Karnataka Cabinet ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆ, ಬಾಂಬ್ ಸಿಡಿಸಿದ ಯತ್ನಾಳ್

* ಮತ್ತೊಂದು ಬ್ರೇಕಿಂಗ್ ಸುದ್ದಿ ಕೊಟ್ಟ ಯತ್ನಾಳ್
* ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆ
* ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

major Changes In karnataka Cabinet after Sankranti Says Basangowda Patil Yatnal rbj

ಬಾಗಲಕೋಟೆ, (ಜ.10): ಕೊರೋನಾ ಮೂರನೇ ಅಲೆ ಹಾಗೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಗಲಾಟೆ ಮಧ್ಯೆ ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಹೌದು...ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangowda Patil Yatnal)  ಮತ್ತೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.

Karnataka Politics ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಗುಡುಗಿದ ಯತ್ನಾಳ್

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಯತ್ನಾಳ್, ಸಂಕ್ರಾಂತಿ ನಂತರ ಪಕ್ಷದಲ್ಲಿ ಮತ್ತು ಸಕಾ೯ರ ಸಚಿವ ಸಂಪುಟದಲ್ಲಿ (Karnataka Cabinet ) ಬದಲಾವಣೆಗಳಾಗಲಿವೆ. ಸಚಿವ ಸಂಪುಟಕ್ಕೆ ಜೀವ ತುಂಬಬೇಕೆನ್ನುವ ಆಸೆ ಕೇಂದ್ರ ಮಂಡಳಿಗಿದೆ. ಸಂಕ್ರಾಂತಿ ನಂತರ ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆ ಮಾಡಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ನೂತನ ಸಚಿವ ಸಂಪುಟಕ್ಕೆ ಯತ್ನಾಳ್ ಸೇತಾ೯ರ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ,  ನಾನೆಂದು ಸಚಿವ ಸ್ಥಾನ ಕೇಳಿದವನಲ್ಲ. ಕೇಳೋಕೆ ಹೋಗಲ್ಲ. ಮಂತ್ರಿ ಮಾಡ್ರಿ ಅಂತ ಯಾರ ಕೈಕಾಲು ಹಿಡಿಯೋದಿಲ್ಲ‌. ಅದೇನು ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ವಾಜಪೇಯಿ ಸಕಾ೯ರದಲ್ಲಿ ಅವರೇ ಕರೆದು ಮಂತ್ರಿ ಮಾಡಿದ್ರು. ನಾನೆಂದು ಲಾಭಿ ಮಾಡಿಲ್ಲ.. ನಾವು ಅನಂತಕುಮಾರ್, ಪ್ರಮೋದ ಮಹಾಜನ್ ಅವಾಗ ಆಗಿದ್ವಿ. ನಮ್ಮ ಸೀನಿಯಾರಿಟಿ ನೋಡಿದ್ರೆ ನಾವು ಈಗಲೂ ಮಂತ್ರಿ ಆಗಬೇಕಾಗಿತ್ತು ಎಂದರು.

ಹಂಗೇ ನೋಡಿದ್ರೆ ಅನಂತಕುಮಾರ್, ಯಡಿಯೂರಪ್ಪ ಬಿಟ್ಟರೆ ಕನಾ೯ಟಕದಲ್ಲಿ ನಾನೇ ಸೀನಿಯರ್. ಕೇಂದ್ರದಲ್ಲಿ ರಾಜ್ಯದಿಂದ 4ನೇ ನಂಬರ್ ಮಂತ್ರಿ ಆದವನು ನಾನೇ ಎಂದು ಹೇಳಿದರು.

ಈ ಹಿಂದೆಯೂ ಹೇಳಿದ್ದ ಯತ್ನಾಳ್
ಸಂಕ್ರಾಂತಿ ಹಬ್ಬದೊಳಗೆ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಯಾಗಲಿದೆ. ವಿಜಯಪುರಕ್ಕೂ ಸಚಿವ ಸ್ಥಾನ ದೊರೆಯಲಿದೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಈ ಹಿಂದೆಯೇ ಹೇಳಿದ್ದರು.

ವಿಜಯಪುರ ಜಿಲ್ಲೆಗೆ ಸೂಕ್ತ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸ ಇದೆ. ನಾನು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಭೇಟಿಯಾಗುವುದಿಲ್ಲ. ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಳಿ ಎಲ್ಲರ ಲೆಕ್ಕಪತ್ರ ಇದೆ. ಲಾಬಿ ಮಾಡುವ ಅಗತ್ಯ ಪಕ್ಷಕ್ಕಿಲ್ಲ. ನಮ್ಮ ಪಕ್ಷದ ಶಾಸಕರ ಅರ್ಹತೆ ಬಗ್ಗೆ ನಾಯಕರಿಗೆ ಗೊತ್ತಿದೆ. ಅದರ ಆಧಾರದ ಮೇಲೆ ಸಚಿವ ಸ್ಥಾನ ಲಭಿಸಲಿದೆ ಎಂದಿದ್ದರು.

ಮಂತ್ರಿಯಾಗುವ ಸುಳಿವು ಕೊಟ್ಟಿದ್ದ ಯತ್ನಾಳ್
ಸಂಕ್ರಾಂತಿ ಹಬ್ಬದೊಳಗೆ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಯಾಗಲಿದೆ. ವಿಜಯಪುರಕ್ಕೂ ಸಚಿವ ಸ್ಥಾನ ದೊರೆಯಲಿದೆ ಎಂದು ಪರೋಕ್ಷವಾಗಿ ತಾವು ಮಂತ್ರಿಯಾಗುತ್ತೇನೆಂದು ಸುಳಿವು ಕೊಟ್ಟಿದ್ದರು.

ಸಚಿವ ಸಂಪುಟ ಬದಲಾವಣೆ ವೇಳೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗಲಿದೆ. ಹೆಚ್ಚು ಕ್ರಿಯಾಶೀಲ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು. ಜ.8, 9ರಂದು ಪಕ್ಷದ ಬೈಠಕ್ ನಡೆಯಲಿದೆ. ಅಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದಿದ್ದರು.

ವಿಜಯಪುರ ಜಿಲ್ಲೆಗೆ ಸೂಕ್ತ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸ ಇದೆ. ನಾನು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಭೇಟಿಯಾಗುವುದಿಲ್ಲ. ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಳಿ ಎಲ್ಲರ ಲೆಕ್ಕಪತ್ರ ಇದೆ. ಲಾಬಿ ಮಾಡುವ ಅಗತ್ಯ ಪಕ್ಷಕ್ಕಿಲ್ಲ. ನಮ್ಮ ಪಕ್ಷದ ಶಾಸಕರ ಅರ್ಹತೆ ಬಗ್ಗೆ ನಾಯಕರಿಗೆ ಗೊತ್ತಿದೆ. ಅದರ ಆಧಾರದ ಮೇಲೆ ಸಚಿವ ಸ್ಥಾನ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios