
ಸುಧಾಕರ್ ಆಯ್ತು, ಮತ್ತೊಬ್ಬ ಅನರ್ಹ ಶಾಸಕನ ಕ್ಷೇತ್ರಕ್ಕೆ BSY ಕೊಟ್ರು ಬಂಪರ್!
ಉಪ- ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ, ಅನರ್ಹ ಶಾಸಕರ ಕ್ಷೇತ್ರಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಕನಕಪುರದಿಂದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿದ್ದಾಯ್ತು, ಚಿಕ್ಕಬಳ್ಳಾಪುರಕ್ಕೆ ಹೊಸ ತಾಲೂಕು ಘೋಷಣೆ ಮಾಡಿದ್ದಾಯ್ತು. ಈಗ ಮತ್ತೊಬ್ಬ ಅನರ್ಹ ಶಾಸಕನ ಕ್ಷೇತ್ರದತ್ತ ಯಡಿಯೂರಪ್ಪ ವಿಶೇಷ ಕಾಳಜಿ ತೊರಿದ್ದಾರೆ.
ಬೆಂಗಳೂರು (ನ.02): ಉಪ- ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ, ಅನರ್ಹ ಶಾಸಕರ ಕ್ಷೇತ್ರಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕನಕಪುರದಿಂದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿದ್ದಾಯ್ತು, ಚಿಕ್ಕಬಳ್ಳಾಪುರಕ್ಕೆ ಹೊಸ ತಾಲೂಕು ಘೋಷಣೆ ಮಾಡಿದ್ದಾಯ್ತು. ಈಗ ಮತ್ತೊಬ್ಬ ಅನರ್ಹ ಶಾಸಕನ ಕ್ಷೇತ್ರದತ್ತ ಯಡಿಯೂರಪ್ಪ ವಿಶೇಷ ಕಾಳಜಿ ತೊರಿದ್ದಾರೆ.
17 ಶಾಸಕರ ರಾಜೀನಾಮೆ/ ಅನರ್ಹತೆಯಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದ್ದು ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ. ಮಸ್ಕಿ ಮತ್ತು ಆರ್.ಆರ್. ನಗರ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟಿನಲ್ಲಿರುವ ಕಾರಣ ಚುನಾವಣಾ ದಿನಾಂಕ ಪ್ರಕಟವಾಗಿಲ್ಲ.