
ಜನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರೀ ಬೆಂಬಲ: ರಸ್ತೆಗಳೆಲ್ಲ ಖಾಲಿ ಖಾಲಿ
ಜನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರೀ ಬೆಂಬಲ|ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ ಕೇಂದ್ರ ಬಸ್ ನಿಲ್ದಾಣ| ಹೋಟೆಲ್, ಟೀ ಸ್ಟಾಲ್, ಅಂಗಡಿ ಮುಂಗಟ್ಟುಗಳು ಬಂದ್|
ವಿಜಯಪುರ[ಮಾ.22]: ಜನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರೀ ಬೆಂಬಲ ವ್ಯೆಕ್ತವಾಗಿದೆ. ಬೆಳಿಗ್ಗೆ ವಾಕಿಂಗ್ ಗೂ ಜನ ಹೊರಬಂದಿಲ್ಲ. ಪ್ರಯಾಣಿಕರಿಲ್ಲದೆ ನಗರದ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ನಗರದ ಪ್ರಮುಖ ರಸ್ತೆಗಳೆಲ್ಲವು ಖಾಲಿ ಖಾಲಿಯಾಗಿವೆ. ಬಸ್ ಸಂಚಾರ ಇಲ್ಲ, ಪ್ರಯಾಣಿಕರಿಲ್ಲದೆ ಆಟೋ ಸಂಚಾರ ಸಂಪೂರ್ಣವಾಗಿ ನಿಂತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜನತಾ ಪವರ್: ಯಾವ ಬಂದ್‌ಗೂ ಕೇರ್ ಮಾಡದ ಬೆಂಗ್ಳೂರು ಇವತ್ತು ಟೋಟಲ್ ಸೈಲೆಂಟ್
ನಗರದಲ್ಲಿರುವ ಹೋಟೆಲ್, ಟೀ ಸ್ಟಾಲ್, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಜನರು ಮನೆ ಬಿಟ್ಟು ಹೊರಗಡೆ ಬಂದಿಲ್ಲ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂಗೆ ಭಾರೀ ಬೆಂಬಲ ವ್ಯೆಕ್ತವಾಗಿದೆ.