ಕಾಂಗ್ರೆಸ್ ಮುಂದೆ ಮೈತ್ರಿ ಪ್ರಸ್ತಾವನೆ ಮುಂದಿಟ್ಟ ಆಮ್ ಆದ್ಮಿ ಪಾರ್ಟಿ, ಸೀಟು ಹಂಚಿಕೆ ಚರ್ಚೆ!

ಇಂಡಿಯಾ ಒಕ್ಕೂಟದ ಒಳಗೆ ಮತ್ತೊಂದು ಮೈತ್ರಿಗೆ ಇದೀಗ ಕಾಂಗ್ರೆಸ್ ಹಾಗೂ ಆಪ್ ಮುಂದಾಗಿದೆ. ಸೀಟು ಹಂಚಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಮಾತುಕತೆ ಅಂತಿಮ ಹಂತ ತಲುಪಿದೆ.
 

Share this Video
  • FB
  • Linkdin
  • Whatsapp

ಲೋಕಸಭೆ ಚುನಾವಣೆ ಮುನ್ನ ಆಮ್ ಆದ್ಮಿ ಪಾರ್ಟಿ ಇದೀಗ ಮೈತ್ರಿ ಮಾತುಕತೆ ಪ್ರಸ್ತಾವನೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ. ಪಂಜಾಬ್, ಹರ್ಯಾಣ ಹಾಗೂ ಗುಜರಾತ್‌ನಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಎದಿರಿಸಲು ಆಮ್ ಆದ್ಮಿ ಪಾರ್ಟಿ ಪ್ರಸ್ತಾವನೆ ಮುಂದಿಟ್ಟಿದೆ. ಈ ಪ್ರಸ್ತಾವನೆ ಕಾಂಗ್ರೆಸ್ ಪಾಲಿಗೂ ವರವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಗೆ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಆಪ್ ಸೀಟು ಹಂಚಿಕೆ ಮಾಡಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video