ಮಾಡಾಳ್‌ ಕರ್ಮಕಾಂಡ: ಅಡಿಕೆ ವ್ಯಾಪಾರಕ್ಕೂ ಲಂಚಾವತಾರಕ್ಕೂ ಇದೆಯಾ ಲಿಂಕ್?

ಬಿಜೆಪಿ ಶಾಸಕನ ಮೇಲೆ ಲೋಕಾಯುಕ್ತ ದಾಳಿ ಪ್ರಕರಣವು ಬಗೆದಷ್ಟು ಬಯಲಾಗುತ್ತಿದ್ದು,  ಮಾಡಾಳ್‌ ಅಕ್ರಮದ ನಂಟು ಪ್ರಶಾಂತ್‌ ವಿರೂಪಾಕ್ಷಪ್ಪ ಬಳಿಕ ಮತ್ತಿಬ್ಬರು ಮಕ್ಕಳ ಮೇಲೂ ಶಂಕೆ ಉಂಟಾಗಿದೆ. 
 

Share this Video
  • FB
  • Linkdin
  • Whatsapp

ಬಿಜೆಪಿ ಶಾಸಕನ ಮೇಲೆ ಲೋಕಾಯುಕ್ತ ದಾಳಿ ಪ್ರಕರಣವು ಬಗೆದಷ್ಟು ಬಯಲಾಗುತ್ತಿದ್ದು, ಮಾಡಾಳ್‌ ಅಕ್ರಮದ ನಂಟು ಪ್ರಶಾಂತ್‌ ವಿರೂಪಾಕ್ಷಪ್ಪ ಬಳಿಕ ಮತ್ತಿಬ್ಬರು ಮಕ್ಕಳ ಮೇಲೂ ಶಂಕೆ ಉಂಟಾಗಿದೆ. ಅಕ್ರಮ ಕೇಸ್‌ನಲ್ಲಿ ಮಲ್ಲಿಕಾರ್ಜುನ್ ಪ್ರವೀಣ್‌ ಭಾಗಿಯಾಗಿರಬಹುದು ಎನ್ನುವ ಶಂಕೆ ಉಂಟಾಗಿದ್ದು, ಅಡಿಕೆ ವ್ಯಾಪಾರ ಮಾಡುತ್ತಿರುವ ಮಲ್ಲಿಕಾರ್ಜುನ್‌ , ಪ್ರವೀಣ್‌ ಮನೆಗೆ ಬರುತ್ತಿದ್ದ ಕೋಟಿ ಕೋಟಿ ಹಣ ಅಡಿಕೆ ವ್ಯಾಪಾರಕ್ಕೆ ಬಳಕೆ ಮಾಡಲಾಗುತಿತ್ತು. ಅಡಿಕೆ ಬ್ಯುಸಿನೆಸ್‌ ಲಾಸ್‌ ತೋರಿಸಿ ಮಲ್ಲಿಕಾರ್ಜುನ್‌ , ಪ್ರವೀಣ್‌ ಹಣ ವೈಟ್‌ ಮಾಡಿಕೊಳ್ಳುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಲೋಕಾ ರೇಡ್‌ ದಿನವೇ ಅಕೌಂಟ್‌ಗೆ ಲಕ್ಷ ಲಕ್ಷ ಹಣ ಬಂದಿದ್ದು, ಮಲ್ಲಿಕಾರ್ಜುನ್‌ಗೆ ಸೇರಿದ ಕಂಪನಿಗೆ ಲಕ್ಷಾಂತರ ರೂ ವರ್ಗವಾಣೆ ಆಗಿದೆ . ಪ್ರಶಾಂತ್‌ ಅಕೌಂಟ್‌ನಿಂದ ಮಲ್ಲಿಕಾರ್ಜುನ್‌ ಅಕೌಂಟ್‌ಗೆ ಹಣ ವಹಿವಾಟು ನಡೆಸಲಾಗಿದೆ ಎನ್ನಲಾಗಿದೆ.

Related Video