ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಏರ್‌ಲಿಫ್ಟ್‌ ಮೂಲಕ ಹಣ ಸಾಗಿಸ್ತಿದೆ: ಜೆಡಿಸ್‌ ನಾಯಕ ಆರೋಪ

ರಾಜ್ಯ ಕಾಂಗ್ರೆಸ್‌ ಸರ್ಕಾರ ಲೋಕಸಭಾ ಚುನಾವಣೆಗಾಗಿ ಹಣವನ್ನು ಏರ್‌ಲಿಫ್ಟ್‌ ಮಾಡುತ್ತಿದೆ ಎಂದು ಜೆಡಿಎಸ್‌ ನಾಯಕ ಸುರೇಶ್‌ಗೌಡ ಆರೋಪ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಮಂಡ್ಯ (ಆ.16): ರಾಜ್ಯದಲ್ಲಿ 300 ಕೋಟಿ ರೂ. ಕೃಷಿ ಸಚಿವ ಚಲುವರಾಯಸ್ವಾಮಿ ಒಬ್ಬರೇ ಲೂಟಿ ಮಾಡಿದ್ದಾರೆ. ಅಧಿಕಾರಿಗಳು ಹೇಳುವ ಮಾಹಿತಿ ಪ್ರಕಾರ ಕಾಂಗ್ರೆಸ್‌ನವರು ಹೈಕಮಾಂಡ್‌ಗೆ ಏರ್‌ಲಿಫ್ಟ್‌ ಮೂಲಕ ಹಣವನ್ನು ಕಳಿಸುತ್ತಿದೆ. ಸರ್ಕಾರಿ ಅಧಿಕಾರಿಗಳಲ್ಲಿ ಕೆಲವು ಐಎಎಸ್‌ ಅಧಿಕಾರಿಗಳೇ ಕರೆ ಮಾಡಿ, ಹಿಂದಿನ ಬಿಜೆಪಿ ಸರ್ಕಾರವಾದರೂ ಪರವಾಗಿಲ್ಲ, ಈಗ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಹೇಳುವುದು ನೋಡಿದರೆ ಬಿಜೆಪಿ ಸರ್ಕಾರ ಜೆಸಿಬಿ, ಹಿಟಾಚಿಗಳನ್ನು ಹಣವನ್ನು ದೋಚಿದ್ದರೆ, ಕಾಂಗ್ರೆಸ್‌ನವರು ಏರ್‌ಲಿಪ್ಟ್‌ ಮಾಡುತ್ತಿದ್ದಾರೆ. ಏರ್‌ಲಿಪ್ಟ್‌ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ ಎಂದು ನೆಲಮಂಗಲ ಮಾಜಿ ಶಾಸಕ ಸುರೇಶ್‌ಗೌಡ ಆರೋಪ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video