Amarnath Cloudburst: ಮೇಘಸ್ಫೋಟದ ಸ್ಥಳದಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಗ್ರೌಂಡ್‌ ರಿಪೋರ್ಟ್‌

ಅಮರನಾಥ ಗುಹೆ ಬಳಿ ನಡೆದ ಮೇಘಸ್ಫೊಟದಲ್ಲಿ 16 ಮಂದಿ ಮೃತಪಟ್ಟಿದ್ದಾರೆ. 50 ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ. ಅಮರನಾಥದಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಕೊಡುತ್ತಿದೆ. 

Share this Video
  • FB
  • Linkdin
  • Whatsapp

ಅಮರನಾಥ ಗುಹೆ ಬಳಿ ನಡೆದ ಮೇಘಸ್ಫೊಟದಲ್ಲಿ 16 ಮಂದಿ ಮೃತಪಟ್ಟಿದ್ದಾರೆ. 50 ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ. ಅಮರನಾಥದಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಕೊಡುತ್ತಿದೆ. ಪ್ರಾಕೃತಿಕ ಅಸಹಕಾರದಿಂದ, ಆಗಾಗ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 

ಅಮರನಾಥ ಯಾತ್ರೆಗೆ ತೆರಳಿರುವ ಕಲಬುರಗಿಯ 55 ಮಂದಿ ಭಕ್ತರ ತಂಡ ಮೇಘಸ್ಫೋಟದ ಅಪಾಯದಿಂದ ಬಚಾವ್‌ ಆಗಿದ್ದು ಸುರಕ್ಷಿತವಾಗಿದೆ. ಬಬಲಾದ ಮಠದ ಶ್ರೀಗಳು ಸೇರಿ 14 ಜನ ಭಕ್ತರ ತಂಡ, ಗಾಣಗಾಪುರದ 11 ಜನ ಭಕ್ತರು ಮತ್ತು ಕಲಬುರಗಿಯ 30 ಜನರ ತಂಡ ಸೇರಿ ಎಲ್ಲ 55 ಜನರು ಅಮರನಾಥ ಯಾತ್ರೆಗೆ ಹೋಗಿದ್ದು ಅವರೆಲ್ಲರೂ ಸುರಕ್ಷಿತವಾಗಿದ್ದಾರೆಂದು ಗೊತ್ತಾಗಿದೆ. ಅಮರನಾಥ್‌ ಯಾತ್ರೆ ಕೈಗೊಂಡಿದ್ದ ಮೈಸೂರು ನಗರದ 10 ಮಂದಿ ವಕೀಲರ ತಂಡವು ಸುರಕ್ಷಿತವಾಗಿ ದೆಹಲಿ ತಲುಪಿದ್ದಾರೆ.

Related Video