
ಯಾದಗಿರಿ: ಸಚಿವ ಅಶೋಕ್ ಕಾಟಾಚಾರಕ್ಕೆ ನೆರೆ ವೀಕ್ಷಣೆ, ಎರಡೇ ನಿಮಿಷಯದಲ್ಲಿ ಎಲ್ಲವೂ ಮುಗೀತು..!
ಕಾಟಾಚಾರಕ್ಕೆ ನೆರೆ ವೀಕ್ಷಣೆ ಮಾಡಿದ ಕಂದಾಯ ಸಚಿವ ಆರ್. ಅಶೋಕ್| ಸಚಿವರ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ| ದೇವಾಪುರ ಸೇತುವೆ ಬಳಿ ಸಚಿವರಿಂದ ಪ್ರವಾಹ ಪ್ರದೇಶವನ್ನ ವೀಕ್ಷಣೆ|
ಯಾದಗಿರಿ(ಆ.27): ಕಂದಾಯ ಸಚಿವ ಆರ್. ಅಶೋಕ್ ಅವರು ಕೇವಲ ಕಾಟಾಚಾರಕ್ಕೆ ನೆರೆ ವೀಕ್ಷಣೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಚಿವ ಆರ್. ಅಶೋಕ ಕೇವಲ ಎರಡೇ ನಿಮಿಷದಲ್ಲಿ ನೆರೆ ಪ್ರದೇಶದ ವೀಕ್ಷಣೆಯನ್ನ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೀದರ್: ಡಿಸಿ ಕಚೇರಿ ಮುಂದೆ ಸತ್ತ ಹಾವು ಇಟ್ಟು ಪ್ರತಿಭಟನೆ
ಜಿಲ್ಲೆಯ ದೇವಾಪುರ ಸೇತುವೆ ಬಳಿ ಸಚಿವರು ಕಾಟಾಚಾರಕ್ಕೆ ಪ್ರವಾಹ ಪ್ರದೇಶವನ್ನ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸಚಿವರಿಗೆ ಶಾಸಕ ರಾಜೂಗೌಡ ಅವರು ಕೂಡ ಭೇಟಿ ನೀಡಿದ್ದರು.