Asianet Suvarna News Asianet Suvarna News

ಪ್ರೆಸ್‌ಕ್ಲಬ್‌ನಲ್ಲಿ ನವೀಕೃತ ಸಭಾಂಗಣ, ಮಾಧ್ಯಮ ಕೇಂದ್ರ, ಡಿಜಿಟಲ್‌ ಲೈಬ್ರರಿಗೆ ಚಾಲನೆ

*  ವಾರ್ಷಿಕ ಪ್ರಶಸ್ತಿ ಪ್ರದಾನ 
*  ಸಂಕಷ್ಟದ ಸಮಯದಲ್ಲೂ ಪತ್ರಿಕೋದ್ಯಮ ನಡೆಸುವ ಜವಾಬ್ದಾರಿಯನ್ನ ಯಾರೂ ಮರೆಯಬಾರದು
* ಸಂಕಷ್ಟದಲ್ಲಿರುವ ಪತ್ರಕರ್ತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ
 

ಬೆಂಗಳೂರು(ಏ.21): ಬೆಂಗಳೂರಿನ ಪ್ರತಿಷ್ಠಿತ ಪ್ರೆಸ್‌ ಕ್ಲಬ್‌ನಲ್ಲಿ ನಿರ್ಮಾಣಗೊಂಡಿರುವ ಡಿಜಿಟಲ್‌ ಲೈಬ್ರರಿ, ಮಾಧ್ಯಮ ಕೇಂದ್ರ ಹಾಗೂ ಫ್ಯಾಮಿಲಿ ಲಾಂಜ್‌ ಲೋಕಾರ್ಪಣೆಗೊಂಡಿದೆ. ಪತ್ರಕರ್ತ ಜಾರ್ಜ್‌, ಪಿ. ರಾಮಯ್ಯ ಅವರ ಸಮ್ಮುಖದಲ್ಲಿ ಸಂಸದ ಪಿ.ಸಿ. ಮೋಹನ್‌ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ವಾರ್ಷಿಕ ಪ್ರಶಸ್ತಿಗಳನ್ನ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಪಿ. ರಾಮಯ್ಯ ಅವರು, ಸಂಕಷ್ಟದ ಸಮಯದಲ್ಲೂ ಜನಹಿತದ ಪತ್ರಿಕೋದ್ಯಮ ನಡೆಸುವ ಜವಾಬ್ದಾರಿಯನ್ನ ಯಾರೂ ಮರೆಯಬಾರದು ಅಂತ ಹೇಳಿದ್ದಾರೆ. ಸಂಕಷ್ಟದಲ್ಲಿರುವ ಪತ್ರಕರ್ತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಅಂತ ಹೇಳಿದ್ದಾರೆ. 

ಹಿಜಾಬ್‌, ಹಲಾಲ್‌ ಬಳಿಕ ಈಗ ಮಸೀದಿಗಳ ಮೈಕ್‌ ವಿರುದ್ಧ ಹಿಂದೂ ಸಂಘಟನೆಗಳ ಕಿಚ್ಚು!

Video Top Stories