ಸಿಎಂ ಬೊಮ್ಮಾಯಿಯನ್ನು ನಾಯಿಗೆ ಹೋಲಿಸಿದ ಸಿದ್ದರಾಮಯ್ಯ

ಮೋದಿ ಮುಂದೆ ನಾಯಿ ಮರಿ ತರ ಇರ್ತೀರಾ ಅವರ ಮುಂದೆ ಗಡಗಡ ನಡುಗುತ್ತಿರಾ. ನಿಮಗೆ ಅವರ ಮುಂದೆ ನಿಂತು ಮಾತನಾಡುವ ತಾಕತ್ತಿಲ್ಲ. ನಿಮಗೆ ತಾಕತ್ತಿದ್ದರೆ ಅವರ ಮುಂದೆ ಮಾತನಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ಮೋದಿ ಮುಂದೆ ನಾಯಿ ಮರಿ ತರ ಇರ್ತೀರಾ ಅವರ ಮುಂದೆ ಗಡಗಡ ನಡುಗುತ್ತಿರಾ. ನಿಮಗೆ ಅವರ ಮುಂದೆ ನಿಂತು ಮಾತನಾಡುವ ತಾಕತ್ತಿಲ್ಲ. ನಿಮಗೆ ತಾಕತ್ತಿದ್ದರೆ ಅವರ ಮುಂದೆ ಮಾತನಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿಮಗೆ ತಾಕತ್ತಿದ್ದರೆ, ಮೋದಿ ಎದುರು ನಿಂತು ಮಾತನಾಡಿ, ರಾಜ್ಯಕ್ಕೆ 5,495 ಕೋಟಿ ಅನುದಾನ ತನ್ನಿ ಎಂದು ಸವಾಲೆಸೆದರು. ಸಿದ್ದರಾಮಯ್ಯ ಅವರ ಈ ಹೇಳಿಕೆ ಈಗ ವಿವಾದ ಸೃಷ್ಟಿಸಿದ್ದು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Related Video