'ನಾವು ಇಲ್ಲಿ ಕಣ್ಣೀರು ಹಾಕಲು ಬಂದಿಲ್ಲ, ಶಿರಾ ಜನತೆಯ ಕಣ್ಣೀರು ಒರೆಸಲು ಬಂದಿದ್ದೇವೆ'

ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕಳೆದ 2 ದಿನಗಳಿಂದ ಶಿರಾದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ತಂದೆ- ಮಗನ ಪ್ರಚಾರಕ್ಕೆ ಶಿರಾ ಸಾಕ್ಷಿಯಾಗಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಅ. 30): ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕಳೆದ 2 ದಿನಗಳಿಂದ ಶಿರಾದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ತಂದೆ- ಮಗನ ಪ್ರಚಾರಕ್ಕೆ ಶಿರಾ ಸಾಕ್ಷಿಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಕೆಲವು ದಿನಗಳಿಂದ ಶಿರಾದಲ್ಲಿ ನಾವೇ ಗೆದ್ವಿ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಮೆಯಲ್ಲಿದ್ದರು. ಆದರೆ ಈಗ ಶಿರಾದಲ್ಲಿ ಯಾವುದೇ ಹಳ್ಳಿ, ಯಾವುದೇ ಊರಿಗೆ ಹೋದ್ರೂ ಕೇಸರಿಕರಣವನ್ನು ನೋಡಬಹುದು. ಬಿಜೆಪಿ ಅಲೆ ಇಲ್ಲಿ ಹರಿಯುತ್ತಿದೆ. ಜೆಡಿಎಸ್, ಹಾಗೂ ಕಾಂಗ್ರೆಸ್‌ನವರು ಭರವಸೆ ಕೊಟ್ಟಂತೆ ನಿಮಗೆ ಮದಲೂರು ಕೆರೆಗೆ ನೀರು ತರಲು ಸಾಧ್ಯವಾಯ್ತಾ? ಎಂದು ಪ್ರಶ್ನಿಸಿದ್ದಾರೆ. 

'ಕೈ'ಗೆ ಮತ ಹಾಕಿದ್ರೆ ಡಿಕೆಶಿ ಸಿಎಂ ಆಗ್ತಾರಾ? ಜೆಡಿಎಸ್‌ಗೆ ವೋಟ್ ಹಾಕಿದ್ರೆ ಎಚ್‌ಡಿಕೆ ಸಿಎಂ ಆಗ್ತಾರಾ'?

ಶಿರಾ ಜನತೆ ಬಿಜೆಪಿಯ ಕೈ ಹಿಡಿದರೆ ಶಿರಾವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ. ನೀರಾವರಿಯನ್ನು ಅಭಿವೃದ್ಧಿ ಮಾಡುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬರೀ ಕಣ್ಣೀರು ಹಾಕಿ ಮತಬೇಟೆ ನಡೆಸುತ್ತಾರೆ. ಬಿಜೆಪಿ ಇಲ್ಲಿ ಕಣ್ಣೀರು ಹಾಕಲು ಬಂದಿಲ್ಲ. ಕಣ್ಣೀರು ಒರೆಸಲು ಬಂದಿದೆ' ಎಂದು ವಿಜಯೇಂದ್ರ ಹೇಳಿದ್ದಾರೆ. 

Related Video