ಷತೆ...ಈಗಲೂ ಅವರಿಗೆ ದಾರಿ ದೀಪವಾಗಿದೆ. ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಹರೀಶ್ ರಾಯ್ ಮಾರಣಾಂತಿಕ ಕ್ಯಾನ್ಸರ್ ಜೊತೆ ಹೋರಾಡಿ ‘ಶೇ.30ರಷ್ಟು ಕ್ಯಾನ್ಸರ್ ಗುಣವಾಗಿದೆ ಎಂದು ವೈದ್ಯರ ಅಭಯ ನೀಡಿದ್ದಾರೆ. ಒಟ್ಟಾರೆ ನಟ ಹರೀಶ್ ರೈ ಒಂದು ದೊಡ್ಡ ಯುದ್ಧ ಗೆದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ.

Related Video