News Hour: ಪಾದಯಾತ್ರೆಗಿಳಿದ ಕೈ ನಾಯಕರ ಮೇಲೆ ಕೇಸು.. ಕ್ಷಮೆ ಕೇಳಿದ ರೇಣುಕಾ!

* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೊರೋನಾ 
*ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ಪ್ರಕರಣ
* ಪಾದಯಾತ್ರೆ ಮಾಡಿದವರ ಮೇಲೆ ಕೇಸು ಬಿತ್ತು!
* ಎಚ್ಚೆತ್ತು ಕ್ಷಮೆ ಕೇಳಿದ ರೇಣುಕಾಚಾರ್ಯ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 11) ಮೇಕೆದಾಟು (Mekedatu Padayatra) ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ (Congress) ನಾಯಕರ ಮೇಲೆ ಕೊರೋನಾ (Coronavirus) ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಸಂಬಂಧ ಎಫ್‌ಐಆರ್ (FIR) ದಾಖಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೂವತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ.

Karnataka Cabinet ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆ, ಬಾಂಬ್ ಸಿಡಿಸಿದ ಯತ್ನಾಳ್

ಸಚಿವ ಅಶೋಕ್ (R Ashok) ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೂ ಕೊರೋನಾ ದೃಢಪಟ್ಟಿದೆ. ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದು, ಸಂಪರ್ಕಿತರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.ಕೊರೋನಾ ವಾರಿಯರ್ ಆಗಿ ಗುರುತಿಸಿಕೊಂಡಿದ್ದ ಹೊನ್ನಾಳಿ ಶಾಸಕ ಕ್ಷಮೆ ಕೇಳುವಂತಹ ಕೆಲಸ ಮಾಡಿಕೊಂಡಿದ್ದಾರೆ. ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ ಬಗ್ಗೆ ರೇಣುಕಾಚಾರ್ಯ ಕ್ಷಮೆ ಕೇಳಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

Related Video