ಮಹಾರಾಷ್ಟ್ರ ಕದನ: ರಾಹುಲ್ ಮಾಡಿದ ಪ್ರಮಾದಕ್ಕೆ ಲಗಾಡಿ ಹೊಡೆಯಿತಾ ಅಘಾಡಿ..?

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ರಾಹುಲ್ ಗಾಂಧಿ ಕಾರಣ ಎಂಬ ಆರೋಪ ಕೇಳಿಬಂದಿದೆ. 

Share this Video
  • FB
  • Linkdin
  • Whatsapp

ಸೋಲು.. ಹೀನಾಯ ಸೋಲು.. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಕಂಡಿದ್ದು ಮಹಾ ಸೋಲು.. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸೋಲಿಗೆ ರಾಹುಲ್ ಗಾಂಧಿಯವರೇ ಕಾರಣ ಅಂತ ಅವರತ್ತ ಬೊಟ್ಟು ಮಾಡಲಾಗ್ತಿದೆ. ಆದ್ರೆ ಅಲ್ಲಿನ ಸೋಲಿಗೆ ಇನ್ನೂ ಹಲವು ಕಾರಣಗಳಿವೆ. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹಿಡಿದು ಟಿಕೆಟ್ ಹಂಚಿಕೆಯ ತನಕ ಅನೇಕ ಭಿನ್ನಾಭಿಪ್ರಾಯಗಳು ಮೈತ್ರಿಯೊಳಗೆ ಇದ್ವು.. ಅದೆಲ್ಲವೂ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಸೋಲಿನ ಪೆಟ್ಟು ಕೊಟ್ಟಿದೆ. ಚುನಾವಣಾ ಕದನದಲ್ಲಿ ಸೋಲಿಗೆ ಕಾರಣವಾಗಿ ಬಿಟ್ರಾ ಕೈ ನಾಯಕ..? ಯುದ್ಧ ಸಮಾಪ್ತಿಯಾಗ್ತಾ ಇದ್ಹಾಗೆ ಶುರುವಾಗಿರೋದ್ಯಾಕೆ ಭಿನ್ನರಾಗ..? ಮೂರು ಮಹಾ ತಪ್ಪುಗಳು.. ರಾಹುಲ್ ಗಾಂಧಿ ಕಡೆಗೆ ಬೊಟ್ಟು..ಏನಿದರ ಗುಟ್ಟು..? ಗೆಲ್ಲೋದಕ್ಕೆ ಅಂತ ರಾಹುಲ್ ಗಾಂಧಿ ಆಡಿದ ಮಾತುಗಳೇ ಅಲ್ಲಿ ಮುಳುವಾಗಿ ಹೋದ್ವಾ.? ಮಹಾಯುತಿಯನ್ನ ಹೆಣೆಯೋಕೆ ಕೈ ನಾಯಕ ಬಿಟ್ಟ ಅಸ್ತ್ರ, ತಮ್ಮ ಕೂಟವನ್ನೇ ಛಿದ್ರಗೊಳಿಸ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾಗಾ ಪ್ರಮಾದ..ಅಘಾಡಿ ಲಗಾಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video