
ಗ್ರೇಟೆಸ್ಟ್ ಬ್ಯಾಂಕ್ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!
ಬೀದರ್ನ ಭಯಾನಕ ರಾಬರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದ್ರೆ ಈ ರಾಬಿರಿ ನಡೆದು 24 ಗಂಟೆಗಳಲ್ಲೇ ನಮ್ಮದೇ ರಾಜ್ಯದಲ್ಲಿ ಮತ್ತೊಂದು ಡೆಡ್ಲಿ ಬ್ಯಾಂಕ್ ರಾಬರಿ ನಡೆದುಬಿಟ್ಟಿದೆ
ಜಸ್ಟ್ 70 ಸೆಕೆಂಡ್. ಒಂದು ದೊಡ್ಡ ದರೋಡೆ ನಡೆದೇಬಿಟ್ಟಿತ್ತು. ಬ್ಯಾಂಕ್ ATM ತುಂಬಿಸಲು ಹಣ ಹೊತ್ತ ವ್ಯಾನ್ ಬರುತ್ತೆ. ಆದ್ರೆ ವ್ಯಾನ್ನಿಂದ ಹಣ ಹೊರಗೆ ಬರ್ತಿದ್ದಂತೆ ಅಲ್ಲಿಗೆ ಬರೋ ದರೋಡೆಕೋರರು. ಸಿಬ್ಬಂದಿಗಳ ಮೇಲೆ ಅಟ್ಯಾಕ್ ಹಣ ದರೋಡೆ. ಈ ರೀತಿಯ ಸೀನ್ಗಳನ್ನ ನಾವು ಸಿನಿಮಾಗಳಲ್ಲಿ ನೋಡಿದ್ವಿ. ಆದ್ರೆ ಇವತ್ತು ನಮಗೆ ರಿಯಲ್ ಲೈಫ್ನಲ್ಲೇ ಅನುಭವವಾಗಿಬಿಟ್ಟಿದೆ.
ಯಸ್ , ನಾವು ಇವತ್ತು ಬೀದರ್ನ ಡೆಡ್ಲಿ ಬ್ಯಾಂಕ್ ರಾಬರಿಯ ಕೇಸ್ ಬಗ್ಗೆ ಹೇಳಲು ಹೊರಡಿದ್ದೇವೆ. ಖದೀಮರು ಹೇಗೆ ಆಪರೇಷನ್ ಮಾಡಿದ್ರು. ನಂತರ ಹಣ ಕೊಳ್ಳೆ ಹೊಡೆದು ಹೇಗೆ ಎಸ್ಕೇಪ್ ಆದ್ರು? ಪೊಲೀಸರು ಈ ಕೇಸ್ನಲ್ಲಿ ಮಾಡಿದ ಎಡವಟ್ಟುಗಳ ಕಂಪ್ಲೀಟ್ ಮಾಹಿತಿಯೇ ಇವತ್ತಿನ ಎಫ್.ಐ.ಆರ್