ಸೋಲಿಲ್ಲದ ಸರದಾರನಿಗೆ ಸೋಲಿಸಲು ಎಸ್‌ಡಿಪಿಐ ರಣತಂತ್ರ!
ಯು.ಟಿ ಖಾದರ್ ಭದ್ರಕೋಟೆಯಲ್ಲಿ ಗೆಲ್ಲಲು SDPI ಪ್ಲಾನ್ ಮಾಡಿದ್ದು, ಖಾದರ್ ವಿರುದ್ಧ ಸ್ಪರ್ಧಿಸಲು ರಿಯಾಜ್ ಪರಂಗಿಪೇಟೆ ತಂತ್ರ ಹೂಡಿದ್ದಾರೆ.
ಸೋಲಿಲ್ಲದ ಸರದಾರನನ್ನು ಈ ಬಾರಿ ಸೋಲಿಸಲು SDPI ರಣತಂತ್ರ ರೂಪಿಸಿದೆ. ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿ ವಿರುದ್ಧವೇ ಸ್ಪರ್ಧೆಗೆ SDPI ನಿರ್ಧಾರ ಮಾಡಿದೆ. ಯುಟಿ ಖಾದರ್ ಭದ್ರಕೋಟೆಯಲ್ಲಿ ಗೆಲ್ಲಲು SDPI ಪ್ಲಾನ್ ಮಾಡಿದ್ದು, ಖಾದರ್ ವಿರುದ್ಧ ಸ್ಪರ್ಧಿಸಲು ರಿಯಾಜ್ ಪರಂಗಿಪೇಟೆ ತಂತ್ರ ಹೂಡಿದ್ದಾರೆ. ಮಂಗಳೂರು ಕ್ಷೇತ್ರ ಕೈ ಶಾಸಕ ಯು.ಟಿ ಖಾದರ್‌ನ ಭದ್ರಕೋಟೆ ಸತತ 4 ಬಾರಿ ಗೆದ್ದು ಶಾಸಕರಾಗಿರುವ ಯು.ಟಿ ಖಾದರ್. ಇನ್ನು ಕಾಂಗ್ರೆಸ್ ಹಿಜಾಬ್ , ಧರ್ಮ ದಂಗಲ್ ವಿಚಾರದಲ್ಲಿ ತಟಸ್ಥವಾಗಿದ್ದು, ಈ ತಟಸ್ಥ ನೀತಿಗೆ ಸಿಟ್ಟಾಗಿರುವ SDPI ಮುಖಂಡರು ಖಾದರ್ ಸೋಲಿಸಿ ತಮ್ಮ ಸಿಟ್ಟು ತಿರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ .
ಮಾಡಾಳ್ ಕರ್ಮಕಾಂಡ: ಅಡಿಕೆ ವ್ಯಾಪಾರಕ್ಕೂ ಲಂಚಾವತಾರಕ್ಕೂ ಇದೆಯಾ ಲಿಂಕ್ ...