'ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ': ಸಂಚಲನ ಸೃಷ್ಟಿಸಿದ ಭವಾನಿ ರೇವಣ್ಣ

ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿದ್ದು, ಇದು ಹಳೇ ಮೈಸೂರು ಭಾಗದಲ್ಲಿ ಸಂಚಲನ ಸೃಷ್ಟಿಸಿದೆ.

Share this Video
  • FB
  • Linkdin
  • Whatsapp

ಹಾಸನದಿಂದ ನಾನೇ ಸ್ಪರ್ಧಿಸ್ತೀನೆ ಎಂದು ಭವಾನಿ ರೇವಣ್ಣ ಸ್ವಯಂ ಘೊಷಣೆ ಮಾಡಿದ್ದಾರೆ. ಇದು ಪಕ್ಷದಲ್ಲಿ ಭಾರಿ ಸಂಚಲನ ಮುಡಿಸಿದೆ. ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವ ಮುನ್ನವೇ, ಭವಾನಿ ರೇವಣ್ಣ ಗುಟ್ಟು ರಟ್ಟು ಮಾಡಿದ್ದಾರೆ. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಅವರು ಆಸೆ ಪಡೋದು ತಪ್ಪಲ್ಲ, ಆದ್ರೆ ಪಕ್ಷದ ತೀರ್ಮಾನವೇ ಫೈನಲ್ ಅಂದಿದ್ದಾರೆ. ಹಾಗಾದ್ರೆ ಜೆಡಿಎಸ್'ನಲ್ಲಿ ಬೇರೆ ಯಾರೂ ಆಕಾಂಕ್ಷಿಗಳೇ ಇಲ್ವಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಭವಾನಿ ರೇವಣ್ಣಗೆ ನಿಜವಾದ ಎದುರಾಳಿ ಬಿಜೆಪಿಯೋ? ಅಥವಾ ತಮ್ಮದೇ ಪಕ್ಷದ ಟಿಕೆಟ್ ಆಕಾಂಕ್ಷಿಗಳೋ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video